ಕೋವಿಡ್-19 ಮೂರನೇ ಅಲೆ: ಮುಂಜಾಗ್ರತಾ ಕ್ರಮವಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ರಚನೆ- ಅಶ್ವತ್ಥ ನಾರಾಯಣ
ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಮೂರನೇ ಅಲೆಯನ್ನು ತಡೆಗಟ್ಟಲು ಉನ್ನತ ಮಟ್ಟದ ನುರಿತ ವೈದ್ಯರ, ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
Published: 26th May 2021 09:40 PM | Last Updated: 26th May 2021 10:53 PM | A+A A-

ಡಿಸಿಎಂ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಬೆಂಗಳೂರು: ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋವಿಡ್-19 ಮೂರನೇ ಅಲೆಯನ್ನು ತಡೆಗಟ್ಟಲು ಉನ್ನತ ಮಟ್ಟದ ನುರಿತ ವೈದ್ಯರ, ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಈ ಕುರಿತು ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ, ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ನಿಮ್ಹಾನ್ಸ್ ನಿರ್ದೇಶಕ ಡಾ. ಸತೀಶ್ ಗಿರಿಮಾಜಿ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಪ್ರಾಧ್ಯಾಪಕ ಡಾ. ಬಸವರಾಜ್ ಜಿ.ವಿ.ಡಬ್ಲ್ಯೂಎಚ್ ಒ ಪ್ರಾದೇಶಿಕ ತಂಡದ ನಾಯಕ ಡಾ. ಆಶಿಶ್ ಸಥಪತಿ, ಅಂಕಾಲಾಜಿಸ್ಟ್ ಡಾ. ಅಜಯ್ ಕುಮಾರ್, ಪಿಡಿಯಾಟ್ರಿಶಿಯನ್ ಡಾ. ಅರವಿಂದ್ ಶೆಣೈ, ಸಾಗರ್ ಆಸ್ಪತ್ರೆಯ ಡಾ. ರಘುನಾಥ್ ಯು, ಸೇರಿದಂತೆ 12 ಮಂದಿ ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಾಗಿ #COVID19 3ನೇ ಅಲೆಯನ್ನು ತಡೆಗಟ್ಟಲು ಉನ್ನತ ಮಟ್ಟದ ನುರಿತ ವೈದ್ಯರ/ತಜ್ಞರ ಸಮಿತಿ ರಚಿಸಲಾಗಿದೆ.
2ನೇ ಅಲೆಯ ನಿರ್ವಹಣೆ ಜತೆಗೆ, ಮಕ್ಕಳ ಆರೋಗ್ಯ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ರೂಪುರೇಷೆ, ಸಿದ್ಧತೆ, ಅನುಷ್ಠಾನಕ್ಕೆ ಸರ್ಕಾರ ಸಮನ್ವಯದಿಂದ ಕಾರ್ಯನಿರ್ವಹಿಸಲಿದೆ.#KarnatakaFightsCorona pic.twitter.com/2c6v0D3umy— Dr. Ashwathnarayan C. N. (@drashwathcn) May 26, 2021
ಕೊರೋನಾ ಎರಡನೇ ಅಲೆಯ ನಿರ್ವಹಣೆ ಜೊತೆಗೆ ಮಕ್ಕಳ ಆರೋಗ್ಯ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ರೂಪುರೇಷೆ, ಸಿದ್ಧತೆ, ಅನುಷ್ಠಾನಕ್ಕೆ ಸರ್ಕಾರ ಸಮನ್ವಯದಿಂದ ಕಾರ್ಯನಿರ್ವಹಿಸಲಿದೆ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.