ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾದ ಯುವ ಸಂಸದರು: ಮುಚ್ಚಿದ್ದ ಆಸ್ಪತ್ರೆ ಪುನಾರಂಭ! ವಿಡಿಯೋ

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ.ಸುರೇಶ್ ತಮ್ಮ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬೆಂಗಳೂರಿನಲ್ಲಿ ಮುಚ್ಚಿದ್ದ ಆಸ್ಪತ್ರೆಯೊಂದನ್ನು ಪುನಾರಂಭ ಮಾಡಿದ್ದಾರೆ.
ಸಂಸದರಾದ ತೇಜಸ್ವಿ ಸೂರ್ಯ, ಡಿ.ಕೆ. ಸುರೇಶ್ ಮತ್ತು ಶಾಸಕ ಡಾ. ರಂಗನಾಥ್
ಸಂಸದರಾದ ತೇಜಸ್ವಿ ಸೂರ್ಯ, ಡಿ.ಕೆ. ಸುರೇಶ್ ಮತ್ತು ಶಾಸಕ ಡಾ. ರಂಗನಾಥ್

ಬೆಂಗಳೂರು: ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ.ಸುರೇಶ್ ತಮ್ಮ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬೆಂಗಳೂರಿನಲ್ಲಿ ಮುಚ್ಚಿದ್ದ ಆಸ್ಪತ್ರೆಯೊಂದನ್ನು ಪುನಾರಂಭ ಮಾಡಿದ್ದಾರೆ.

ಕಳೆದ 7 ವರ್ಷಗಳಿಂದ ಮುಚ್ಚಲಾಗಿದ್ದ ವಿಲ್ಸನ್ ಗಾರ್ಡನ್ ನ ಮಹಾಬೋಧಿ ಆಸ್ಪತ್ರೆಯನ್ನು 10 ದಿನಗಳಲ್ಲಿ ಸತತ ಪ್ರಯತ್ನಗಳ ಮೂಲಕ ಪುನಶ್ಚೇತನ ನೀಡಿ ಮತ್ತೆ ಕಾರ್ಯಾರಂಭ ಮಾಡುವಂತೆ ಮಾಡಿದ್ದಾರೆ. 50 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ 10 ಐಸಿಯು ಹಾಗೂ 40 ಆಕ್ಸಿಜನ್ ಯುನಿಟ್ ಬೆಡ್ ಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಈ ಕುರಿತ ವಿಡಿಯೋದಲ್ಲಿ ಮಾತನಾಡಿರುವ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಪ್ರತಿದಿನ ಬೆಡ್, ಐಸಿಯುಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಕೋವಿಡ್- 19 ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಏಳು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾಬೋಧಿ ಆಸ್ಪತ್ರೆಯನ್ನು ಮತ್ತೆ ಕಾರ್ಯಾರಂಭ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಪರೇಷನ್ ಸೌಲಭ್ಯ ಕೂಡಾ ಶುರುವಾಗಲಿದೆ. ಇದಕ್ಕೆ ಸಹಕಾರ ನೀಡಿದ ಡಿ.ಕೆ.ಸುರೇಶ್ ಹಾಗೂ ಎಲ್ಲಾ ತಂಡಕ್ಕೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಡಿಕೆ ಸುರೇಶ್ ಮಾತನಾಡಿ, ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಆಸ್ಪತ್ರೆಯನ್ನು ಪುನರಾಂಭಿಸಿರುವುದಾಗಿ ಹೇಳಿದ್ದಾರೆ. ಕುಣಿಗಲ್ ಶಾಸಕ ಡಾ. ರಂಗನಾಥ್ ಕೂಡಾ ವಿಡಿಯೋದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com