ಪ್ರತಿಭಟನಾನಿರತ ದೂರವಾಣಿ(ಐಟಿಐ) ನೌಕರರು
ಪ್ರತಿಭಟನಾನಿರತ ದೂರವಾಣಿ(ಐಟಿಐ) ನೌಕರರು

ಪ್ರತಿಭಟನಾನಿರತ ದೂರವಾಣಿ ಕೈಗಾರಿಕೆ (ಐಟಿಐ) ನಿಗಮ ನೌಕರರಿಂದ ಕುವೆಂಪು ಜಯಂತಿ ಆಚರಣೆ

ಕಾರ್ಖಾನೆ ಮುಂಭಾಗದಲ್ಲೇ ಐಟಿಐ ನೌಕರರು ಬಾಕಿ ಉಳಿಸಿಕೊಂಡಿರುವ ಸಂಬಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ಪ್ರಾರಂಭಿಸಿದ್ದರು. 

ಬೆಂಗಳೂರು: ಭಾರತೀಯ ದೂರವಾಣಿ ಕೈಗಾರಿಕೆ(ಐಟಿಐ) ನಿಗಮ ನೌಕರರು ನಡೆಸುತ್ತಿರುವ ಮುಷ್ಕರ 29ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆ ವೇಳೆಯೇ ಅವರು ಕುವೆಂಪು ಜಯಂತಿಯನ್ನು ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಾರ್ಖಾನೆ ಮುಂಭಾಗದಲ್ಲೇ ಐಟಿಐ ನೌಕರರು ಬಾಕಿ ಉಳಿಸಿಕೊಂಡಿರುವ ಸಂಬಳ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ಪ್ರಾರಂಭಿಸಿದ್ದರು. 

ಹಲವು ನೌಕರರಿಗೆ ಡಿ.1ರಿಂದ ಕಾರ್ಖಾನೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಕ್ರಮಕ್ಕೆ ಮುಂದಾಗಿದ್ದಕ್ಕೆ ಕಾರಣ ಅವರ ಕಾಂಟ್ರಾಕ್ಟ್ ಅವಧಿ ಮುಗಿದಿದ್ದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಆದರೆ ಅದಕ್ಕೆ ಮುನ್ನ ಯಾರಿಗೂ ನೋಟಿಸ್ ನೀಡಲಾಗಿಲ್ಲ ಎಂದು ಮುಷ್ಕರ ನಿರತ ನೌಕರರು ಆರೋಪಿಸಿದ್ದಾರೆ. ಕೈಬಿಡಲಾದವರಲ್ಲಿ ಅನೇಕರು ಕಳೆದ ೩೫ ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com