ಕರ್ನಾಟಕ: ಕೋವಿಡ್ ಆರಂಭದಿಂದ ಇಲ್ಲಿಯವರೆಗೆ 69 ವೈದ್ಯರ ಸಾವು
ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ 8 ವೈದ್ಯರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟಾರೆ 329 ವೈದ್ಯರು ಕೊರೋನಾ ಎರಡನೇ ಅಲೆಯಲ್ಲಿ ಅಸು ನೀಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ
Published: 21st May 2021 08:43 AM | Last Updated: 21st May 2021 12:57 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ 8 ವೈದ್ಯರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟಾರೆ 329 ವೈದ್ಯರು ಕೊರೋನಾ ಎರಡನೇ ಅಲೆಯಲ್ಲಿ ಅಸು ನೀಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.
ಕೊರೋನಾ ಮೊದಲನೆ ಅಲೆಯಲ್ಲಿ ಕರ್ನಾಟಕದ 61 ವೈದ್ಯರು ಸಾವನ್ನಪ್ಪಿದ್ದರು. ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರಿಗೆ ಸೂಕ್ತ ಸಮಯದಲ್ಲಿ ಬೆಡ್ ಮತ್ತು ಚಿಕಿತ್ಸೆ ದೊರೆತಿರಲಿಲ್ಲ, ಅವರೆಲ್ಲಾ ಕೊರೋನಾ ವಾರಿಯರ್ಸ್ ಎಂದು ಹೇಳಿದೆ.
ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರಿಗೆ ಸೋಂಕು ತಗುಲಿತ್ತು ಎಂದು ಐಎಂಎ ಬೆಂಗಳೂರು ಅಧ್ಯಕ್ಷ ಡಾ.ಶ್ರೀನಿವಾಸ್ ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಇಬ್ಬರು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಮತ್ತು ಹುಬ್ಬಳ್ಳಿಯ ಇಬ್ಬರು ವೈದ್ಯರು ಕೊರೋನಾ ಎರಡನೇ ಅಲೆಗೆ ಬಲಿಯಾಗಿದ್ದಾರೆ.
ಚನ್ನಪಟ್ಟಣ, ಚಾಮರಾಜನಗರ, ವಿಜಯಪುರ, ಕಲಬುರಗಿ ಮತ್ತು ಮೈಸೂರು ತಲಾ ಒಬ್ಬ ವೈದ್ಯರೂ ಸಾವನ್ನಪ್ಪಿದ್ದಾರೆ. ಆರೋಗ್ಯ ಕಾರ್ಯಕರ್ತರಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಕೋರಿ ಐಎಂಎ ರಾಜ್ಯ ಶಾಖೆ ಸರ್ಕಾರಕ್ಕೆ ಪತ್ರ ಬರೆದ ನಂತರ, ಪ್ರತಿ ಜಿಲ್ಲೆಯ 10% ಹಾಸಿಗೆಗಳನ್ನು ಅವರಿಗೆ ಕಾಯ್ದಿರಿಸಲಾಗಿದೆ ಎಂದು ಡಾ.ಶ್ರೀನಿವಾಸ ಹೇಳಿದರು.