ವಿಕ್ರಂ ಇನ್ವೆಸ್ಟ್​ಮೆಂಟ್ ವಂಚನೆ ಪ್ರಕರಣ: 35.70 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ವಿಕ್ರಂ ಇನ್ವೆಸ್ಟ್​ಮೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಕ್ರಂ ಇನ್ವೆಸ್ಟ್​ಮೆಂಟ್​ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಕ್ರಂ ಇನ್ವೆಸ್ಟ್​ಮೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಕ್ರಂ ಇನ್ವೆಸ್ಟ್​ಮೆಂಟ್​ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಜಮೀನು, ಕಚೇರಿ, ಫ್ಲ್ಯಾಟ್ಸ್, ಬ್ಯಾಂಕ್ ಬ್ಯಾಲೆನ್ಸ್ ಸೇರಿ ಒಟ್ಟು ರೂ.35.70 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಂಸ್ಥೆಯ ವಿರುದ್ಧ ನಗರದ ಬನಶಂಕರಿ ಪೊಲೀಸ್ ಠಾಣೆಯಲ್ಲಿ 2018ರ ಮಾರ್ಚ್ 3 ರಂದು ಎಫ್ಐಆರ್ ದಾಖಲಾಗಿತ್ತು. ಸಂಸ್ಥೆಯ ಪಾಲುದಾರರು ಮತ್ತು ಇತರೆ ಸಹಚರರಾದ ರಾಘವೇಂದ್ರ ಶ್ರೀನಾಥ್ ಮತ್ತು ಅವರ ಸಹಚರರಾದ ಕೆಪಿ ನರಸಿಂಹಮೂರ್ತಿ, ಎಂ ಪ್ರಹ್ಲಾದ, ಕೆಸಿ ನಾಗರಾಜ್ ಮತ್ತು ಸೂತ್ರಂ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್‌ ಆಧಾರದ ಮೇಲೆ ಸಂಸ್ಥೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ತನಿಖೆ ನಡೆಸುತ್ತಿದೆ.

‘ಸಂಸ್ಥೆಯ ಪಾಲುದಾರರಾದ ರಾಘವೇಂದ್ರ ಶ್ರೀನಾಥ್‌, ಕೆ.ಪಿ.ನರಸಿಂಹಮೂರ್ತಿ, ಎಂ.ಪ್ರಹ್ಲಾದ್‌, ಕೆ.ಸಿ.ನಾಗರಾಜ್ ಹಾಗೂ ಸೂತ್ರಂ ಸುರೇಶ್‌ ಅವರು ಜನರಿಗೆ ವಂಚಿಸಿದ್ದಾರೆ. ವಿಕ್ರಮ್‌ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡಿದರೆ, ಕಮಾಡಿಟಿ ಟ್ರೇಡಿಂಗ್‌ ಮಾಡಿ ಅಧಿಕ ಆದಾಯ ನೀಡುವ ಆಮಿಷ ಒಡ್ಡಿದ್ದರು. ಇದನ್ನು ನಂಬಿ ಸಾಕಷ್ಟು ಜನರು ಹೂಡಿಕೆ ಮಾಡಿದ್ದರು. ವಾರ್ಷಿಕ ಶೇ 30–35ರಷ್ಟು ಆದಾಯದ ಆಮಿಷವೊಡ್ಡಿ, ಜನರಿಂದ ಹಣ ಸಂಗ್ರಹಿಸಿದ್ದರು ಎಂದು ಇಡಿ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com