ಬೆಂಗಳೂರು: ಆರ್ ಟಿ ಒ ಅಧಿಕಾರಿಗಳು ಸೋಮವಾರ ಬೆಂಗಳೂರಿನ ಯುಬಿ ಸಿಟಿ ಬಳಿ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ವೇಳೆ 15 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲಿರುವ ರೋಲ್ಸ್ ರಾಯ್ ಕಾರು, ಪರಿಷತ್ ಸದಸ್ಯ ಫಾರೂಕ್ ಅವರಿಗೆ ಸೇರಿದ ಎರಡು ಐಷಾರಾಮಿ ಕಾರುಗಳನ್ನು ವಶಕ್ಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆಂದು ವರದಿಗಳು ತಿಳಿಸಿವೆ.
ಇನ್ಶುರೆನ್ಸ್ ಇಲ್ಲದ, ಸೂಕ್ತ ದಾಖಲೆ ಇಲ್ಲದ, ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿ, ಒಂದೇ ನಂಬರ್ ನಲ್ಲಿ ಬೇರೆ ಬೇರೆ ಕಾರುಗಳು ಓಡಾಟ ಮಾಡುತ್ತಿರುವುದನ್ನು ಕಾರ್ಯಾಚರಣೆ ವೇಳೆ ಆರ್‌ಟಿಒ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದ್ದು 15 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಾಜಣ್ಣ, ಮೋಟಾರ್ ವಾಹನ ನಿರೀಕ್ಷಕರಾದ ಸುಧಾಕರ್, ತಿಪ್ಪೇಸ್ವಾಮಿ, ವಿಶ್ವನಾಥ ಶೆಟ್ಟರ್, ರಂಜಿತ್, ರಾಜೇಶ್ ಮತ್ತು ರಾಜ್ ಕುಮಾರ್ ಅವರನ್ನ ಒಳಗೊಂಡ ತಂಡ ಇಂದು ಕಾರ್ಯಾಚರಣೆ ನಡೆಸಿತು.
Advertisement