ಕೊರೋನಾ 3ನೇ ಅಲೆ ತಗ್ಗಿಸಲು ತಜ್ಞರ ಸಲಹೆ ಪಡೆದು ನಿರ್ಧಾರ; ತುರ್ತು ಸಭೆ ಕರೆದ ಸಿಎಂ; ಅಂಗಾಂಗ ದಾನಕ್ಕೆ ಬೊಮ್ಮಾಯಿ ಕರೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ 3ನೇ ಅಲೆ ಏಳುವ ಲಕ್ಷಣ ದಟ್ಟವಾಗಿ ಕಾಡುತ್ತಿದೆ. ಮಕ್ಕಳಲ್ಲಿ ವಿಶೇಷವಾಗಿ ಕಳೆದ 10 ದಿನಗಳಿಂದ ಕೊರೋನಾ ಮಹಾಮಾರಿ ಕಾಣಿಸಿಕೊಳ್ಳುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಉಡುಪಿ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ 3ನೇ ಅಲೆ ಏಳುವ ಲಕ್ಷಣ ದಟ್ಟವಾಗಿ ಕಾಡುತ್ತಿದೆ. ಮಕ್ಕಳಲ್ಲಿ ವಿಶೇಷವಾಗಿ ಕಳೆದ 10 ದಿನಗಳಿಂದ ಕೊರೋನಾ ಮಹಾಮಾರಿ ಕಾಣಿಸಿಕೊಳ್ಳುತ್ತಿದೆ.

ರಾಜ್ಯದಲ್ಲಿ ಕೊರೊನಾ 3ನೇ ಅಲೆ ತಗ್ಗಿಸಲು ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಇಂದು ಬೆಳಗ್ಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಇಂದು ಬೆಂಗಳೂರಿಗೆ ಬಂದ ತಕ್ಷಣ ತಜ್ಞರ ತುರ್ತು ಸಭೆ ಕರೆದಿದ್ದಾರೆ. ತಜ್ಞರ ವರದಿ ಮತ್ತು ಅವರ ಅಭಿಪ್ರಾಯ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹೆಚ್ಚಿನ ಮಂದಿ ಅಂಗಾಂಗ ದಾನಕ್ಕೆ ಮುಂದೆ ಬನ್ನಿ: ಇಂದು ವಿಶ್ವ ಅಗಾಂಗ ದಿನವಾಗಿದ್ದು, ಅಂಗಾಂಗ ದಾನ ಮಾಡುವುದಿರಿಂದ ಮತ್ತು ಅದನ್ನು ಕಸಿ ಮಾಡುವುದರಿಂದ ಅನೇಕ ಜೀವನಗಳನ್ನು ಉಳಿಸಬಹುದು ಮತ್ತು ಅನೇಕರ ಬಾಳಿಗೆ ಬೆಳಕಾಗುತ್ತದೆ. ಅದು ಹೃದಯ, ಕಿಡ್ನಿ, ಯಕೃತ್ ಹೀಗೆ ಬೇರೆ ಬೇರೆ ಅಂಗಾಂಗಗಳ ಯಶಸ್ವಿಯಾಗಿ ಕಸಿಯಾಗುತ್ತಿದೆ. ಹೀಗಿರುವಾಗ ಹೆಚ್ಚಿನ ಮಂದಿ ಅಂಗಾಂಗ ದಾನಗಳಿಗೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಬಹುದು, ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡುತ್ತಿದ್ದೇನೆ, ನೀವು ಕೂಡ ಮಾಡಿ ಎಂದು ರಾಜ್ಯದ ಜನತೆಗೆ ಸಿಎಂ ಕರೆ ನೀಡಿದರು.

ಜೀವ ಹೋದ ಕೂಡಲೇ ನಮ್ಮ ಅಂಗಾಂಗಳಿಂದ ಇನ್ನೊಂದು ಜೀವದ ಬದುಕಿಗೆ ಬೆಳಕಾಗಿ ದಾರಿದೀಪವಾಗುವುದಾದರೆ ನಾವ್ಯಾಕೆ ನಮ್ಮ ಅಂಗಾಂಗಳನ್ನು ಮಣ್ಣು ಮಾಡದೆ ದಾನ ಮಾಡಬಾರದು, ಈ ನಿಟ್ಟಿನಲ್ಲಿ ಜನರು ಯೋಚಿಸಿ ಅಂಗಾಂಗ ದಾನಕ್ಕೆ ಸಹಿ ಹಾಕಲು ಮುಂದೆ ಬನ್ನಿ ಎಂದು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com