ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಗಳ ಶೂನ್ಯ ದಾಸ್ತಾನು: ಸರ್ಕಾರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ಇಲ್ಲ ಎಂದ 'ಫನಾ'

ಕೊರೋನಾ ಲಸಿಕೆಗಳ ಶೂನ್ಯ ದಾಸ್ತಾನು ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಪುನರಾರಂಭಿಸಲು ಖಾಸಗಿ ಆಸ್ಪತ್ರೆಗಳು ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಲಸಿಕೆಗಳ ಶೂನ್ಯ ದಾಸ್ತಾನು ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಪುನರಾರಂಭಿಸಲು ಖಾಸಗಿ ಆಸ್ಪತ್ರೆಗಳು ಮತ್ತಷ್ಟು ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ಕುರಿತು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ)  ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಪತ್ರ ಬರೆದಿದ್ದು, ಲಸಿಕೆ ಸರಬರಾಜು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೂ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರವಷ್ಟೇ ಅಲ್ಲ, ಭಾರತ್ ಬಯೋಟೆಕ್ ಹಾಗೂ ಸೆರಂ ಇನ್ಸ್ಟಿಟ್ಯೂಫ್ ಆಫ್ ಇಂಡಿಯಾಗೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಫನಾ ಅಧ್ಯಕ್ಷ ಡಾ.ಹೆಚ್.ಎಂ.ಪ್ರಸನ್ನ ಅವರು ಹೇಳಿದ್ದಾರೆ. 

ರೆಡ್ಡೀ'ಸ್ ಲ್ಯಾಬ್ ಫಾನ್ ಸ್ಫುಟ್ನಿಕ್ ಲಸಿಕೆಗೂ ಪತ್ರ ಬರೆದಿದ್ದೇವೆ. ಆದರೂ ಅವರೂ ಕೂಡ ಮೌನ ತಾಳಿದ್ದಾರೆ. ಖಾಸಗಿ ಆಸ್ಪತ್ರೆಗಳು ತಾವೇ ಹಣ ಖರ್ಚು ಮಾಡಿ ಲಸಿಕೆ ಖರೀದಿ ಮಾಡಬೇಕು ಎಂದು ಸರ್ಕಾರ ಎರಡು ತಿಂಗಳ ಹಿಂದೆಯೇ ಮಾಹಿತಿ ನೀಡಬೇಕಿತ್ತು. ಆದರೆ, ನಾಲ್ಕನೇ ಹಂತದ ಲಸಿಕೆ ಆರಂಭವಾಗುವ 5 ದಿನಗಳ ಹಿಂದೆ ಮಾಹಿತಿ ನೀಡಿದ್ದಾರೆ. ಇದೀಗ ನಮ್ಮ ಬಳಿ ಶೂನ್ಯ ಲಸಿಕೆ ದಾಸ್ತಾನು ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

45 ವರ್ಷದವರು ಹಾಗೂ ಅದಕ್ಕೂ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡಲಾದಲೂ ನಮಗೆ ಸರ್ಕಾರ ಲಸಿಕೆಗಳನ್ನು ನೀಡಲಿ. ಮಣಿಪಾಲ್ ಹಾಗೂ ಅಪೊಲೋ ಆಸ್ಪತ್ರೆಯಲ್ಲಿ ಮಾತ್ರ ಸ್ಟಾಕ್ ಇದೆ. ಆದರೆ, ಅದೂ ಕೂಡ ಬುಕ್ ಆಗಿವೆ ಎಂದು ತಿಳಿಸಿದ್ದಾರೆ. 

ಡಾ.ಆರ್.ರವೀಂದ್ರ ಅವರು ಮಾತನಾಡಿ, ರಾಜ್ಯ ಸರ್ಕಾರ ನಮ್ಮನ್ನು ನಿರಾಸೆಗೊಳಿಸಿದೆ. ಲಸಿಕೆಗಳ ತೀವ್ರ ಕೊರತೆ ಎದುರಾಗಿದೆ. ಈಗಾಗಲೇ ಸೀರಮ್ ಸಂಸ್ಥೆಗೆ ಪತ್ರ ಬರೆದಿದ್ದೇನೆ, ಆದರೆ, ಜುಲೈವರೆಗೂ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮುಂದಿನ ವಾರದಿಂದ 10,000 ಡೋಸ್‌ಗಳನ್ನು ನೀಡುವುದಾಗಿ ಭಾರತ್ ಬಯೋಟೆಕ್ ಹೇಳಿದೆ, ಆ ಲಸಿಕೆಗಳು 10 ದಿನಗಳವರೆಗೆ ಸಾಕಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com