ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆಯುತ್ತಿರುವ ಬ್ಲ್ಯಾಕ್ ಫಂಗಸ್: ಔಷಧಿಗಳ ಕೊರತೆಯಿಂದ ಆತಂಕ ಹೆಚ್ಚಳ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ರೋಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವಲ್ಲೇ. ಈ ರೋಗಕ್ಕೆ ನೀಡುವ ಔಷಧಿಯ ತೀವ್ರ ಕೊರತೆ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕಾಡತೊಡಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ರೋಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈ ನಡುವಲ್ಲೇ. ಈ ರೋಗಕ್ಕೆ ನೀಡುವ ಔಷಧಿಯ ತೀವ್ರ ಕೊರತೆ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳನ್ನು ಕಾಡತೊಡಗಿದೆ. 

ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ರೋಗದಿಂದ ಬಳಲುತ್ತಿರುವವರಿಗೆ ಆಂಫೊಟೆರಿಸಿನ್-ಬಿ ಔಷಧಿಯನ್ನು ನೀಡಲಾಗುತ್ತಿದೆ. ಒಬ್ಬ ರೋಗಿಗೆ ಚಿಕಿತ್ಸೆ ನೀಡಲು ಕನಿಷ್ಠ ಪಕ್ಷ ಆಂಫೊಟೆರಿಸಿನ್-ಬಿ 60 ವಯಲ್ಸ್ ಗಳು ಬೇಕು. ಅಂದರೆ ಒಟ್ಟು 36,000 ವಯಲ್ಸ್ ಗಳು ಅಗತ್ಯವಿದೆ. ಆದರೆ, ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ರಾಜ್ಯಕ್ಕೆ ಮೇ.26ರವರೆಗೆ 5,180 ವಯಲ್ಸ್ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದೆ. 

ಕೇಂದ್ರ ಸರ್ಕಾರ ಹೆಚ್ಚವರಿಯಾಗಿ 5,190 ವಯಲ್ಸ್ ಚುಚ್ಚುಮದ್ದನ್ನು ನೀಡುವುದಾಗಿ ಪ್ರಕಟಿಸಿದೆ. ಕೇಂದ್ರ ಸರ್ಕಾರ ಈ ಪ್ರಮಾಣದ ಚುಚ್ಚುಮದ್ದನ್ನು ನೀಡಿದರೂ, ಕೊರತೆ ಮುಂದುವರೆಯಲಿದೆ. 

ಈ ಮೊದಲು ಕೇಂದ್ರ ಸರ್ಕಾರ ನೀಡಿದ್ದ ವಯಲ್ಸ್ ಸಂಪೂರ್ಣವಾಗಿ ಖಾಲಿಯಾಗಿದ್ದು, ಹೊಸದಾಗಿ 5,190 ವಯಲ್ಸ್ ಗಳು ಬಂದರೂ ಅದು ತಾತ್ಕಾಲಿಕ ಪರಿಹಾರವನ್ನಷ್ಟೇ ನೀಡಲಿದೆ. 

ಬುಧವಾರ ಬೆಳಗಿನಿಂದಲೇ ಆಂಫೊಟೆರಿಸಿನ್-ಬಿ ಚುಚ್ಚುಮದ್ದಿನ ಕೊರತೆ ಶುರುವಾಗಿದೆ. ಸರ್ಕಾರದಿಂದ 40 ವಯಲ್ಸ್ ಗಳು ಬಂದಿತ್ತು. ಆದರೆ ಅದೂ ಕೂಡ ಕಾಲಿಯಾಗಿದೆ. ಇದೀಗ ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮ ಬಳಿ ಔಷಧಿಗಳಿಲ್ಲ. ಕಳೆದ ಎರಡು ವಾರಗಳಿಂದ ಆಸ್ಪತ್ರೆಗೆ 63 ಮಂದಿ ಬ್ಲ್ಯಾಕ್ ಫಂಗಸ್ ರೋಗಿಗಳು ದಾಖಲಾಗಿದ್ದಾರೆ. ಇದರಲ್ಲಿ 55 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 65 ಮಂದಿ ಸಾವನ್ನಪ್ಪಿದ್ದಾರೆಂದು ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಸಂಜೀವ್ ಲೆವಿನ್ ಅವರು ಹೇಳಿದ್ದಾರೆ.

ಶತಮಾನದಷ್ಟು ಹಳೆಯ ರೋಗ ಇದಾಗಿತ್ತು. ಇದೀಗ ಕೊರೋನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ. ಸೋಂಕಿಗೊಳಗಾದವರು ಅನಿಯಂತ್ರಿತ ಮಧುಮೇಹ ಹೊಂದಿದ್ದರೆ ಅಂತಹವರಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇಮ್ಯುನೊ-ಸಪ್ರೆಸೆಂಟ್ ಔಷಧಿ ಹೆಚ್ಚಾಗಿ ಬಳಕೆ ಮಾಡುತ್ತಿರುವುದೂ ಕೂಡ ರೋಗ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಈ ಹಿಂದೆ ವರ್ಷದಲ್ಲಿ 5 ಪ್ರಕರಣಗಳು ಕಂಡು ಬರುವುದೂ ಕೂಡ ಕಷ್ಟಕರವಾಗಿತ್ತು. ಸಣ್ಣ ಸಣ್ಣ ಆಸ್ಪತ್ರೆಗಳಲ್ಲಿಯೂ ಒಂದು ಪ್ರಕರಣಗಳೂ ವರದಿಯಾಗುತ್ತಿರಲಿಲ್ಲ. ಆದರೆ, ಇಂದು ಪ್ರತೀ ಆಸ್ಪತ್ರೆಯಲ್ಲಿ 35 ಪ್ರಕರಣಗಳು ಪತ್ತೆಯಾಗುತ್ತಿವೆ. ರೋಗ ಕಡಿಮೆ ಮಾಡಲು ಸರ್ಕಾರದಿಂದ ಆಂಫೊಟೆರಿಸಿನ್-ಬಿ ಚುಚ್ಚುಮದ್ದುಗಳನ್ನು ಪಡೆಯುತ್ತಿದ್ದೇವೆಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ರಮಣ್ ಅವರು ಹೇಳಿದ್ದಾರೆ. 

ಆಂಫೊಟೆರಿಸಿನ್-ಬಿ ಚುಚ್ಚುಮದ್ದಿನ ಕೊರತೆ ಸಮಸ್ಯೆಯನ್ನು ತಂದೊಡ್ಡುತ್ತಿದೆ. ನಾವು ಉತ್ತಮವಾಗಿ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದೇವೆ. ಆದರೆ, ಚಿಕಿತ್ಸೆಗೆ ಪ್ರಮುಖವಾಗಿರುವ ಔಷಧಿಗಳ ಕೊರತೆಯೇ ಎದುರಾಗಿರುವುದು ಹಿನ್ನೆಡೆಯನ್ನುಂಟು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾಗುವುದಕ್ಕೂ ಮುನ್ನ ವರ್ಷಕ್ಕೆ 3-4 ಪ್ರಕರಣಗಳಷ್ಟೇ ಪತ್ತೆಯಾಗುತ್ತಿದ್ದವು. ಇತ್ತೀಚೆಗಷ್ಟೇ 70 ಮಂದಿ ರೋಗಿಗಳಿಗೆ ನಾವು ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಆದರೆ, ಔಷಧಿಗಳು ಸುಲಭವಾಗಿ ಸಿಗುತ್ತಿಲ್ಲ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯ ಸುಶೀನ್ ದತ್ ಅವರು ಹೇಳಿದ್ದಾರೆ. 

ಕೋವಿಡ್'ಗೂ ಮೊದಲು ಅಸಾಮಾನ್ಯ ಸೋಂಕಾಗಿತ್ತು. 1990 ರ ನಂತರದ ವರ್ಷದಲ್ಲಿ ನಮಗೆ 30 ಪ್ರಕರಣಗಳೂ ಕೂಡ ಬರುತ್ತಿರಲಿಲ್ಲ. ಕಳೆದ ಎರಡು ವಾರಗಳಲ್ಲಿ ಆಸ್ಪತ್ರೆಗೆ 63 ರೋಗಿಗಳು ಬಂದಿದ್ದಾರೆಂದು ಡಾ.ಲೆವಿನ್ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com