ರೈಲ್ವೇ ಹಳಿಗಳಿಂದ ತಾಮ್ರ ಕದಿಯುತ್ತಿದ್ದ ಕಳ್ಳರ ಬಂಧನ
ನೈಋತ್ಯ ರೈಲ್ವೆ ವಲಯದ ರೈಲ್ವೆ ಹಳಿಗಳಲ್ಲಿ ಓವರ್ಹೆಡ್ ವಿದ್ಯುತ್ ತಂತಿಗಳಿಂದ ತಾಮ್ರವನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ರೆಡ್ ಹ್ಯಾಂಡ್ ಆಗಿ ಬುಧವಾರ ಬಂಧಿಸಿದ್ದಾರೆ,
Published: 17th June 2021 04:30 PM | Last Updated: 17th June 2021 04:30 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ನೈಋತ್ಯ ರೈಲ್ವೆ ವಲಯದ ರೈಲ್ವೆ ಹಳಿಗಳಲ್ಲಿ ಓವರ್ಹೆಡ್ ವಿದ್ಯುತ್ ತಂತಿಗಳಿಂದ ತಾಮ್ರವನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ರೆಡ್ ಹ್ಯಾಂಡ್ ಆಗಿ ಬುಧವಾರ ಬಂಧಿಸಿದ್ದಾರೆ,
ಬಂಧಿತ ಇಬ್ಬರು ಇದೇ ಹಗರಣದಲ್ಲಿ ತೊಡಗಿದ್ದ 6 ಮಂದಿಯ ಗ್ಯಾಂಗ್ ನ ಸದಸ್ಯರಾಗಿದ್ದು, ಕಳೆದ ಒಂದು ವಾರದಲ್ಲಿ ಸುಮಾರು 4 ಲಕ್ಷ ರೂ.ಗಳ ಮೌಲ್ಯದ 400 ಮೀಟರ್ ತಾಮ್ರದ ತಂತಿಯನ್ನು ಕದ್ದಿದ್ದಾರೆ. ಹೊಸಪೇಟೆ ಮತ್ತು ಗದಗ ನಡುವಿನ ಮಾರ್ಗದಲ್ಲಿ ಬರುವ ಆನೆಗೆರೆ ಮತ್ತು ಹಲ್ಕೋಟಿ ರೈಲ್ವೆ ನಿಲ್ದಾಣಗಳ ನಡುವಿನ ಹಳಿಗಳಲ್ಲಿ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಆರ್‌ಪಿ ವಿಜಯಪುರ ಸರ್ಕಲ್ ಇನ್ಸ್‌ಪೆಕ್ಟರ್ ಡಿ ಬಿ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬಂಧಿತ ರವಿ ಪಾರ್ಸಪ್ಪ ಮತ್ತು ಅಪ್ರಾಪ್ತ ಬಾಲಕ (ಹೆಸರು ತಿಳಿಸಿಲ್ಲ) ಬುಧವಾರ ಮುಂಜಾನೆ ಬೈಕ್‌ನಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಅಲ್ಲಿ ಗಸ್ತು ನಡೆಸುತ್ತಿದ್ದ ನಮ್ಮ ಕಾನ್‌ಸ್ಟೆಬಲ್‌ಗಳು ಇವರನ್ನು ಗಮನಿಸಿದ್ದಾರೆ. ಇವರ ಚಲನವಲನ ಶಂಕಾಸ್ಪದವಾಗಿತ್ತು. ಹೀಗಾಗಿ ಇವರನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ ಇವರ ಬಳಿ ವೈರ್ ಗಳನ್ನು ಕತ್ತರಿಸಲು ಬಳಸುವ ಸಲಕರಣೆಗಳ ಚೀಲ ಕೂಡ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಕೂಡಲೇ ಅವರನ್ನು ಬಂಧಿಸಿದ್ದು, ಅವರ ತಂಡ ಕದ್ದ ಮಾಲು ಇಟ್ಟಿದ್ದ ಜಾಗಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ಸುಮಾರು 200 ಮೀಟರ್ ಕದ್ದ ವೈರ್ ಗಳು ಕೂಡ ಪತ್ತೆಯಾಗಿದೆ. ಇವರಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 379 ರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು. ಅಂತೆಯೇ ಇವರ ಗ್ಯಾಂಗ್ ನ ಇತರೆ ಸದಸ್ಯರಾದ ನಾಗೇಶ್, ಸಿಧು, ಅರ್ಜುನ್ ಮತ್ತು ಇನ್ನೊಬ್ಬ ರವಿ ಎಂಬುವವರು ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೂಡ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು,
ರೈಲ್ವೆ ಹಳಿಗಳ ಬಳಿ ಇರುವ ವಿದ್ಯುತ್ ಕಂಬಗಳಲ್ಲಿನ ವೈರ್ ಗಳನ್ನು ತಂತಿಗಳಿಂದ ತಮಗೆ ಸಾಧ್ಯವಾದಷ್ಟು ಕತ್ತರಿಸಿ ತೆಗೆಯುವುದು ಈ ಗ್ಯಾಂಗ್‌ನ ಕಾರ್ಯವಿಧಾನವಾಗಿದೆ. ಈ ರೀತಿ ಕತ್ತರಿಸಿ ತೆಗೆದ ಒಂದು ಮೀಟರ್ ತಾಮ್ರದ ತಂತಿಗೆ ಮಾರುಕಟ್ಟೆಯಲ್ಲಿ ಕನಿಷ್ಠ 1,000 ರೂ ಬೆಲೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.