ಐಸಿಸ್ ನೊಂದಿಗೆ ನಂಟು ಆರೋಪ: ಬೆಂಗಳೂರಿನಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ

ನಿಷೇಧಿತ ಇಸ್ಲಾಮಿಕ್ ಸ್ಟೇಟ್  (ಐಸಿಸ್) ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಶಂಕಿತ ಉಗ್ರನೊಬ್ಬನನ್ನು ಎನ್ ಐಎ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.  
ಎನ್ಐಎ ಅಧಿಕಾರಿಗಳ ಸಾಂದರ್ಭಿಕ ಚಿತ್ರ
ಎನ್ಐಎ ಅಧಿಕಾರಿಗಳ ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಷೇಧಿತ ಇಸ್ಲಾಮಿಕ್ ಸ್ಟೇಟ್  (ಐಸಿಸ್) ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಶಂಕಿತ ಉಗ್ರನೊಬ್ಬನನ್ನು ಎನ್ ಐಎ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.   ನಗರದ ಜುಹಾಬ್ ಹಮೀದ್ ಶಕೀಲ್ ಮನ್ನಾ ಅಲಿಯಾಸ್ ಜುಹೀಬ್ ಮನ್ನಾ ಬಂಧಿತ ಆರೋಪಿ.

 ನಗರದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಈತ ಈ ಹಿಂದೆ ಬಂಧನಕ್ಕೊಳಗಾದ ಇರ್ಫಾನ್ ನಾಸೀರ್, ಮೊಹಮ್ಮದ್ ಶಹೀಬ್, ಮೊಹಮ್ಮದ್ ತೌಕೀರ್ ಜೊತೆ ಸೇರಿ ಐಸಿಸ್ ಸಂಘಟನೆ ಸದಸ್ಯರ ಜೊತೆಗೆ ನಂಟು ಹೊಂದಿದ್ದ. ಕರ್ನಾಟಕ ಸೇರಿ ದಕ್ಷಿಣ ಭಾರತದ ಯುವಕರನ್ನು ಐಸಿಸಸ್ ಗೆ ನೇಮಿಸಿ ಸಿರಿಯಾಗೆ ಕಳುಹಿಸಿ ಉಗ್ರ ಸಂಘಟನೆಯನ್ನು ವಿಸ್ತರಿಸುತ್ತಿದ್ದ ಎನ್ನಲಾಗಿದೆ.

2020 ಆ.17 ರಂದು  ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಬೆಂಗಳೂರು ಮೂಲದ ವೈದ್ಯ ಡಾ. ಅಬ್ದುಲ್ ರೆಹಮಾನ್ ನನ್ನು ಎನ್ ಐಎ ಬಂಧಿಸಿತ್ತು. ನಂತರ ಈತನ ತಂಡದಲ್ಲಿದ್ದ ಮೊಹಮ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸೀರ್ ನನ್ನು ಹತ್ತು ತಿಂಗಳ ಹಿಂದೆ ಬಂಧಿಸಲಾಗಿತ್ತು.

2021ರ ಏಪ್ರಿಲ್ 1 ರಂದು ಈ ಇಬ್ಬರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಕಳೆದ ತಿಂಗಳು ಮೊಹಮ್ಮದ್ ತೌಕೀರ್ ನನ್ನು ಬಂಧಿಸಲಾಗಿತ್ತು. ಈತ ನೀಡಿದ ಮಾಹಿತಿ ಆಧಾರದ ಮೇಲೆ ಇದೀಗ ಮುನ್ನಾನನ್ನು ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com