ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ಸೋಂಕಿನ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಕಲೆಹಾಕಿದ ಬಿಬಿಎಂಪಿ 

ಬೆಂಗಳೂರಿನಲ್ಲಿ ವೈದ್ಯರೋರ್ವರಲ್ಲಿ ಡೆಲ್ಟಾ + ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಜೊತೆಗಿದ್ದವರನಗನು ಬಿಬಿಎಂಪಿ ಟ್ರೇಸಿಂಗ್ ಮಾಡಿದ್ದು, ಸಂಪರ್ಕ ಹೊಂದಿದ್ದವರನ್ನು ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. 
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು: ಬೆಂಗಳೂರಿನಲ್ಲಿ ವೈದ್ಯರೋರ್ವರಲ್ಲಿ ಡೆಲ್ಟಾ + ವೈರಸ್ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಜೊತೆಗಿದ್ದವರನಗನು ಬಿಬಿಎಂಪಿ ಟ್ರೇಸಿಂಗ್ ಮಾಡಿದ್ದು, ಸಂಪರ್ಕ ಹೊಂದಿದ್ದವರನ್ನು ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. 

ಮೈಸೂರು, ಬೆಂಗಳೂರು ಸೇರಿದಂತೆ  ರಾಜ್ಯದಲ್ಲಿ ಇಲ್ಲಿಯವರೆಗೆ ಎರಡು ಡೆಲ್ಟಾ + ಸೋಂಕು ಪತ್ತೆಯಾಗಿದೆ.ಮೈಸೂರಲ್ಲಿ ವೃದ್ಧರೊಬ್ಬರಲ್ಲಿ ಮೊದಲು ಈ ರೂಪಾಂತರಿ ವೈರಸ್ ಸೋಂಕು ಕಂಡುಬಂದಿತ್ತು.

ಈ ಬಗ್ಗೆ ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿವಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರದಲ್ಲಿ ಡೆಲ್ಟಾ + ವೈರಸ್  ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕೇಸ್ ಡೆಲ್ಟಾ ಪ್ಲಸ್ ಎಂದು ಗುರುತಿಸಲಾಗಿದೆ. ಈ ಕೇಸ್ ಗಳ ಪರಿಶೀಲನೆ ಮಾಡಿದಾಗ ಹಿಂದೆಯೇ ರಾಜ್ಯ ಸರ್ಕಾರ ಮಟ್ಟದಲ್ಲಿ ಜಿನೋಮ್ ಸೀಕ್ವೆನ್ಸ್ ಸಹ ಮಾಡಲಾಗಿದೆ. ಮ್ಯೂಟೆಂಟ್ ವೈರೆಸ್ ಎಂದು ಪ್ರತ್ಯೇಕಿಸಿ ಈ ಕೇಸ್ ಗುರುತಿಸಲಾಗಿದೆ ಎಂದು ಅವರು ಹೇಳಿದರು. 

ಡೆಲ್ಟಾ ಗಿಂತ ಸ್ವಲ್ಪ ಭಿನ್ನ ಎಂದು  ಗುರುತಿಸಲಾಗಿತ್ತು. ಓರ್ವ ವ್ಯಕ್ತಿ ಗುಣಮುಖರಾಗಿದ್ದಾರೆ.ಇವರ ಸಂಪರ್ಕದಲ್ಲಿದ್ದಾಗ ಕುಟುಂಬಸ್ಥರು ಸಹ ಗುಣಮುಖರಾಗಿದ್ದಾರೆ. ಜಿನೋಮ್ ಸೀಕ್ವೆನ್ಸ್ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದರು. ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಎಂದು ಗುರುತಿಸಲ್ಪಟ್ಟವರ ಸ್ಯಾಂಪಲ್ಸ್ ಜಿನೋಮ್ ಸೀಕ್ವೆನ್ಸ್ ಗೆ ಕಳುಹಿಸಲಾಗುತ್ತದೆ. ನಗರದಲಿ ಡೆಲ್ಟಾ + ಹರದಡಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com