ಸಣ್ಣ ಸಣ್ಣ ನೆಪ ಹೇಳಿಕೊಂಡು ರಸ್ತೆಗಿಳಿದರೇ ಕಠಿಣ ಕ್ರಮ: ಕಮಲ್ ಪಂತ್ ಎಚ್ಚರಿಕೆ

ಸಣ್ಣ ಸಣ್ಣ ನೆಪ ಹೇಳಿಕೊಂಡು ರಸ್ತೆಗಿಳಿದರೇ ಕಾನೂನಿನ ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಆಯುಕ್ತ ಕಮಲ್ ಪಂತ್
ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು: ಸಣ್ಣ ಸಣ್ಣ ನೆಪ ಹೇಳಿಕೊಂಡು ರಸ್ತೆಗಿಳಿದರೇ ಕಾನೂನಿನ ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಸೋಮವಾರದಿಂದ ಜಾರಿ ಆಗಲಿರುವ ಪರಿಷ್ಕೃತ ಕ್ರಮಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಲಾಕ್ ಡೌನ್ ಆರಂಭವಾಗುವ ಹಿನ್ನೆಲೆಯಲ್ಲಿ ಇಂದು ಗೂಡ್ಸ್ ವಾಹನಗಳ ಓಡಾಟ ಜಾಸ್ತಿಯಾಗಿತ್ತು. ಅಲ್ಲದೇ, ವ್ಯಾಕ್ಸಿನೇಶನ್​​ಗಾಗಿಯೇ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಆದರೆ, ಬಹುತೇಕರು ಸೂಕ್ತ ಕಾರಣ ಇಲ್ಲದೆ ಹೊರಗೆ ಬಂದಿದ್ದರಿಂದ ಎರಡು ಸಾವಿರಕ್ಕೂ ಹೆಚ್ಚಿನ ವಾಹನ ವಶಕ್ಕೆ ಪಡೆಯಲಾಗಿದೆ. ಇನ್ನು, ನಿಯಮಗಳನ್ನು ಉಲ್ಲಂಘಿಸಿದ್ದ ಹಲವರನ್ನು ಬಂಧಿಸಲಾಗಿದೆ ಎಂದರು.

ನಗರದಲ್ಲಿಂದು ವಿಕೇಂಡ್ ಕರ್ಪ್ಯೂ ಇರುವುದರಿಂದ ಹಳೇ ಗೈಡ್ ಲೈನ್ಸ್​ನಲ್ಲಿ ಇಂದು ಹಲವು ವಿಚಾರಗಳನ್ನು ನಿರ್ಬಂಧಿಸಲಾಗಿದೆ. ನಿನ್ನೆಗಿಂತ ಇಂದು, ನಾಳೆ ಜಾಸ್ತಿ ನಿರ್ಬಂಧವಿದ್ದು, ಸೋಮವಾರದಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com