ಇಂಧನ ಬೆಲೆ ಇಳಿಕೆ ನಂತರ, ರಾಜ್ಯದ ವಿವಿಧ ನಗರದಲ್ಲಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಮಾಡಿದ ನಂತರ ವಾಹನ ಸವಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಹಿಂದೆ ರೂ.113. 93 ಪೈಸೆಯಿದ್ದ  ಪೆಟ್ರೋಲ್ ಬೆಲೆ ಇದೀಗ ರೂ.100.58 ಪೈಸೆಯಾಗಿದೆ. ಡೀಸೆಲ್ ಬೆಲೆ ರೂ. 104.50 ಪೈಸೆಯಿಂದ ರೂ.85.01ಪೈಸೆಯಷ್ಟಾಗಿದೆ.
ಪೆಟ್ರೋಲ್ , ಡೀಸೆಲ್ ದರ ಕುರಿತ ಪಟ್ಟಿ
ಪೆಟ್ರೋಲ್ , ಡೀಸೆಲ್ ದರ ಕುರಿತ ಪಟ್ಟಿ

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಮಾಡಿದ ನಂತರ ವಾಹನ ಸವಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಹಿಂದೆ ರೂ.113. 93 ಪೈಸೆಯಿದ್ದ  ಪೆಟ್ರೋಲ್ ಬೆಲೆ ಇದೀಗ ರೂ.100.58 ಪೈಸೆಯಾಗಿದೆ. ಡೀಸೆಲ್ ಬೆಲೆ ರೂ. 104.50 ಪೈಸೆಯಿಂದ ರೂ.85.01ಪೈಸೆಯಷ್ಟಾಗಿದೆ.

ಬೆಳಗಾವಿಯಲ್ಲಿ ರೂ. 113. 63 ಪೈಸೆಯಿಂದ ರೂ.100.30 ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ ರೂ. 104.24 ಪೈಸೆಯಿಂದ ರೂ. 84. 79 ಪೈಸೆಗೆ ಇಳಿದಿದೆ. ಚಿತ್ರದುರ್ಗದಲ್ಲಿ ರೂ. 115.80 ಪೈಸೆಯಿದ್ದ ಪೆಟ್ರೋಲ್ ಇದೀಗ ರೂ. 102. 32 ಪೈಸೆಯಾಗಿದೆ. ಡೀಸೆಲ್ ರೂ. 106.06 ಪೈಸೆಯಿಂದ ರೂ. 86. 47 ಪೈಸೆಯಷ್ಟಾಗಿದೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನೂ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನೆಕಾ ಗಾಂಧಿ ಒತ್ತಾಯ
ದಾವಣಗೆರೆಯಲ್ಲಿ ರೂ. 115. 91 ಪೈಸೆಯಿಂದ ರೂ. 102. 35 ಪೈಸೆಗೆ ಪೆಟ್ರೋಲ್ ಬೆಲೆ ಇಳಿದಿದ್ದರೆ, ಡೀಸೆಲ್ ಬೆಲೆ ರೂ. 106.17 ಪೈಸೆಯಿಂದ ರೂ. 86. 49 ಪೈಸೆಗೆ ಕಡಿಮೆಯಾಗಿದೆ. ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ವಿಜಯಪುರ ನಗರದಲ್ಲಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಈ ರೀತಿಯಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com