ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟಿರುವ ವೆಂಟಿಲೇಟರ್ ಗಳ ರಿಪೇರಿಗೆ ಬಾಸ್ ಕಂಪನಿ ಒಪ್ಪಿಗೆ- ಡಾ. ಅಶ್ವತ್ಥ ನಾರಾಯಣ

 ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟಿರುವ ವೆಂಟಿಲೇಟರ್ ಗಳ ದುರಸ್ಥಿಗೆ ಬಾಸ್ ಕಂಪನಿ ಮುಂದಾಗಿರುವುದಾಗಿ ರಾಜ್ಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರು ಆದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಟ್ಟಿರುವ ವೆಂಟಿಲೇಟರ್ ಗಳ ದುರಸ್ಥಿಗೆ ಬಾಸ್ ಕಂಪನಿ ಮುಂದಾಗಿರುವುದಾಗಿ
ರಾಜ್ಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷರು ಆದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಈ ಸಂಬಂಧ ನಿನ್ನೆ ಬಾಸ್ ಕಂಪನಿ ಪ್ರತಿನಿಧಿ ರಮೇಶ್ ಸಾಲಿಗ್ರಾಮ ಅವರೊಂದಿಗೆ ಚರ್ಚೆ ನಡೆಸಿದ ಉಪ ಮುಖ್ಯಮಂತ್ರಿ, ಸಿಎಸ್ ಆರ್ ನೆರವಿನಿಂದ ಕೆಟ್ಟಿರುವ
ವೆಂಟಿಲೇಟರ್ ಗಳನ್ನು ಉಚಿತವಾರಿ ದುರಸ್ತಿ ಮಾಡಿಕೊಡಲು ಬಾಸ್ ಕಂಪನಿ ಒಪ್ಪಿರುವುದಾಗಿ ತಿಳಿಸಿದರು.

ವೆಂಟಿಲೇಟರ್  ಎಷ್ಟು ಮತ್ತು ಯಾವ ಆಸ್ಪತ್ರೆಗಳಲ್ಲಿ ಕೆಟ್ಟಿವೆ ಎಂಬುದನ್ನು ಪತ್ತೆ ಮಾಡಿ ತಿಳಿಸಲು ಸರ್ಕಾರಕ್ಕೆ ಬಾಸ್ ಕಂಪನಿ ತಿಳಿಸಿರುವುದಾಗಿ ಅಶ್ವತ್ಥ ನಾರಾಯಣ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com