ಉದ್ಯಮಗಳ ನಷ್ಟ ಸರಿದೂಗಿಸುವಿಕೆಯಿಂದ ಅವಶ್ಯಕ ವಸ್ತುಗಳ ಬೆಲೆ ಏರಿಕೆ- ಆರ್ಥಿಕ ತಜ್ಞರು

ಲಾಕ್ ಡೌನ್ ಅವಧಿಯಲ್ಲಿ ತಮ್ಮಗಾದ ನಷ್ಟವನ್ನು ಬೆಲೆ ಏರಿಕೆ ಮೂಲಕ ಉತ್ತಮಗೊಳಿಸಲು ಉದ್ಯಮಗಳು ಪ್ರಯತ್ನಿಸುತ್ತಿರುವುದರಿಂದ ಆರ್ಥಿಕ ಕುಸಿತದ ನಂತರ ಹಣದುಬ್ಬರ ನಿರೀಕ್ಷಿತ ಫಲಿತಾಂಶವಾಗಿದೆ ಎಂದು ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್  ಮಾಜಿ ನಿರ್ದೇಶಕ ಮತ್ತು ಐಎಸ್ ಇಸಿ ಅತಿಥಿ ಪ್ರೊಫೆಸರ್ ಆರ್ ಎಸ್ ದೇಶಪಾಂಡೆ ವಿವರಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ತಮ್ಮಗಾದ ನಷ್ಟವನ್ನು ಬೆಲೆ ಏರಿಕೆ ಮೂಲಕ ಉತ್ತಮಗೊಳಿಸಲು ಉದ್ಯಮಗಳು ಪ್ರಯತ್ನಿಸುತ್ತಿರುವುದರಿಂದ ಆರ್ಥಿಕ ಕುಸಿತದ ನಂತರ ಹಣದುಬ್ಬರ ನಿರೀಕ್ಷಿತ ಫಲಿತಾಂಶವಾಗಿದೆ ಎಂದು ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್  ಮಾಜಿ ನಿರ್ದೇಶಕ ಮತ್ತು ಐಎಸ್ ಇಸಿ ಅತಿಥಿ ಪ್ರೊಫೆಸರ್ ಆರ್ ಎಸ್ ದೇಶಪಾಂಡೆ ವಿವರಿಸಿದ್ದಾರೆ.

ಲಾಕ್ ಡೌನ್ ನಂತರ ಅನೇಕ ಉದ್ಯಮಗಳು ನಷ್ಟ ಅನುಭವಿಸಿವೆ ಇದೀಗ, ಅದನ್ನು ಸರಿದೂಗಿಸಬೇಕಾಗಿದೆ. ಇದು ಪ್ರಸ್ತುತದಲ್ಲಿನ ಮಾರುಕಟ್ಟೆ ಪರಿಸ್ಥಿತಿಯಾಗಿದೆ. ಉದ್ಯಮಗಳಿಂದ ವ್ಯಾಪಾರ ನಷ್ಟವನ್ನು ಉತ್ತಮಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

 ತೈಲ ಬೆಲೆ ಏರಿಕೆ, ಉತ್ಪನ್ನಗಳ ದರ ಸೇರಿದಂತೆ ಬೆಲೆ ಏರಿಕೆಗೆ ಅನೇಕ ಕಾರಣಗಳಿವೆ , ಆದರೆ ಮಾರುಕಟ್ಟೆಯನ್ನು ನಿರ್ವಹಿಸುವ ಪ್ರಯತ್ನ ಪ್ರಮುಖ ಸಮಸ್ಯೆಯಾಗಿದೆ. 1974ರಿಂದಲೂ ಗಮನಿಸುತ್ತಿರುವಂತೆ ಇಡೀ ಆರ್ಥಿಕತೆಯಲ್ಲಿ ಕೇವಲ ಫಲಾನುಭವಿಗಳು ಮಾತ್ರ ಮಧ್ಯವರ್ತಿಗಳಾಗಿದ್ದಾರೆ. ಈಗಲೂ ಇದೇ ಪರಿಸ್ಥಿತಿ ಇದೆ ಎಂದರು.

ಆದಾಗ್ಯೂ, ಅವರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಹೆಚ್ಚಳ, ತೈಲ ಬೆಲೆ ಮತ್ತಿತರ ಅವಶ್ಯಕ ಸರಕುಗಳ ಬೆಲೆ ಏರಿಕೆಗೆ ಕಾರಣವಲ್ಲಾ, ದೊಡ್ಡ ಪ್ರಮಾಣದ ಹಣದುಬ್ಬರವಿದೆ. ಗ್ರಾಹಕರ ಬೇಡಿಕೆ ಈಡೇರಿದ ನಂತರ ಅದು ಕಡಿಮೆಯಾಗಲಿದೆ. ಗ್ರಾಹಕರು ಐದು ಲೀಟರ್ ಬದಲಿಗೆ ಕೇವಲ ಎರಡು ಲೀಟರ್ ಕೊಳ್ಳುವಂತಾದಾಗ ಬೆಲೆಗಳು ಇಳಿಯುವ ಸಾಧ್ಯತೆಯಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರೊಫೆಸರ್ ದೇಶಪಾಂಡೆ ಪ್ರಕಾರ, ಸರ್ಕಾರ ಹೆಚ್ಚು ಮಾಡಲು ಸಾಧ್ಯವಿಲ್ಲ. 1991ರಲ್ಲಿ ನಾವು ಮುಕ್ತ ಮಾರುಕಟ್ಟೆ ನೀತಿಯನ್ನು ಅಳವಡಿಸಿಕೊಂಡಿದ್ದೇವೆ.ಸರಕುಗಳ ಬೆಲೆ ನಿಯಂತ್ರಿಸಲು ಸಾಧ್ಯವಿಲ್ಲ, ಸ್ವಾತಂತ್ರ್ಯದಿಂದಲೇ ಹಣದುಬ್ಬರವು ನಮ್ಮ ಒಡನಾಡಿಯಾಗಿದೆ. ಕೆಲವು ತೆರಿಗೆ ನೀತಿಯ ಮೂಲಕ ಕಠಿಣ ನಿಯಂತ್ರಣವನ್ನು ತರದ ಹೊರತು ಸರ್ಕಾರ ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಅದು ಕಷ್ಟ ಎಂದರು.ಹಣದುಬ್ಬರದ ಹೊರತಾಗಿ, ಗೃಹ ವಲಯದಲ್ಲಿ ಒಟ್ಟು ಬಂಡವಾಳ ರಚನೆಯು ಗಮನಾರ್ಹವಾಗಿ ಇಳಿಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

"ಹಲವಾರು ತಿಂಗಳುಗಳಿಂದ ಯಾವುದೇ ಆದಾಯವಿಲ್ಲ ಮತ್ತು ಜನರು ತಮ್ಮ ಉಳಿತಾಯವನ್ನು ಬಳಸಿದರು. ಈಗ, ಅವರು ಆದಾಯವನ್ನು ಪಡೆಯಲು ಪ್ರಾರಂಭಿಸಿದಾಗ, ಅವರು ಮೊದಲು ಹಿಂದಿನ ಅವಶ್ಯಕತೆಗಳನ್ನು ಪೂರೈಸಬೇಕು, ಆದ್ದರಿಂದ ಉಳಿತಾಯದ ಮೇಲೆ ಹಿಂಡುವಿಕೆ ಇರುತ್ತದೆ. ಒಂದು ವರ್ಷದ ಹಿಂದೆ ಶೇಕಡಾ 30 ರಷ್ಟಿದ್ದ ಗೃಹ ವಲಯದ ಉಳಿತಾಯವು ಶೇಕಡಾ 3-5ರಷ್ಟು ಕುಸಿಯುತ್ತದೆ. ಉಳಿತಾಯ ಕಡಿಮೆಯಾದರೆ, ದೇಶೀಯ ವಲಯದಲ್ಲೂ ಹೂಡಿಕೆ ಕಡಿಮೆಯಾಗುತ್ತದೆ ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com