18 ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಕೊರೋನಾ ಲಸಿಕೆ: ಎಸ್ಎಂಎಸ್ ಸಂದೇಶವನ್ನೇ ಪಾಸ್ ಆಗಿ ಬಳಸಲು ರಾಜ್ಯ ಸರ್ಕಾರ ಅವಕಾಶ!

ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ತೆರಳುವ 18 ವರ್ಷ ಮೇಲ್ಪಟ್ಟವರ ಬಳಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ಎಂಎಸ್ ಇರುವುಡು ಕಡ್ಡಾಯವಾಗಿದೆ. ಈ ಎಸ್ಎಂಎಸ್'ನ್ನು ಪರಿಶೀಲಿಸಿದ ಬಳಿಕವಷ್ಟೇ ಪೊಲೀಸರು ಲಸಿಕಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ತೆರಳುವ 18 ವರ್ಷ ಮೇಲ್ಪಟ್ಟವರ ಬಳಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ಎಂಎಸ್ ಇರುವುಡು ಕಡ್ಡಾಯವಾಗಿದೆ. ಈ ಎಸ್ಎಂಎಸ್'ನ್ನು ಪರಿಶೀಲಿಸಿದ ಬಳಿಕವಷ್ಟೇ ಪೊಲೀಸರು ಲಸಿಕಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. 

ಸೋಮವಾರದಿಂದ ರಾಜ್ಯದಲ್ಲಿ ಸೆಮಿ ಲಾಕ್ಡೌನ್ ಜಾರಿಯಾಗಿದ್ದು, ಅನಾವಶ್ಯಕವಾಗಿ ಜನರು ವಾಹನಗಳಲ್ಲಿ ತಿರುಗಾಡುವಂತಿಲ್ಲ. ಆದರೆ, ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯುವವರಿಗೆ ಈ ನಿಯಮದಿಂದ ಅಡ್ಡಿಯಾಗಬಾರದು ಎಂದು ಸರ್ಕಾರ ಲಸಿಕೆಯ ಸಂದೇಶವನ್ನೇ ಪಾಸ್ ರೀತಿ ಬಳಸಲು ಅವಕಾಶ ನೀಡಿದೆ. 

18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಆನ್'ಲೈನ್ ನಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆ ಬಳಿಕ ಲಸಿಕೆ ಪಡೆಯುವ ಸಮಯವನ್ನು ಖಾತರಿಪಡಿಸಿ ಫಲಾನುಭವಿಗೆ ಸಂದೇಶ ಬರುತ್ತದೆ. ಈ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕಾ ಕೇಂದ್ರಗಳಿಗೆ ತೆರಳಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com