ಮೇಕೆದಾಟು ಯೋಜನೆ ತಮಿಳುನಾಡಿನೊಂದಿಗಿನ ಸಹೋದರ ಸಂಬಂಧವನ್ನು ಬಲಪಡಿಸುತ್ತದೆ: ಬಿಎಸ್‌ವೈ 

ಮೇಕೆದಾಟು ಯೋಜನೆಯು ನೆರೆರಾಜ್ಯದ ಮೇಲೆ ಯಾವುದೇ  ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಹೇಳಿದ್ದಾರೆ. ಕರ್ನಾಟಕ ಪ್ರಸ್ತಾಪಿಸಿದ ಮೇಕೆದಾಟು ಯೋಜನೆ ಕುರಿತು ತಮಿಳುನಾಡಿನ ಸರ್ವಪಕ್ಷಗಳ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಭೇಟಿಯಾದ ಒಂದು ದಿನದ ನಂತರ ಅವರ ಹೇಳಿಕೆ ಹೊರಬಿದ್ದಿದೆ.
ಮೇಕೆದಾಟು
ಮೇಕೆದಾಟು

ಬೆಂಗಳೂರು: ಮೇಕೆದಾಟು ಯೋಜನೆಯು ನೆರೆರಾಜ್ಯದ ಮೇಲೆ ಯಾವುದೇ  ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಹೇಳಿದ್ದಾರೆ. ಕರ್ನಾಟಕ ಪ್ರಸ್ತಾಪಿಸಿದ ಮೇಕೆದಾಟು ಯೋಜನೆ ಕುರಿತು ತಮಿಳುನಾಡಿನ ಸರ್ವಪಕ್ಷಗಳ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ದೆಹಲಿಯಲ್ಲಿ ಭೇಟಿಯಾದ ಒಂದು ದಿನದ ನಂತರ ಅವರ ಹೇಳಿಕೆ ಹೊರಬಿದ್ದಿದೆ.

ತಮಿಳುನಾಡಿನ ಪ್ರಕಾರ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ತನ್ನ ವಿವರವಾದ ಯೋಜನಾ ವರದಿ (ಡಿಪಿಆರ್) ಅನ್ನು ಅನುಮೋದಿಸುವವರೆಗೆ ಕರ್ನಾಟಕ ಯೋಜನೆಯ ನಿರ್ಮಾಣ ಪ್ರಾರಂಭಿಸಲು ಅನುಮತಿಸಬಾರದು ಎಂದು ಶೇಖಾವತ್ ನಿಯೋಗಕ್ಕೆ ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಯೋಜನೆಯನ್ನು ಪ್ರಾರಂಭಿಸುವ ಮೊದಲು ತಮ್ಮ ಸರ್ಕಾರವು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

"ಯೋಜನೆಯು ಯಾವುದೇ ರಾಜ್ಯಕ್ಕೆ ಅನಾನುಕೂಲವಾಗುವುದಿಲ್ಲ ಎಂದು ನಾವು (ಎಲ್ಲಾ ಮಧ್ಯಸ್ಥಗಾರರಿಗೆ) ಭರವಸೆ ನೀಡುತ್ತೇವೆ. ನಾವು ಸಂಬಂಧಪಟ್ಟ ಸಚಿವರು ಮತ್ತು ಇತರ ರಾಜ್ಯ ಸರ್ಕಾರಗಳೊಂದಿಗೆ ಮಾತನಾಡುತ್ತೇವೆ ”ಎಂದು ಅವರು ಹೇಳಿದರು, ಈ ಯೋಜನೆಯು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಸಹೋದರತ್ವವನ್ನು ಬಲಪಡಿಸುತ್ತದೆ. ಯಡಿಯೂರಪ್ಪ ಇತ್ತೀಚೆಗೆ ತಮ್ಮ ತಮಿಳುನಾಡಿನ ಪಾಲುದಾರ  ಎಂ.ಕೆ.ಸ್ಟಾಲಿನ್ ಅವರಿಗೆ ಉಭಯ ರಾಜ್ಯಗಳ ನಡುವೆ ಸಹಕಾರ ತೋರುವಂತೆ ಪತ್ರ ಬರೆದು ಮೇಕೆದಾಟು  ಯೋಜನೆಯ ಬಗ್ಗೆ ಯಾವುದೇ ಆತಂಕ ಪರಿಹಾರಕ್ಕೆ  ದ್ವಿಪಕ್ಷೀಯ ಸಭೆಯನ್ನು ನಡೆಸಲು ಸೂಚಿಸಿದ್ದರು. ಉದ್ದೇಶಿತ ಯೋಜನೆಯು ಎರಡೂ ರಾಜ್ಯಗಳಿಗೆ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಏತನ್ಮಧ್ಯೆ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವಾರು ಸಂಘಟನೆಗಳು ಈ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಕರ್ನಾಟಕದಲ್ಲಿ ರಾಮನಗರದ ರೈತರು ಯೋಜನೆಯ ಪರವಾಗಿ ಆಗಸ್ಟ್ 3 ರಂದು ಮೇಕೆದಾಟುವಿನಿಂದ ಬೆಂಗಳೂರಿಗೆ ಐದು ದಿನಗಳ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿದ್ದ ಶೇಖಾವತ್, ಮೇಕೆದಾಟು ಯೋಜನೆಯನ್ನು ತಮಿಳುನಾಡು ಮತ್ತು ಕರ್ನಾಟಕದ ನಡುವೆ ಬಹುಕಾಲದಿಂದ ಬಾಕಿ ಇರುವ ಸಮಸ್ಯೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com