ಬೆಂಗಳೂರಿನ ಹಳೆ ಮದ್ರಾಸ್ ರೋಡ್ ಕ್ರಾಸ್ ನಲ್ಲಿ ಗಬ್ಬು ನಾರುತ್ತಿದೆ ಚರಂಡಿ ನೀರು: ನಿವಾಸಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಹಲಸೂರು ಮೆಟ್ರೊ ಸ್ಟೇಷನ್ ಹತ್ತಿರವಿರುವ ಹಳೆ ಮದ್ರಾಸ್ ರಸ್ತೆ ಕ್ರಾಸ್ ನ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಚರಂಡಿಗೆ ಸಂಪರ್ಕವಿರುವ ಶೌಚಾಲಯ ಒಳಚರಂಡಿ ಮಾರ್ಗದಿಂದಾಗಿ ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದೆ.
ಚರಂಡಿ ನೀರಿನ ಸಂಪರ್ಕದ ಕಾಮಗಾರಿ
ಚರಂಡಿ ನೀರಿನ ಸಂಪರ್ಕದ ಕಾಮಗಾರಿ

ಬೆಂಗಳೂರು: ಹಲಸೂರು ಮೆಟ್ರೊ ಸ್ಟೇಷನ್ ಹತ್ತಿರವಿರುವ ಹಳೆ ಮದ್ರಾಸ್ ರಸ್ತೆ ಕ್ರಾಸ್ ನ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಚರಂಡಿಗೆ ಸಂಪರ್ಕವಿರುವ ಶೌಚಾಲಯ ಒಳಚರಂಡಿ ಮಾರ್ಗದಿಂದಾಗಿ ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದೆ.

ಚರಂಡಿಯಿಂದ ಬರುವ ಗಬ್ಬು ನಾತದಿಂದಾಗಿ ಇಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ನಡೆದುಕೊಂಡು ಹೋಗಲು ಸುತ್ತಮುತ್ತ ಕಷ್ಟವಾಗುತ್ತಿದೆ. ಪಾದಚಾರಿ ಮಾರ್ಗದ ಹತ್ತಿರ ತೆರೆದ ಸ್ಥವಿದ್ದು ಕಸ ಕಡ್ಡಿ, ಕೊಳಕು ವಸ್ತುಗಳನ್ನು ಹಾಕುವುದರಿಂದ ಸೊಳ್ಳೆಗಳು ಬೆಳೆಯಲು ಅನುಕೂಲವಾಗಿದೆ.

ಬೆಸ್ಟ್ ವಾಚ್ ಕ್ಲಿನಿಕ್ ನ ಮಾಲೀಕ ಕೆ ನಸೀನ್, ಚರಂಡಿಯಲ್ಲಿ ಕೊಳಕಿನ ನಿರಂತರ ಸೇವನೆಯಿಂದಾಗಿ ನನಗೆ ಟೈಫಾಯ್ಡ್ ಬಂತು. ಇಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ, ನನ್ನಲ್ಲಿಗೆ ಬರುವ ರೋಗಿಗಳಿಗೂ ಕಷ್ಟವಾಗುತ್ತಿದೆ. ಕೆಲವರ ಮನೆಗಳ ಶೌಚದ ಕೊಳವೆ ಸಂಪರ್ಕ ಸಾರ್ವಜನಿಕ ಚರಂಡಿಗೆ ಸಂಪರ್ಕ ಹೊಂದಿದೆ ಎನ್ನುತ್ತಾರೆ ಎಂದರು.

ರಸ್ತೆಯುದ್ದಕ್ಕೆ ತಾತ್ಕಾಲಿಕ ಶೌಚಗಳನ್ನು ನಿರ್ಮಿಸಲಾಗಿದೆ, ಕೆಲವು ತಿಂಗಳ ಹಿಂದೆ ಇ-ಕಾಮರ್ಸ್ ಡೆಲಿವರಿ ಸಿಬ್ಬಂದಿಗೆ ಪಿಕ್ ಅಪ್ ಮತ್ತು ಡೆಲಿವರಿ ಪಾಯಿಂಟ್ ಗಳಲ್ಲಿ ತಾತ್ಕಾಲಿಕ ಶೌಚಗಳನ್ನು ನಿರ್ಮಿಸಲಾಗಿದೆ, ಸಮಸ್ಯೆಗೆ ಅದುವೇ ಕಾರಣ ಎಂದು ಇಲ್ಲಿನ ನಿವಾಸಿ ಹಸೀಫ್ ಹೇಳುತ್ತಾರೆ, ಆದರೆ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ.

ಇದು ಈಗ ಮಳೆಗಾಲವಾಗಿದೆ ಈ ರೀತಿ ಚರಂಡಿಯಲ್ಲಿ ಕೊಳಕು ಸರಾಗವಾಗಿ ಹರಿದುಹೋದರ ಇಡೀ ಫುಟ್‌ಪಾತ್ ತೆರೆಯಬೇಕಾಗುತ್ತದೆ. ಈ ಸಮಸ್ಯೆಯು ಸ್ವಲ್ಪ ಸಮಯದವರೆಗೆ ಇದೆ ಆದರೆ ಅಂಗಡಿಗಳು ತೆರೆದುಕೊಳ್ಳುತ್ತಿರುವುದರಿಂದ ಮತ್ತು ಸಾರ್ವಜನಿಕರು ಈಗ ಬೀದಿಗಿಳಿದಿರುವುದರಿಂದ ಇದು ಎಲ್ಲರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂದು ಸರ್ವೇಶ್ ಎನ್ನುವವರು ಹೇಳುತ್ತಾರೆ.

ಈ ಬಗ್ಗೆ ಕೇಳಿದಾಗ ಚರಂಡಿ ನೀರು ಹರಿದುಹೋಗುವ ಸಮಸ್ಯೆ ಬಗ್ಗೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಬಿಡಬ್ಲ್ಯುಎಸ್ ಎಸ್ ಬಿ ಎಂಜಿನಿಯರ್ ನಾಗರಾಜ್ ಹೇಳಿದ್ದಾರೆ. ಪಾದಚಾರಿ ಮಾರ್ಗದ ಸಮಸ್ಯೆ ಚಿಕ್ಕದಾಗಿದ್ದು ಶೀಘ್ರವೇ ಬಗೆಹರಿಸುತ್ತೇವೆ ಎಂದು ಬಿಬಿಎಂಪಿ ತಾಂತ್ರಿಕ ಘಟಕದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಅಶೋಕ್ ಬಗ್ಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com