ಧಾರವಾಡ ನಿರಾಳ: ಜಿಲ್ಲೆಯ ಮೊದಲ ಒಮಿಕ್ರಾನ್ ರೋಗಿ ಟೆಸ್ಟ್ ಫಲಿತಾಂಶ ನೆಗೆಟಿವ್

ಡಿಸೆಂಬರ್ 6ರಂದು ನಡೆದಿದ್ದ ಸ್ವಾಬ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಧಾರವಾಡ ಮೂಲದ 54 ವರ್ಷದ ಮಹಿಳೆಗೆ ಒಮಿಕ್ರಾನ್ ಸೋಂಕು ತಗುಲಿತ್ತು. ಜಿಲ್ಲೆಯ ಪ್ರಥಮ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿದ್ದರಿಂದ ಜಿಲ್ಲೆಯಾದ್ಯಂತ ಆತಂಕ ಮನೆಮಾಡಿತ್ತು. 

ಇದೀಗ ಮಹಿಳೆ ಒಮಿಕ್ರಾನ್ ಸೋಂಕಿನಿಂದ ಮುಕ್ತವಾಗಿದ್ದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ. ಮಹಿಳೆಯ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿದ್ದು, ಆಕೆ ಕೆಲಸಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ. 

ಡಿಸೆಂಬರ್ 6ರಂದು ನಡೆದಿದ್ದ ಸ್ವಾಬ್ ಪರೀಕ್ಷೆಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಡಿಸೆಂಬರ್ 19ರಂದು ಸೋಂಕಿತ ಮಹಿಳೆಯಲ್ಲಿ ಪತ್ತೆಯಾಗಿರುವುದು ಒಮಿಕ್ರಾನ್ ವೈರಾಣು ಎನ್ನುವುದು ತಿಳಿದುಬಂದಿತ್ತು. ಆವೇಳೆಗಾಗಲೇ ಗುಣಮುಖರಾಗಿದ್ದ ಮಹಿಳೆ ಕೆಲಸಕ್ಕೆ ಮರಳಿದ್ದರು.

ಒಮಿಕ್ರಾನ್ ವೈರಾಣು ಸೋಂಕು ತಗುಲಿದ್ದ ಮಾಹಿತಿ ತಿಳಿದ ತಕ್ಷಣ ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ನಡೆಸಲಾಗಿತ್ತು. ಆ ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com