ಚಿಕ್ಕಬಳ್ಳಾಪುರ: 41 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಕದ್ದ ವಸ್ತು, ಚಿನ್ನಾಭರಣ ಮಾಲೀಕರಿಗೆ ಹಸ್ತಾಂತರ!
ಜನರು ತಮ್ಮ ಆಸ್ತಿ ಮತ್ತು ವಂಚಕರ ಬಗ್ಗೆ ಜಾಗೃತರಾಗಿರಬೇಕು ಎಂದು ಕೇಂದ್ರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಂ. ಚಂದ್ರ ಶೇಖರ್ ಶುಕ್ರವಾರ ಹೇಳಿದ್ದಾರೆ.
Published: 20th August 2021 03:27 PM | Last Updated: 20th August 2021 04:10 PM | A+A A-

ಚಿಕ್ಕಬಳ್ಳಾಪುರ ಪೊಲೀಸರು
ಚಿಕ್ಕಬಳ್ಳಾಪುರ: ಜನರು ತಮ್ಮ ಆಸ್ತಿ ಮತ್ತು ವಂಚಕರ ಬಗ್ಗೆ ಜಾಗೃತರಾಗಿರಬೇಕು ಎಂದು ಕೇಂದ್ರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಎಂ. ಚಂದ್ರ ಶೇಖರ್ ಶುಕ್ರವಾರ ಹೇಳಿದ್ದಾರೆ.
ಕಳೆದುಕೊಂಡಿದ್ದ ಚಿನ್ನಾಭರಣವನ್ನು ಸಾರ್ವಜನಿಕರಿಗೆ ಹಸ್ತಾಂತರಿಸಿದ ನಂತರ ಸಮಾರಂಭವೊಂದರಲ್ಲಿ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಸಾಮಾನ್ಯ ಜನರಿಗೆ ಯಾವುದೇ ಅನುಮಾನಗಳಿದ್ದರೆ ಮುಂದೆ ಬಂದು ದೂರು ನೀಡುವಂತೆ ಪ್ರೋತ್ಸಾಹಿಸಿದರು.
ಜಾಗೃತಿ, ಸುರಕ್ಷತೆ, ಸಮಯಕ್ಕೆ ಸರಿಯಾಗಿ ಪೊಲೀಸರಿಗೆ ಮಾಹಿತಿ ನೀಡುವುದು ಅಪರಾಧ ಪ್ರಮಾಣವನ್ನು ನಿಯಂತ್ರಿಸಲು ಮತ್ತು ಅಪರಾಧಿಗಳನ್ನು ತಕ್ಷಣವೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಅವರು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸರಿಯಾದ ಮಾಹಿತಿಯಿಂದಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಪರಾಧಗಳನ್ನು ಭೇದಿಸಲು ಸಾಧ್ಯವಾಗುತ್ತದೆ. ಹೀಗಾಗಿ ಇಂದು ಸುಮಾರು ರೂ. 41,27,744 ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದರು.
5 ಲಕ್ಷ ಮೌಲ್ಯದ ಚಿನ್ನದ ಆಭರಣಗಳು, ಎರಡು ಲ್ಯಾಪ್ ಟಾಪ್ ಗಳು, 14 ಲಕ್ಷ ಮೌಲ್ಯದ ಬೋರ್ ವೆಲ್ ಡ್ರಿಲ್ ಬಿಟ್ ಗಳು, 25 ಲಕ್ಷ ಮೌಲ್ಯದ ಬೊಲೆರೊ ಕಾರು ಚಿಂತಾಮಣಿ ಉಪವಿಭಾಗದಿಂದ ವಶಪಡಿಸಿಕೊಳ್ಳಲಾಗಿದೆ. 2.50 ಲಕ್ಷ ಮೌಲ್ಯದ ಫೋನ್ ಗಳನ್ನು ಸಿದ್ದಲಘಟ್ಟ ಪೊಲೀಸರು ವಶಪಡಿಸಿಕೊಂಡಿದ್ದಾರೆ. 10 ಲಕ್ಷ ಮೌಲ್ಯದ ಮಿನಿ ಟೆಂಪೋಗಳು ಮತ್ತು ದ್ವಿಚಕ್ರ ವಾಹನವನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಗೌರಿಬಿದನೂರು ಪೊಲೀಸರು ವಶಪಡಿಸಿಕೊಂಡ 85,000 ಮೌಲ್ಯದ ದ್ವಿಚಕ್ರ ವಾಹನಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಯಿತು.