ರೈಲ್ವೆ ಇಲಾಖೆಗೆ ಸೇರಿದ ಭೂಮಿಯಲ್ಲಿ ಬಿಬಿಎಂಪಿ ರಸ್ತೆ ನಿರ್ಮಾಣ: ರೋಡ್ ಸೀಲ್ ಮಾಡಿದ ಅಧಿಕಾರಿಗಳು!

ಅನುಮತಿಯಿಲ್ಲದೇ ತನ್ನ ಇಲಾಖೆಗೆ ಸೇರಿದ್ದ ಜಾಗದಲ್ಲಿ ನಿರ್ಮಿಸಿದ್ದ ರಸ್ತೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮುಚ್ಚಿರುವ ವಿಲಕ್ಷಣ ಘಟನೆ ನಡೆದಿದೆ.
ರಸ್ತೆ ಮುಚ್ಚಿದ ಅಧಿಕಾರಿಗಳು
ರಸ್ತೆ ಮುಚ್ಚಿದ ಅಧಿಕಾರಿಗಳು

ಬೆಂಗಳೂರು: ಅನುಮತಿಯಿಲ್ಲದೇ ತನ್ನ ಇಲಾಖೆಗೆ ಸೇರಿದ್ದ ಜಾಗದಲ್ಲಿ ನಿರ್ಮಿಸಿದ್ದ ರಸ್ತೆಯನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಮುಚ್ಚಿರುವ ವಿಲಕ್ಷಣ ಘಟನೆ ನಡೆದಿದೆ.

ಬೆಳ್ಳಂದೂರು ರೈಲ್ವೆ ನಿಲ್ದಾಣ ಬಳಿಯಿರುವ ಪಣತ್ತೂರು ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಜಾಗದಲ್ಲಿ ತಮ್ಮ ಗಮನಕ್ಕೆ ತರದೆ ರಸ್ತೆ ನಿರ್ಮಿಸಿದೆ ಎಂದು ಇಲಾಖೆ ಪ್ರಕಟಣೆ ಹೊರಡಿಸಿದೆ. 

ಬಿಬಿಎಂಪಿ ಗುತ್ತಿಗೆದಾರ ಪಣತೂರು ದಿಣ್ಣೆಯ ಮುಖ್ಯ ರಸ್ತೆಯಲ್ಲಿ ರಾತ್ರೋರಾತ್ರಿ  ಸುಮಾರು 300 ಮೀಟರ್ ರಸ್ತೆ ಹಾಕಿದ್ದಾರೆ. ಆದರೆ ಯಾವ ದಿನಾಂಕದಲ್ಲಿ ರಸ್ತೆ ಮಾಡಲಾಗಿದೆ ಎಂದು ನಿಖರವಾಗಿ ತಿಳಿದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

7 ಮೀಟರ್ ರಸ್ತೆಯನ್ನು ಮಂಗಳವಾರ ಸೀಲ್ ಮಾಡಲಾಗಿದ್ದು, ಗುರುವಾರ ಮತ್ತೆ ತೆರೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಸದ ಪಿಸಿ ಮೋಹನ್ ಅವರ ಜೊತೆ ಸ್ಥಳೀಯ ನಿವಾಸಿಗಳು ಮಾತುಕತೆ ನಡೆಸಿದರು. 

ಇತ್ತೀಚೆಗೆ ಬಿಬಿಎಂಪಿಯ ಗುತ್ತಿಗೆದಾರರೊಬ್ಬರು ರೈಲ್ವೆಯ ಅನುಮತಿಯಿಲ್ಲದೆ ರಾತ್ರೋರಾತ್ರಿ ರಸ್ತೆ ಹಾಕಿದ್ದರು ಮತ್ತು ರೈಲ್ವೆ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದ್ದರು. ಇಲಾಖೆಯ ಸಿಬ್ಬಂದಿ ತಪಾಸಣೆ ನಡೆಸಿ ಇದನ್ನು ಗಮನಿಸಿ ರೈಲ್ವೆ ಸಂರಕ್ಷಣಾ ಪಡೆಗೆ ಮಾಹಿತಿ ನೀಡಿದ್ದಾರೆ. 

ರೈಲ್ವೆ ಹಳೆಯ ಸ್ಲೀಪರ್‌ಗಳಿಂದ ರಸ್ತೆಯ ಮೇಲೆ ತಡೆಗೋಡೆ ನಿರ್ಮಿಸಿ ರೈಲ್ವೆ ಭೂಮಿಯನ್ನು ಗುರುತಿಸಲು ಮತ್ತು ಅತಿಕ್ರಮಣವನ್ನು ತಡೆಗಟ್ಟಲು ಗಡಿ ಸ್ತಂಭಗಳನ್ನು ಇಲಾಖೆ ನಿರ್ಮಿಸಿತು. ಮತ್ತೊಂದು ಪರ್ಯಾಯ ರಸ್ತೆ ಹಾಕಲು ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆರು ತಿಂಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com