ಮಂಡ್ಯದಲ್ಲಿ ಒಂಬತ್ತು ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್!

ಕರ್ನಾಟಕದಾದ್ಯಂತ ಓಮಿಕ್ರಾನ್ ಆತಂಕ ಮತ್ತು ಹೆಚ್ಚುತ್ತಿರುವ ಕ್ಲಸ್ಟರ್ ಪ್ರಕರಣಗಳ ನಡುವೆ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (MIMS)ಯ ಕನಿಷ್ಠ ಒಂಬತ್ತು ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈ ಮೂಲಕ ಮಂಡ್ಯದಲ್ಲಿ ಹೊಸ ಕ್ಲಸ್ಟರ್ ಹೊರಹೊಮ್ಮಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕರ್ನಾಟಕದಾದ್ಯಂತ ಓಮಿಕ್ರಾನ್ ಆತಂಕ ಮತ್ತು ಹೆಚ್ಚುತ್ತಿರುವ ಕ್ಲಸ್ಟರ್ ಪ್ರಕರಣಗಳ ನಡುವೆ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (MIMS)ಯ ಕನಿಷ್ಠ ಒಂಬತ್ತು ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈ ಮೂಲಕ ಮಂಡ್ಯದಲ್ಲಿ ಹೊಸ ಕ್ಲಸ್ಟರ್ ಹೊರಹೊಮ್ಮಿದೆ.

ಮಿಮ್ಸ್ ನಿರ್ದೇಶಕ ಡಾ. ಎಂ ಆರ್ ಹರೀಶ್ ಪ್ರಕಾರ, ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಕೇರಳದ ತಮ್ಮ ಹುಟ್ಟೂರಿಗೆ ಹೋಗಿದ್ದು, ಡಿಸೆಂಬರ್ 24ರಂದು ಕ್ಯಾಂಪಸ್‌ಗೆ ಮರಳಿದ್ದರು. ನಂತರ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು ನಾಲ್ವರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ಹಾಸ್ಟೆಲ್‌ನಲ್ಲಿರುವ ಎಲ್ಲಾ 145 ವಿದ್ಯಾರ್ಥಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಮತ್ತೆ 5 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಎಲ್ಲಾ ಒಂಬತ್ತು ವಿದ್ಯಾರ್ಥಿಗಳು ರೋಗ ಲಕ್ಷಣ ರಹಿತರಾಗಿದ್ದಾರೆ. ಹೀಗಾಗಿ ಅವರನ್ನು ಬಾಲಕಿಯ ಹಾಸ್ಟೆಲ್‌ನ ನಾಲ್ಕನೇ ಮಹಡಿಯಲ್ಲಿ ಪ್ರತ್ಯೇಕವಾಗಿರಲಾಗಿದ್ದು, ವೈರಸ್ ಮತ್ತಷ್ಟು ಹರಡುವುದನ್ನು ತಡೆಯುವ ಕ್ರಮವಾಗಿ ಇತರ ವಿದ್ಯಾರ್ಥಿಗಳ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com