ಹಳೆಯ ನಿಯಮ ತಿದ್ದುಪಡಿ: ರೈಲ್ವೆ ನೌಕರರ ಎಲ್ಲಾ ದತ್ತು ಮಕ್ಕಳು ಈಗ ವೈದ್ಯಕೀಯ ಆರೈಕೆ ಪಡೆಯಬಹುದು

ಭಾರತೀಯ ರೈಲ್ವೆ ನೌಕರರು ದತ್ತು ಪಡೆದಿರುವ ಎಲ್ಲಾ ಮಕ್ಕಳಿಗೂ ಇದೀಗ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಲಭ್ಯವಿದೆ. 21 ವರ್ಷದ ಹಳೆಯ ನಿಯಮ ತಿದ್ದುಪಡಿ ಮಾಡಿ ಇದೇ ತಿಂಗಳ 25 ರಂದು ರೈಲ್ವೆ ಮಂಡಳಿ ಈ ಆದೇಶವನ್ನು ಹೊರಡಿಸಿದೆ.
ವಿಭಾಗೀಯ ರೈಲ್ವೆ ಆಸ್ಪತ್ರೆ
ವಿಭಾಗೀಯ ರೈಲ್ವೆ ಆಸ್ಪತ್ರೆ

ಬೆಂಗಳೂರು: ಭಾರತೀಯ ರೈಲ್ವೆ ನೌಕರರು ದತ್ತು ಪಡೆದಿರುವ ಎಲ್ಲಾ ಮಕ್ಕಳಿಗೂ ಇದೀಗ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಲಭ್ಯವಿದೆ. 21 ವರ್ಷದ ಹಳೆಯ ನಿಯಮ ತಿದ್ದುಪಡಿ ಮಾಡಿ ಇದೇ ತಿಂಗಳ 25 ರಂದು ರೈಲ್ವೆ ಮಂಡಳಿ ಈ ಆದೇಶವನ್ನು ಹೊರಡಿಸಿದೆ. ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಇದನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬೆಂಗಳೂರು ರೈಲ್ವೆ ವಿಭಾಗದ ಎಂಜಿನಿಯರಿಂಗ್ ಇಲಾಖೆಯ ಕಚೇರಿ ಅಧೀಕ್ಷಕಿಯಾಗಿ ಕೆಲಸ ಮಾಡುವ ವೀಣಾ ನಾಯಕ್,
ಒಂದು ಬಾಲಕ ಹಾಗೂ ಬಾಲಕಿಯನ್ನು ದತ್ತು ಪಡೆದಿದ್ದರು. ಅವರಿಬ್ಬರು ಇದೀಗ ಕ್ರಮವಾಗಿ 14 ಮತ್ತು 13 ವಯಸ್ಸಿನವರಾಗಿದ್ದಾರೆ. 
ಅವರು ತನ್ನ ಮಕ್ಕಳ ಪರವಾಗಿ ಜೂನ್ 2020ರಲ್ಲಿ ಈ ವಿಚಾರವನ್ನು ಕೈಗೆತ್ತಿಕೊಂಡರು. ವರ್ಷದ ನಂತರ ಅದು ಫಲ ನೀಡಿದೆ.

ಪ್ರಸ್ತುತ ಹಾಗೂ ಹಿಂದಿನ ನೌಕರರ ಎಲ್ಲಾ ಕುಟುಂಬ ಸದಸ್ಯರಿಗೆ ನೀಡಲಾಗಿರುವ ವಿಶಿಷ್ಟ ವೈದ್ಯಕೀಯ ಗುರುತಿನ ಕಾರ್ಡ್ ನ್ನು ಪಡೆಯಲು ಸಾಧ್ಯವಾಗದಿದ್ದಾಗ ನಾಯಕ್, ತಮ್ಮ ಗಮನಕ್ಕೆ ತಂದಿದ್ದರು. ದೇಶದಲ್ಲಿನ ಯಾವುದೇ ರೈಲ್ವೆ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಲಭ್ಯವಿರುವುದಾಗಿ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ, ಸಮನ್ವಯ, ಕೆ ಆಸಿಫ್ ಹಫೀಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. 

ನಿಯಮಗಳ ಪ್ರಕಾರ, ರೈಲ್ವೆ ಆಸ್ಪತ್ರೆ, ಅದರಲ್ಲಿ ಸಂಯೋಜನೆಗೊಂಡ ಖಾಸಗಿ ಆಸ್ಪತ್ರೆಗಳಲ್ಲಿ ದತ್ತು ಪಡೆದ ಒಂದು ಮಗುವಿಗೆ ಮಾತ್ರ
ಉಚಿತ ದರದಲ್ಲಿ ಸೌಲಭ್ಯ ದೊರೆಯಲಿದೆ ಎಂದು ಅವರು ತಿಳಿಸಿದರು.

ನೈರುತ್ಯ ರೈಲ್ವೆಯಾದ್ಯಂತ ಸುಮಾರು 37 ಸಾವಿರ ಕುಟುಂಬಗಳಿಗೆ ವೈದ್ಯಕೀಯ ಸೌಲಭ್ಯವಿದೆ. ಹೆಚ್ಚಿನ ಮಕ್ಕಳನ್ನು ದತ್ತು ಪಡೆಯಲು ಹಿಂಜರಿಯುವ ರೈಲ್ವೆ ನೌಕರರಿಗೆ ಇದೊಂದು ಪ್ರೇರಣೆಯಾಗಲಿದೆ. ವೀಣಾ ನಾಯಕ್ ಅವರು ಈ ವಿಷಯವನ್ನು ಕೈಗೆತ್ತಿಕೊಂಡಿದ್ದಕ್ಕೆ ಸಂತೋಷವಾಗಿದೆ ಎಂದು ಹಫೀಜ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com