ಅಕ್ಟೋಬರ್ ವೇಳೆಗೆ ನಗರದಲ್ಲಿ 90 ಎಲೆಕ್ಟ್ರಿಕ್ ಬಸ್'ಗಳಿಗೆ ಚಾಲನೆ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಹುಕಾಲದ ಕನಸು ನನಸಾಗುವ ಕನಸು ನನಸಾಗುವ ಕಾಲ ಹತ್ತಿರಬಂದಿದೆ. ಮುಂದಿನ ಅಕ್ಟೋಬರ್ ತಿಂಗಳ ವೇಳೆಗೆ ನಗರದಲ್ಲಿ 90 ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಯಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಹುಕಾಲದ ಕನಸು ನನಸಾಗುವ ಕನಸು ನನಸಾಗುವ ಕಾಲ ಹತ್ತಿರಬಂದಿದೆ. ಮುಂದಿನ ಅಕ್ಟೋಬರ್ ತಿಂಗಳ ವೇಳೆಗೆ ನಗರದಲ್ಲಿ 90 ಎಲೆಕ್ಟ್ರಿಕ್ ಬಸ್ ಗಳು ರಸ್ತೆಗಿಳಿಯಲಿವೆ. 

ಈ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಗುರುವಾರ ಮಾಹಿತಿ ನೀಡಿದ್ದು, ಮೆಟ್ರೋ ಪ್ರಯಾಣಿಕರಿಗೆ ಲಾಸ್ಟ್‌ ಮೈಲ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಗರದಲ್ಲಿ ಅಕ್ಟೋಬರ್ ವೇಳೆಗೆ 90 ಎಲೆಕ್ಟ್ರಿಕ್ ಬಸ್‌ಗಳು ಸಂಚಾರ ಆರಂಭಿಸಲಿವೆ ಎಂದು ತಿಳಿಸಿದೆ. 

ರೂ.130 ಕೋಟಿ ವೆಚ್ಚದ ಈ ಯೋಜನೆ ಬಸ್'ಗಳಿಗೆ ಬಿಎಂಟಿಸಿ, ಸ್ಮಾರ್ಟ್ ಸಿಟಿ ಬೆಂಗಳೂರು ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಚಾಲನೆ ನೀಡಲಿದೆ

ಪ್ರಸ್ತುತ ಇರುವ ಬಸ್ಸುಗಳನ್ನು ಕ್ರಮೇಣವಾಗಿ ಎಲೆಕ್ಟ್ರಿಕ್ ಬಸ್ ಗಳಾಗಿ ಬದಲಾಯಿಸುವ ಯೋಜನೆಯನ್ನೂ ಬಿಎಂಟಿಸಿ ಹೊಂದಿದೆ ಎಂದು ತಿಳಿದುಬಂದಿದೆ. 

ಬಿಎಂಟಿಸಿ ಅಧ್ಯಕ್ಷ ಎನ್ ಎಸ್ ನಂದೀಶ ರೆಡ್ಡಿಯವರು ಮಾತನಾಡಿ, ಕೆ.ಆರ್.ಪುರಂ. ಯಲಹಂಕ ಮತ್ತು ರಾಜಾಜಿನಗರದಲ್ಲಿ ಮೂರು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಕೆಲಸಗಳಾಗುತ್ತಿವೆ. ಇದು ಕೇವಲ ಆರಂಭವಷ್ಟೇ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಾ ರಾಜು ಎಮ್ ಟಿ ಅವರು ಮಾತನಾಡಿ, ಯೋಜನೆಯ ಮೂಲಮಾದರಿ ಸಿದ್ಧವಾದ ಬಳಿಕ ಸುರಕ್ಷತಾ ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಲಾಗುತ್ತದೆ. ಮೆಟ್ರೋ ನಿಲ್ದಾಣಗಳಲ್ಲಿಯೂ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com