ಕೋವಿಡ್-19: ಬೆಂಗಳೂರಿನಲ್ಲಿ ಕಂಟೈನ್ ಮೆಂಟ್ ಜೋನ್, ಆಸ್ಪತ್ರೆ ದಾಖಲಾತಿ ವೇಗವಾಗಿ ಹೆಚ್ಚಳ

ಒಂದು ಕಡೆ ಆರೋಗ್ಯ ಇಲಾಖೆಯ ಇತ್ತೀಚಿನ ಕೋವಿಡ್ -19 ಬುಲೆಟಿನ್ ಭರವಸೆ ನೀಡುತ್ತಿದ್ದರೆ ಮತ್ತೊಂದು ಕಡೆ ಬೆಂಗಳೂರಿನ ಗ್ರೌಂಡ್ ರಿಯಾಲಿಟಿ ಹೆಚ್ಚು ಆತಂಕಕಾರಿ ಚಿತ್ರಣ ನೀಡುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ಕಡೆ ಆರೋಗ್ಯ ಇಲಾಖೆಯ ಇತ್ತೀಚಿನ ಕೋವಿಡ್ -19 ಬುಲೆಟಿನ್ ಭರವಸೆ ನೀಡುತ್ತಿದ್ದರೆ ಮತ್ತೊಂದು ಕಡೆ ಬೆಂಗಳೂರಿನ ಗ್ರೌಂಡ್ ರಿಯಾಲಿಟಿ ಹೆಚ್ಚು ಆತಂಕಕಾರಿ ಚಿತ್ರಣ ನೀಡುತ್ತಿದೆ. 

ಹೌದು, ನಗರದಲ್ಲಿ ಕಂಟೈನ್‌ಮೆಂಟ್ ಜೋನ್ ಗಳ ಸಂಖ್ಯೆ ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅತೀ ವೇಗವಾಗಿ ಹೆಚ್ಚಾಗುತ್ತಿದೆ. ಒಂದು ತಿಂಗಳಲ್ಲಿ - ಜುಲೈ 10 ರಿಂದ ಆಗಸ್ಟ್ 10ರ ವರೆಗೆ ನಗರದಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 47 ರಿಂದ 160 ಕ್ಕೆ ಏರಿದೆ. 

ಮಹಾದೇವಪುರದಲ್ಲಿ ಅತಿ ಹೆಚ್ಚು ಅಂದರೆ 42 ಕಂಟೈನ್‌ಮೆಂಟ್ ಜೋನ್ ಗಳಿವೆ. ಪೂರ್ವ ವಲಯ 35, ಬೊಮ್ಮನಹಳ್ಳಿ 24, ದಕ್ಷಿಣ ಮತ್ತು ಯಲಹಂಕ ವಲಯದಲ್ಲಿ 20, ಆರ್‌ಆರ್ ನಗರದಲ್ಲಿ 10, ಪಶ್ಚಿಮ ಮತ್ತು ದಾಸರಹಳ್ಳಿ ಕ್ರಮವಾಗಿ 6 ​​ಮತ್ತು 3 ಕಂಟೈನ್‌ಮೆಂಟ್ ಜೋನ್ ಗಳಿವೆ.

"ನಾವು ಕಂಟೈನ್‌ಮೆಂಟ್ ಜೋನ್ ಗಳನ್ನು ಸೀಲ್ ಮಾಡುತ್ತಿದ್ದೇವೆ, ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳಿಗೆ ಮುದ್ರೆ ಹಾಕುತ್ತಿದ್ದೇವೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸುತ್ತಿದ್ದೇವೆ ಮತ್ತು ವೈದ್ಯಕೀಯ ಸಮಾಲೋಚನೆಗಳನ್ನು ನಡೆಸುತ್ತಿದ್ದೇವೆ. 26 ಅಪಾರ್ಟ್‌ಮೆಂಟ್‌ಗಳು, 15 ವೈಯಕ್ತಿಕ ಮನೆಗಳು ಮತ್ತು ಒಂದು ಹಾಸ್ಟೆಲ್‌ ಅನ್ನು ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಲಾಗಿದೆ ಎಂದು ಮಹದೇವಪುರ ವಲಯದ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಾಚಲಪತಿ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಕೆಲವು ಆಸ್ಪತ್ರೆಗಳು ಕೋವಿಡ್ ಸೋಂಕಿತರ ದಾಖಲಾತಿ ಹೆಚ್ಚಳವಾಗುತ್ತಿರುವುದನ್ನು ವರದಿ ಮಾಡುತ್ತಿವೆ. ವೈಜ್ಞಾನಿಕ ಮಂಡಳಿಯ ಮುಖ್ಯಸ್ಥ ಮತ್ತು ಮಣಿಪಾಲ ಆಸ್ಪತ್ರೆಗಳ ಅಧ್ಯಕ್ಷ-ಜೆರಿಯಾಟ್ರಿಕ್ ಮೆಡಿಸಿನ್ ಮತ್ತು ಕ್ರಿಟಿಕಲ್ ಕೇರ್ ಸಪೋರ್ಟ್ ಟೀಮ್(CCST) ನ ಸದಸ್ಯರಾದ ಡಾ.ಅನೂಪ್ ಅಮರನಾಥ್ ಅವರು ಹೇಳಿದ್ದಾರೆ.

ಕಳೆದ 5-6 ದಿನಗಳಲ್ಲಿ, ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 15 ರಿಂದ ಶೇ. 30ಕ್ಕೆ ಏರಿಕೆಯಾಗಿದೆ ಎಂದು ಡಾ.ಅನೂಪ್ ಅಮರನಾಥ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com