ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಬೆಡ್ ಬುಕಿಂಗ್ ಪ್ರಮಾಣ ಅತ್ಯಲ್ಪ!

ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬೆಡ್ ಗಳ ಬೇಡಿಕೆ, ಆಕ್ಸಿಜನ್ ಗಳ ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಕಾಯ್ದಿರಿಸಲಾಗುತ್ತಿರುವುದು ಕೆಲವೇ ಕೆಲವು ಬೆಡ್ ಗಳನ್ನ ಎಂಬ ಮಾಹಿತಿ ಬಹಿರಂಗಗೊಂಡಿದೆ. 
ಬೆಂಗಳೂರಿನಲ್ಲಿರುವ ಆಕ್ಸಿ ಬಸ್ ಗಳು (ಸಂಗ್ರಹ ಚಿತ್ರ)
ಬೆಂಗಳೂರಿನಲ್ಲಿರುವ ಆಕ್ಸಿ ಬಸ್ ಗಳು (ಸಂಗ್ರಹ ಚಿತ್ರ)

ಬೆಂಗಳೂರು: ನಗರದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬೆಡ್ ಗಳ ಬೇಡಿಕೆ, ಆಕ್ಸಿಜನ್ ಗಳ ಬೇಡಿಕೆ ಹೆಚ್ಚಿದ್ದರೂ, ಪೋರ್ಟಲ್ ಗಳ ಮೂಲಕ ಕಾಯ್ದಿರಿಸಲಾಗುತ್ತಿರುವುದು ಕೆಲವೇ ಕೆಲವು ಬೆಡ್ ಗಳನ್ನ ಎಂಬ ಮಾಹಿತಿ ಬಹಿರಂಗಗೊಂಡಿದೆ. 

ಕಳೆದ ವಾರ ಕೋವಿಡ್+ ಆಸ್ಪತ್ರೆ ಬೆಡ್ ಮ್ಯಾನೇಜ್ಮೆಂಟ್ ವ್ಯವಸ್ಥೆ (ಸಿಹೆಚ್ ಬಿಎಂಎಸ್)  ಮೂಲಕ ಕೇವಲ 5 ಐಸಿಯು ಬೆಡ್ ಗಳನ್ನು ಬುಕ್ ಮಾಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. 

ಪೋರ್ಟಲ್ ನಲ್ಲಿ ತೋರಿಸುತ್ತಿರುವ ಕಳೆದ ವಾರದ ಮಾಹಿತಿಯ ಪ್ರಕಾರ ಬೆಡ್ ಗಳು ಬುಕ್ ಆಗಿರುವ ಪ್ರಮಾಣ 1.19 ಸರಾರಸಿ ಆಗಿದೆ. ಮೇ.7, ಮೇ.08, 12 ರಂದು ಮೂರು ಬೆಡ್ ಗಳು ನೇರವಾಗಿ ಬುಕ್ ಮಾಡಲಾಗಿತ್ತು ಹಾಗೂ ಮೇ.09 ರಂದು 20 ಹೆಚ್ ಡಿಯು, ವೆಂಟಿಲೇಟರ್ ಸಹಿತ ಐಸಿಯು ಬೆಡ್ ಗಳನ್ನು ಬುಕ್ ಮಾಡಲಾಗಿತ್ತು. ಇದೇ ವೇಳೇ ಪೋರ್ಟಲ್ ನಲ್ಲಿ ಯಾವುದೇ ಐಸಿಯು, ಆಕ್ಸಿಜನ್ ಬೆಡ್ ಗಳು ಲಭ್ಯವಿಲ್ಲ ಎಂದು ತೋರಿಸುತ್ತಿತ್ತು. 

ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಸರ್ಕಾರ ಬಿಬಿಎಂಪಿಗೆ 5,000 ಬೆಡ್ ಗಳನ್ನು ಶೇ.30 ರಷ್ಟು ಆಕ್ಸಿಜನ್ ಹೊಂದಿರುವಂತೆ ಸೃಷ್ಟಿಸಲು ಎರಡು ದಿನಗಳ ಕಾಲಾವಕಾಶ ನೀಡಿದೆ. ಮೇ.7-10 ವರೆಗೂ ನಾಲ್ಕು ದಿನಗಳಲ್ಲಿ ಪೋರ್ಟಲ್ ಮೂಲಕ 3,349 ಬೆಡ್ ಗಳನ್ನು ಕಾಯ್ದಿರಿಸಲಾಗಿತ್ತು. ಈ ಪೈಕಿ 2,222 ಬೆಡ್ ಗಳು ಸಾಮಾನ್ಯವಾದ ಬೆಡ್ ಗಳಾಗಿದ್ದರೆ, 1,043 ಬೆಡ್ ಗಳು ಹೆಚ್ ಡಿಯು, 53 ಐಸಿಯು, 31 ವೆಂಟಿಲೇಟರ್ ಗಳ ಸಹಿತ ಇರುವ ಐಸಿಯು ಬೆಡ್ ಗಳಾಗಿವೆ. ಬೆಡ್ ವ್ಯವಸ್ಥೆಯನ್ನು ಗಮನಿಸುತ್ತಿರುವ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಜನರಲ್ ಬೆಡ್ ಗಳನ್ನು ತುರ್ತಾಗಿ ಅಗತ್ಯವಿರುವವರಿಗೆ ನೀಡಲಾಗಿದ್ದು, ಹಲವು ಕೋವಿಡ್-19 ರೋಗಿಗಳು ಬೆಡ್ ಗಳಿಗೆ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಹಣ ಕೊಟ್ಟು, ಪ್ರಭಾವ ಬಳಸಿ ಐಸಿಯು, ಹೆಚ್ ಡಿಸಿ ಬೆಡ್ ಗಳಿಗೆ ವರ್ಗಾವಣೆಯಾಗುತ್ತಿರುವುದರ ಬಗ್ಗೆಯೂ ಅನುಮಾನಗಳು ಮೂಡಲಾರಂಭಿಸಿದ್ದು, ಈ ಅನುಮಾನಗಳನ್ನು ಪರಿಹರಿಸುವುದಕ್ಕೆ ಆಸ್ಪತ್ರೆಗಳಲಿಗೆ ತನ್ನಲ್ಲಿರುವ ಸೌಕರ್ಯಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com