ಮಕ್ಕಳ ಕಳ್ಳಸಾಗಣೆ: ಅಕ್ಟೋಬರ್ ನಲ್ಲಿ 79 ಮಕ್ಕಳನ್ನು ರಕ್ಷಿಸಿದ ಆರ್ ಪಿಎಫ್ ತಂಡ
ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ 17 ಬಾಲಕಿಯರು ಸೇರಿದಂತೆ 79 ಮಕ್ಕಳನ್ನು ರೈಲ್ವೇ ಸಂರಕ್ಷಣಾ ಪಡೆಯ ಕಳ್ಳಸಾಗಾಣಿಕೆ ನಿಗ್ರಹ ದಳ ರಕ್ಷಿಸಿದ್ದು ಮಕ್ಕಳನ್ನು ಎನ್ಜಿಒ ಅಥವಾ ಪೋಷಕರಿಗೆ ಹಸ್ತಾಂತರಿಸಲಾಗಿದೆ.
Published: 04th November 2021 02:35 PM | Last Updated: 04th November 2021 02:35 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಳೆದ ಅಕ್ಟೋಬರ್ ತಿಂಗಳೊಂದರಲ್ಲೇ 17 ಬಾಲಕಿಯರು ಸೇರಿದಂತೆ 79 ಮಕ್ಕಳನ್ನು ರೈಲ್ವೇ ಸಂರಕ್ಷಣಾ ಪಡೆಯ ಕಳ್ಳಸಾಗಾಣಿಕೆ ನಿಗ್ರಹ ದಳ ರಕ್ಷಿಸಿದ್ದು ಮಕ್ಕಳನ್ನು ಎನ್ಜಿಒ ಅಥವಾ ಪೋಷಕರಿಗೆ ಹಸ್ತಾಂತರಿಸಲಾಗಿದೆ.
ರೈಲ್ವೆ ಸಂರಕ್ಷಣಾ ಪಡೆ 18,963 ರೂಪಾಯಿ ಮೌಲ್ಯದ 14ಕಾಯ್ದಿರಿಸಿದ ಟಿಕೆಟ್ಗಳು, 1,18,253 ರೂಪಾಯಿ ಮೌಲ್ಯದ ಬಳಿಸಿದ 120 ಟಿಕೆಟ್ಗಳು ಮತ್ತು 3,762 ರೂಪಾಯಿ ಮೌಲ್ಯದ ಮೂರು ರದ್ದಾದ ಟಿಕೆಟ್ಗಳನ್ನು ವಶಪಡಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
13,31,450 ರೂ. ಮೌಲ್ಯದ ಲ್ಯಾಪ್ಟಾಪ್ಗಳು, ಮೊಬೈಲ್ಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ರೈಲುಗಳು ಮತ್ತು ನಿಲ್ದಾಣಗಳಿಂದ ವಶಪಡಿಸಿಕೊಳ್ಳಲಾಗಿದ್ದು ಅವುಗಳನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
91,670 ಮೌಲ್ಯದ ಮದ್ಯದ ಬಾಟಲಿಗಳು ಮತ್ತು ಸ್ಯಾಚೆಟ್ಗಳಂತಹ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.