ಜುಲೈ 12 ರಿಂದ ಕರ್ನಾಟಕದಿಂದ ಕೇರಳಕ್ಕೆ ಸಾರಿಗೆ ಸೇವೆಗಳು ಪುನಾರಂಭ

ಕೊರೋನಾ ಪ್ರಕರಣಗಳ ಏರುಗತಿ ಜಿಕಾ ವೈರಸ್​ ಪ್ರಕರಣಗಳ ವರದಿಯ ನಡುವೆಯೂ ಕರ್ನಾಟಕ ಜು.12 ರಿಂದ ಕೇರಳಕ್ಕೆ ಸಾರಿಗೆ ಸೇವೆಗಳನ್ನು ಪುನಾರಂಭ ಮಾಡಿವೆ. 
ಕೆಎಸ್ ಆರ್ ಟಿಸಿ ಬಸ್ ಗಳು
ಕೆಎಸ್ ಆರ್ ಟಿಸಿ ಬಸ್ ಗಳು

ಬೆಂಗಳೂರು: ಕೊರೋನಾ ಪ್ರಕರಣಗಳ ಏರುಗತಿ ಜಿಕಾ ವೈರಸ್​ ಪ್ರಕರಣಗಳ ವರದಿಯ ನಡುವೆಯೂ ಕರ್ನಾಟಕ ಜು.12 ರಿಂದ ಕೇರಳಕ್ಕೆ ಸಾರಿಗೆ ಸೇವೆಗಳನ್ನು ಪುನಾರಂಭ ಮಾಡಿವೆ. 

ಕೇರಳ-ಕರ್ನಾಟಕದ ನಡುವೆ ಸಂಚರಿಸುವುದಕ್ಕೆ ಕರ್ನಾಟಕ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪ್ರಯಾಣದ ಸಮಯಕ್ಕಿಂತ 72 ಗಂಟೆಗಳ ಮುನ್ನ ಮಾಡಿಸಿದ ಆರ್ ಟಿ-ಪಿಸಿಆರ್ ಪರೀಕ್ಷೆ ಹಾಗೂ ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರುವ ಲಸಿಕೆ ಪ್ರಮಾಣಪತ್ರದೊಂದಿಗೆ ಪ್ರಯಾಣಿಸಬೇಕಾಗುತ್ತದೆ. 

ಕೇರಳದಿಂದ ಕರ್ನಾಟಕಕ್ಕೆ ಹೆಚ್ಚು ಸಂಚರಿಸುವ ವಿದ್ಯಾರ್ಥಿಗಳು, ಉದ್ಯಮಿಗಳು ಪ್ರತಿ 15 ದಿನಕ್ಕೊಮ್ಮೆ ಆರ್ ಟಿ-ಪಿಸಿಆರ್ ವರದಿಯನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com