ನಷ್ಟದಿಂದ ಕಂಗಾಲು: ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರವಾಗಿಸಿ ಸೇವೆ ಒದಗಿಸಲು ಮುಂದಾದ ಮಾಲೀಕರು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಕಗೊಂಡಿದ್ದು, ಕರ್ಫ್ಯೂ, ಲಾಕ್ಡೌನ್ ಸಂಕಷ್ಟದಿಂದಾಗಿ ನಷ್ಟ ಅನುಭವಿಸುತ್ತಿರುವ ಹೋಟೆಲ್ ಗಳ ಮಾಲೀಕರು ಇದೀಗ ತಮ್ಮ ಸ್ಟಾರ್ ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಿ, ಸೋಂಕಿತರಿಗೆ ಸೇವೆಗಳನ್ನು ಒದಗಿಸಲು ಮುಂದಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಕಗೊಂಡಿದ್ದು, ಕರ್ಫ್ಯೂ, ಲಾಕ್ಡೌನ್ ಸಂಕಷ್ಟದಿಂದಾಗಿ ನಷ್ಟ ಅನುಭವಿಸುತ್ತಿರುವ ಹೋಟೆಲ್ ಗಳ ಮಾಲೀಕರು ಇದೀಗ ತಮ್ಮ ಸ್ಟಾರ್ ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಿ, ಸೋಂಕಿತರಿಗೆ ಸೇವೆಗಳನ್ನು ಒದಗಿಸಲು ಮುಂದಾಗಿದ್ದಾರೆ. 

ಇದಕ್ಕಾರಿ ಕರಪತ್ರಗಳನ್ನೂ ವಿನ್ಯಾಸಗೊಳಿಸುವ ಹೋಟೆಲ್ ಗಳು, ಪ್ರತ್ಯೇಕವಾಗಿ ಸಮಯ ಕಳೆಯಲು ಬಯಸುವ ಕೊರೋನಾ ಸೋಂಕಿತರಿಗೆ ಆತಿಥ್ಯ ನೀಡುವುದಾಗಿ ತಿಳಿಸಿದ್ದಾರೆ. 

ಉಚಿತ ವೈ-ಫೈ, ಪಾರ್ಕಿಂಗ್, ಟಿವಿ, ವೈದ್ಯಕೀಯ ಚಿಕಿತ್ಸಾ ಸೌಲಭ್ಯ, ಸೋಂಕಿತರಿಗೆ ವೈದ್ಯರು, ನರ್ಸ್ ನೀಡುವ ಎಲ್ಲಾ ವೈದ್ಯಕೀಯ ಸಲಹೆಗಳ ಪಾಲನೆ, ಊಟ-ತಿಂಡಿಗಳ ಜೊತೆಗೆ ದಿನಕ್ಕೆ ಎರಡು ಬಾರಿ ಉಪಾಹಾರ, 10-55 ವರ್ಷದವರಿಗೆ ಸಿಂಗಲ್ ಅಥವಾ ಡಬಲ್ ಬೆಡ್ ಸೌಲಭ್ಯ ಗಳನ್ನು ನೀಡಲಾಗುವುದು ಎಂದು ಕರಪತ್ರದಲ್ಲಿ ಮಾಹಿತಿಗಳನ್ನು ನೀಡಿದೆ. 

ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಲು ಹೋಟೆಲ್ ಗಳು ಕೆಲವು ನಿರ್ದಿಷ್ಟ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿವೆ. ಲಲಿತ್ ಅಶೋಕ್ ಹೋಟೆಲ್ ಅಪೋಲೋ ಆಸ್ಪತ್ರೆಯೊಂದಿಗೆ, ಯೋ ಹೋಟೆಲ್ ಜಯನಗರದ ಸಾಗರ್ ಅಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹೋಟೆಲ್ ಹಾಗೂ ರೆಸ್ಟೋರೆಂಟ್ ಸಂಘ, ನಗರದಲ್ಲಿರುವ 32 ಹೋಟೆಲ್ ಗಳು 12 ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಹೋಟೆಲ್ ಉದ್ಯಮ ನಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ದೂರಾಗಲು ಇದು ಒಂದು ಉತ್ತಮ ದಾರಿಯಾಗಿದೆ. ನಾಗರೀಕರು ಹೋಟೆಲ್ ಗಳಲ್ಲಿ ಉಳಿಯುವಂತೆ ಮಾಡಲು ಇದೊಂದು ಪ್ರಯತ್ನವಾಗಿದೆ. ಈ ಮೂಲಕ ಜನರಿಗೆ ಪಾಸಿಟಿವ್ ಸಂದೇಶ ರವಾನಿಸುತ್ತಿದ್ದೇನೆ. ಇದು ಕೇವಲ ಬೆಂಗಳೂರಿನಲ್ಲಷ್ಟೇ ಅಲ್ಲದೆ, ಬೇರೆ ಬೇರೆ ನಗರ ಹಾಗೂ ರಾಜ್ಯಗಳಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿವೆ. 

ಗೋವಾದ ಹೋಟೆಲ್ ಮತ್ತು ಕ್ಯಾಸಿನೋದಿಂದ ಕರಪತ್ರವೊಂದು ಮೇಲ್ ಹಾಗೂ ವಾಟ್ಸ್'ಆ್ಯಪ್'ಗೆ ಬಂದಿತ್ತು. ಇದನ್ನು ನೋಡಿ ಸಾಕಷ್ಟು ಆಶ್ಚರ್ಯವಾಗಿತ್ತು. ವೈದ್ಯರು ಹಾಗೂ ನರ್ಸ್ ಗಳ ಸಹಾಯ ಪಡೆದು, ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ. ಲಾಕ್ಡೌನ್ ಇರುವ ಪರಿಣಾ ಗೋವಾಗೆ ಹೋಗುವುದು ಕಷ್ಟಕರವಾಗಿದೆ ಎಂದು ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಗುಣಮುಖರಾದ ಸಾಫ್ಟ್ ವೇರ್ ಎಂಜಿನಿಯರ್ ಅಭಿಷೇಕ್ ಮೆಹ್ರಾ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com