ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಓಮಿಕ್ರಾನ್ ಆತಂಕ ನಡುವಲ್ಲೇ ಹತ್ತಿರ ಬರುತ್ತಿರುವ ಕ್ರಿಸ್'ಮಸ್: ಇನ್ನೂ ಮಾರ್ಗಸೂಚಿ ಬಿಡುಗಡೆ ಮಾಡದ ಸರ್ಕಾರ

ಹೆಮ್ಮಾರಿ ಓಮಿಕ್ರಾನ್ ಆತಂಕದ ನಡುವಲ್ಲೇ ಕ್ರಿಸ್'ಮಸ್ ಹತ್ತಿರ ಬರುತ್ತಿದ್ದು, ಹಬ್ಬಕ್ಕೆ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ. ಈ ಹಿಂದಿನ ನಿಯಮಗಳೇ ಮುಂದುವರೆಯಲಿವೆ ಎಂದು ಬಿಬಿಎಂಪಿ ಮುಖ್ಯ ಆಯಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

ಬೆಂಗಳೂರು: ಹೆಮ್ಮಾರಿ ಓಮಿಕ್ರಾನ್ ಆತಂಕದ ನಡುವಲ್ಲೇ ಕ್ರಿಸ್'ಮಸ್ ಹತ್ತಿರ ಬರುತ್ತಿದ್ದು, ಹಬ್ಬಕ್ಕೆ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ. ಈ ಹಿಂದಿನ ನಿಯಮಗಳೇ ಮುಂದುವರೆಯಲಿವೆ ಎಂದು ಬಿಬಿಎಂಪಿ ಮುಖ್ಯ ಆಯಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಮಾರ್ಗಸೂಚಿ ಪ್ರಕಾರವೇ ಕ್ರಿಸ್‌ಮಸ್‌ ಆಚರಣೆಗೆ ಅವಕಾಶ ನೀಡಲಾಗಿದೆ. ಆದರೆ, ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚರ್ಚ್‌ ಆವರಣ ದಲ್ಲಿ ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಾರ್ಥನೆ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಎರಡು ಡೋಸ್‌ ಲಸಿಕೆ ಪಡೆದಿರಬೇಕು ಎಂದು ಹೇಳಿದರು. ಈ ಸಂಬಂಧ ಯಾವುದೇ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿಲ್ಲ ಎಂದು ಪುನರುತ್ಛರಿಸಿದ ಅವರು, ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ಹೆಚ್ಚಿಸಲಾಗುವುದು.

ಪ್ರಸ್ತುತ ನಿತ್ಯ 40 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದ್ದು, ಅಗತ್ಯ ಇರುವ ಕಡೆ ಪರೀಕ್ಷೆ ಪ್ರಮಾಣ ಹೆಚ್ಚು ಮಾಡಲಾಗುವುದು. ಜತೆಗೆ ರೋಗ ಲಕ್ಷಣ ಕಂಡು ಬಂದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಮ್ಮು, ಶೀತ ಸೇರಿದಂತೆ ಮತ್ತಿತರ ರೋಗ ಲಕ್ಷಣಗಳಿದ್ದರೆ, ಕೋವಿಡ್‌ ತಪಾಸಣೆ ನಡೆಸಿಕೊಳ್ಳಬೇಕು. ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸುವಂತೆ ಇಗಾಗಲೇ ವೈದ್ಯರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com