ನಾಪತ್ತೆಯಾಗಿರುವ ಕೋವಿಡ್‍ ರೋಗಿಗಳ ವಿರುದ್ಧ ಕಠಿಣ ಕ್ರಮ: ಡಿಜಿಪಿ ಪ್ರವೀಣ್‍ ಸೂದ್‍

ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟು ನಾಪತ್ತೆಯಾಗಿರುವ ರೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಸಿದ್ದಾರೆ.
ಡಿಜಿಪಿ ಪ್ರವೀಣ್‍ ಸೂದ್‍
ಡಿಜಿಪಿ ಪ್ರವೀಣ್‍ ಸೂದ್‍

ಬೆಂಗಳೂರು: ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟು ನಾಪತ್ತೆಯಾಗಿರುವ ರೋಗಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಸಿದ್ದಾರೆ.

ಸುಮಾರು 3,000 ಕೋವಿಡ್ ರೋಗಿಗಳು ನಾಪತ್ತೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ ಮಾಧ್ಯಮಗಳಿಗೆ ಗುರುವಾರ ತಿಳಿಸಿದ ನಂತರ ಪ್ರವೀಣ್‍ ಸೂದ್ ಈ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಆರ್‍ ಅಶೋಕ ನಾಪತ್ತೆಯಾಗಿರುವ ರೋಗಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿದ್ದರು.

ಕೋವಿಡ್-19 ಪರೀಕ್ಷಾ ವರದಿಯಲ್ಲಿ ಸೋಂಕು ಪತ್ತೆಯಾದ ನಂತರವೂ ಫೋನ್‍ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗುವುದು ದೊಡ್ಡ ಅಪರಾಧ ಎಂದು ಪ್ರವೀಣ್‍ ಸೂದ್ ಭಾನುವಾರ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com