ಹೊಸ ಮಾರ್ಗಸೂಚಿಯೊಂದಿಗೆ ಆಸ್ಪತ್ರೆಗಳಲ್ಲಿ ಸರಳಗೊಂಡ ಕೋವಿಡ್-19 ಚಿಕಿತ್ಸೆ!

ಕಳೆದ ಜೂನ್ ತಿಂಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ಹೊಸ ಮಾರ್ಗಸೂಚಿ ಹೊರಡಿಸಿದ ಹಿನ್ನೆಲೆಯಲ್ಲಿ ಕೋವಿಡ್-19 ಚಿಕಿತ್ಸೆ ಸಂಬಂಧ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಅನುಸರಿಸುತ್ತಿದ್ದ ನಿಯಮಗಳು ಇದೀಗ ಸರಳಗೊಂಡಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ಜೂನ್ ತಿಂಗಳು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ಹೊಸ ಮಾರ್ಗಸೂಚಿ ಹೊರಡಿಸಿದ ಹಿನ್ನೆಲೆಯಲ್ಲಿ ಕೋವಿಡ್-19 ಚಿಕಿತ್ಸೆ ಸಂಬಂಧ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಅನುಸರಿಸುತ್ತಿದ್ದ ನಿಯಮಗಳು ಇದೀಗ ಸರಳಗೊಂಡಂತಾಗಿದೆ. 

ಹೊರ ರೋಗಿಗಳಿಗೆ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುತ್ತಿರುವುದರಿಂದ ಇತರೆ ಔಷಧಿ ಬಳಕೆಗಳಿಂದ ವೈದ್ಯರು ದೂರ ಉಳಿಯುವಂತ ಮಾಡಿದೆ. 

ಹೊಸ ಮಾರ್ಗಸೂಚಿಯಂತೆ ಆಕ್ಸಿಜನ್ ಮಟ್ಟ ತೀವ್ರವಾಗಿ ಕುಸಿದಿದ್ದರೆ ಮಾತ್ರ ಸೋಂಕಿತರಿಗೆ ರೆಮ್ಡೆಸಿವಿರ್ ಔಷಧಿ ಬಳಕೆ ಮಾಡಲಾಗುತ್ತಿದೆ. ಸೋಂಕು ತಗುಲಿ 7 ದಿನಗಳಾಗಿದ್ದರೂ, ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ, ಆಕ್ಸಿಜನ್ ಪ್ರಮಾಣ ಶೇ.93ಕ್ಕಿಂತಲೂ ಕಡಿಮೆಯಾಗಿದ್ದರೆ ಮಾತ್ರ ಅಂತಹ ರೋಗಿಗಳಿಗೆ ಸ್ಟಿರಾಯ್ಡ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರಾಣಾಪಾಯವಿಲ್ಲದ ಸೋಂಕಿತರಿಗೆ ಪ್ಯಾರಾಸಿಟಮಲ್ ನೀಡುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ನಡುವೆ ಆಕ್ಸಿಜನ್, ಸ್ಟಿರಾಯ್ಡ್ ಗಳನ್ನು ನೀಡಿದ 24-48 ಗಂಟೆಗಳು ಕಳೆದರೂ ವ್ಯಕ್ತಿಯ ಸ್ಥಿತಿ ಗಂಭೀರವಾಗಿಯೇ ಇದ್ದರೆ ಅಂತಹವರಿಗೆ ಟಾಕ್ಸಿಲಿಜುಮಾಬ್'ನ್ನು ಬಳಕೆ ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್, ಅಜಿಥ್ರೊಮೈಸಿನ್, ಡಾಕ್ಸಿಸೈಕ್ಲಿನ್ ಮತ್ತು ಐವರ್ಮೆಕ್ಟಿನ್ ಅನ್ನು ನಾವು ಬಳಕೆ ಮಾಡುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆಕ್ಸಿಜನ್, ವೆಂಟಿಲೇಟರ್, ನಾನ್-ರೀಬ್ರೀಥರ್ ಮಾಸ್ಕ್ ಹಾಗೂ ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಅಗತ್ಯತಿಗೆ ಅನುಗುಣವಾಗಿ ಸ್ಟಿರಾಯ್ಡ್ ಗಳನ್ನು ಬಳಕೆ ಮಾಡುತ್ತಿದ್ದೇವೆ. ಈ ವೇಳೆ ಬ್ಲ್ಯಾಕ್ ಫಂಗಸ್ ಸೋಂಕು ನಿಯಂತ್ರಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೆಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯ ಕೆ.ಜಿ.ಸುರೇಶ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com