ಕೊರೋನಾ 3ನೇ ಅಲೆ ಎದುರಿಸಲು ತಜ್ಞರ ಸಮಿತಿ ರಚನೆ: ತಂಡದಲ್ಲಿ ಮಹಿಳಾ ವೈದ್ಯರಿಗೆ ಸ್ಥಾನ ಇಲ್ಲ!

ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಕೋವಿಡ್ ಉನ್ನತ ವೈದ್ಯ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಒಬ್ಬ ಮಹಿಳಾ ವೈದ್ಯೆಗೂ ಸ್ಥಾನ ನೀಡದಿರುವುದು ಕಂಡು ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯ ಸರ್ಕಾರ ಕೋವಿಡ್ ಉನ್ನತ ವೈದ್ಯ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಒಬ್ಬ ಮಹಿಳಾ ವೈದ್ಯೆಗೂ ಸ್ಥಾನ ನೀಡದಿರುವುದು ಕಂಡು ಬಂದಿದೆ. 

ನಾರಾಯಣ ಹೆಲ್ತ್ ಮುಖ್ಯಸ್ಥ ಡಾ.ದೇವಿಶ್ರೀ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ರಾಜ್ಯದಲ್ಲಿ ಕೋವಿಡ್​ ಉನ್ನತ ವೈದ್ಯ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಒಟ್ಟು 13 ಮಂದಿ ವೈದ್ಯರಿದ್ದಾರೆ. 

“ಗರ್ಭಧಾರಣೆಯಿಂದ ಮಾತೃತ್ವ ಸಮಯದವರೆಗೆ, ನವಜಾತ ಶಿಶುವಿನ ಆರೈಕೆ ನಿರಂತರವಾಗಿದೆ, ಜಾಗತಿಕ ವೇದಿಕೆಗಳಲ್ಲಿ ಮಹಿಳೆಯರನ್ನು ಪ್ರತಿನಿಧಿಸಲಾಗುತ್ತದೆ. ಆದರೆ, ಸ್ಥಳೀಯ ವೇದಿಕೆಗಳಲ್ಲಿ ಸ್ಥಾನಮಾನ ನೀಡಲಾಗುತ್ತಿಲ್ಲ. ಕೊರೋನಾ 2ನೇ ಅಲೆಯು ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮ ಬೀರಿದೆ. ಸಾಕಷ್ಟು ಗರ್ಭಿಣಿಯರು ಕೊರೋನಾ ಸೋಂಕಿಗೊಳಗಾಗಿದ್ದಾರೆ ಎಂದು ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯೆ ಡಾ.ಹೇಮಾ ದಿವಾಕರ್ ಅವರು ಹೇಳಿದ್ದಾರೆ. 

ಕೊರೋನಾ ಮೂರನೇ ಅಲೆ ನಿಯಂತ್ರಿಸಲು ಬಲವಾದ ನಿರ್ಧಾರ ತೆಗೆದುಕೊಳ್ಳಭೇಕಿದೆ. ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞರು ಸಮಿತಿಯಲ್ಲಿರುವುದು ಉತ್ತಮವಾಗಿರುತ್ತದೆ. ರಾಜ್ಯದಲ್ಲಿ ಸಾಕಷ್ಟು ಉತ್ತಮ ಮಹಿಳಾ ವೈದ್ಯರಿದ್ದಾರೆ. ಅಂತಹವರಿಗೆ ಸಮಿತಿಯಲ್ಲಿ ಸ್ಥಾನ ನೀಡಬೇಕೆಂದು ಬೆಂಗಳೂರಿನ ಐಎಂಎ ಉಪಾಧ್ಯಕ್ಷೆ ಡಾ.ಅನುರಾಧಾ ಪರಮೇಶ್ ಅವರು ಹೇಳಿದ್ದಾರೆ. 

ಸಮಿತಿ ಕುರಿತು ನಿನ್ನೆಯಷ್ಟೇ ಡಾ. ಸಿ ಎನ್​ ಅಶ್ವತ್ಥ ನಾರಾಯಣ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಸಮಿತಿಯಲ್ಲಿರುವ ವೈದ್ಯರ ಕುರಿತು ಮಾಹಿತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com