ಕಾರಂತ್ ಲೇಔಟ್ ಭೂಮಿ ನೀಡಿಕೆ ರೈತರಿಗೆ ಪರಿಹಾರ ಪ್ರಮಾಣಪತ್ರ
ಕಾರಂತ್ ಲೇಔಟ್ ಭೂಮಿ ನೀಡಿಕೆ ರೈತರಿಗೆ ಪರಿಹಾರ ಪ್ರಮಾಣಪತ್ರ

ಶಿವರಾಮ ಕಾರಂತ್ ಲೇಔಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಅರ್ಹತಾ ಪ್ರಮಾಣ ಪತ್ರ ವಿತರಣೆ

ಶಿವರಾಮ ಕಾರಂತ್ ಲೇಔಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಹಾರ (ಅರ್ಹತಾ) ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಬೆಂಗಳೂರು: ಶಿವರಾಮ ಕಾರಂತ್ ಲೇಔಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರಿಹಾರ (ಅರ್ಹತಾ) ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಯಲಹಂಕ ತಾಲೂಕಿನ ತಮ್ಮ ಗ್ರಾಮಗಳಲ್ಲಿ ಗುರುವಾರ ಮೊದಲ ಬ್ಯಾಚ್‌ನ ‘ಅರ್ಹತಾ ಪ್ರಮಾಣ ಪತ್ರ’ಗಳನ್ನು ಬಿಡಿಎ ಅಧಿಕಾರಿಗಳು ಹಸ್ತಾಂತರಿಸಿದರು. ಬಿಡಿಎದ ಭೂಸ್ವಾಧೀನ ಕೋಶದ ಜಿಲ್ಲಾಧಿಕಾರಿ ಡಾ.ಎ.ಸೌಜನ್ಯ ನೇತೃತ್ವದ ಬಿಡಿಎ ತಂಡ ಕಲ್ತಮ್ಮನಹಳ್ಳಿ ಮತ್ತು ಗಾಣಿಗರಹಳ್ಳಿಗೆ ಭೇಟಿ ನೀಡಿ ಭೂಮಿ ಕಳೆದುಕೊಂಡ 22 ಮಂದಿ ರೈತರಿಗೆ ಪ್ರಮಾಣ ಪತ್ರ ವಿತರಿಸಿತು. ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪರಿಹಾರ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡಿದ 'ನಮ್ಮ ಲೇಔಟ್‌ಗಳಿಗಾಗಿ ತಮ್ಮ ಭೂಮಿಯನ್ನು ಕಳೆದುಕೊಂಡವರು ನಗದು ಪಾವತಿ ಅಥವಾ 40:60 ಪರಿಹಾರ ಒಪ್ಪಂದಕ್ಕೆ ಅರ್ಹರಾಗಿರುತ್ತಾರೆ, ಇದರಲ್ಲಿ ಅವರು ಒಪ್ಪಿಸಿದ ಪ್ರತಿ ಎಕರೆ ಭೂಮಿಗೆ 40% ಅಭಿವೃದ್ಧಿ ಹೊಂದಿದ ಭೂಮಿಯನ್ನು (9,583 ಚದರ ಅಡಿ) ಪಡೆಯುತ್ತಾರೆ. ಈ ಪ್ರಮಾಣ ಪತ್ರವು ಬಹುತೇಕ ಗ್ಯಾರಂಟಿ ಕಾರ್ಡ್‌ನಂತಿದ್ದು, ನಾವು ಶೀಘ್ರದಲ್ಲೇ ಸೈಟ್ ಹಂಚಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ಅವರಿಗೆ ಆದ್ಯತೆ ನೀಡಿ ಪರಿಹಾರ ನೀಡಲಾಗುತ್ತದೆ ಎಂದು ಬಿಡಿಎ ಅಧಿಕಾರಿ ಸೌಜನ್ಯ ಹೇಳಿದರು. 

ಇದೇ ವಿಚಾರವಾಗಿ ಮಾತನಾಡಿದ ಸುಪ್ರೀಂಕೋರ್ಟ್ ಸಮಿತಿಯ ಸದಸ್ಯ ಜಯಕಾರ್ ಜೆರೋಮ್ ಅವರು, ಈ ಪ್ರಮಾಣಪತ್ರದಲ್ಲಿ ಭೂಮಿ ಕಳೆದುಕೊಂಡವರ ಹೆಸರು, ಕ್ರಮಸಂಖ್ಯೆ, ಗ್ರಾಮ, ಹಸ್ತಾಂತರಿಸಿದ ಜಮೀನಿನ ವಿಸ್ತೀರ್ಣ ಮತ್ತು ಭವಿಷ್ಯದಲ್ಲಿ ನೀಡಲಾಗುವ ಅಭಿವೃದ್ಧಿಪಡಿಸಿದ ಭೂಮಿಯ ಪ್ರಮಾಣದ ಎಲ್ಲ ಮಾಹಿತಿ ಇದೆ. ಲೇಔಟ್ ರಚನೆಯಾದ ನಂತರ ಒಂದು ಎಕರೆಗೆ ಪರಿಹಾರವಾಗಿ ನೀಡಲಾದ ಭೂಮಿ ಮೂರು 60x40 ಚದರ ನಿವೇಶನಗಳನ್ನು ಮತ್ತು 30x40 ಚದರ ನಿವೇಶನವನ್ನು ಹೊಂದಿರಬಹುದು. ಭೂಮಾಲೀಕರು ಕೇವಲ ಒಂದು ನಿವೇಶನವನ್ನು ಮಾರಾಟ ಮಾಡಿ ಉತ್ತಮ ಹಣವನ್ನು ಪಡೆಯಬಹುದು ಮತ್ತು ಉಳಿದದ್ದನ್ನು ಉಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.

3546 ಎಕರೆಗಳಲ್ಲಿ ಸುಮಾರು 2,200 ಎಕರೆಗೆ ಪ್ರಮಾಣಪತ್ರ ರೂಪಿಸಲಾಗಿದೆ (ಪರಿಹಾರ). ಒಂದು ತಿಂಗಳಲ್ಲಿ ಪ್ರಮಾಣ ಪತ್ರ ನೀಡಿಕೆಯನ್ನು ಪೂರ್ಣಗೊಳಿಸಲಿದ್ದೇವೆ. ಈಗಾಗಲೇ 1,200 ಎಕರೆಯನ್ನು ಸ್ವಾಧೀನಪಡಿಸಿಕೊಂಡು ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಿದ್ದೇವೆ. ಭೂ ಪರಿಹಾರಕ್ಕೆ ಒಪ್ಪಿಗೆ ನೀಡಿದ ರೈತರಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುವುದು ಎಂದು ಅವರು ಹೇಳಿದರು. 
 

Related Stories

No stories found.

Advertisement

X
Kannada Prabha
www.kannadaprabha.com