ಬಗೆಹರಿದ ಅಮೆಜಾನ್ ಕಳ್ಳತನ ಪ್ರಕರಣ: 1.5 ಕೋಟಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಕೋಲಾರ ಪೊಲೀಸರ ವಶಕ್ಕೆ

ಅಮೆಜಾನ್ ಸಂಸ್ಥೆಗೆ ಸೇರಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಲಾಗಿದ್ದ ಕ್ಯಾಂಟರ್ ವಾಹನ ನಾಪತ್ತೆಯಾಗಿದ್ದು, ವಾಹನದ ಚಾಲಕ ಈ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ದೂರು ನೀಡಲಾಗಿತ್ತು. 
ಕೋಲಾರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್  ದೆಕ್ಕ ಕಿಶೋರ್ ಬಾಬು
ಕೋಲಾರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್  ದೆಕ್ಕ ಕಿಶೋರ್ ಬಾಬು

ಕೋಲಾರ: ಕೋಲಾರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದೆಕ್ಕ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ಕೋಲಾರ ಪೊಲೀಸರು ಅತಿ ದೊಡ್ಡ ವಂಚನೆ ಜಾಲವನ್ನು ಬಯಲಿಗೆಳೆದಿದ್ದು, 1.5 ಕೋಟಿ ರೂ.ಗೂ ಅಧಿಕ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕಿಶೋರ್ ಬಾಬು ತಿಳಿಸಿದ್ದಾರೆ.

ಅಕ್ಟೋಬರ್ 30ರಂದು ನಿಗೊ ಟ್ರಾವೆಲ್ಸ್ ಕಂಪನಿಯ ಮ್ಯಾನೇಜರ್ ಸುಧಾಕರ್ ಎಂಬುವವರು ಅಮೆಜಾನ್ ಸಂಸ್ಥೆಗೆ ಸೇರಿದ ಎಲೆಕ್ಟ್ರಾನಿಕ್ ವಸ್ತುಗಳನ್ನು ತುಂಬಲಾಗಿದ್ದ ಕ್ಯಾಂಟರ್ ವಾಹನ ನಾಪತ್ತೆಯಾಗಿದ್ದು, ವಾಹನದ ಚಾಲಕ ಈ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ದೂರು ನೀಡಿದ್ದರು. 

ಅಮೆಜಾನ್ ಸಂಸ್ಥೆಯ ಎಲೆಕ್ಟ್ರಾನಿಕ್ ವಸ್ತುಗಳ ಸಾಗಾಟದಲ್ಲಿ ನಿಗೊ ಟ್ರಾವೆಲ್ಸ್ ಸಂಸ್ಥೆ ಒಪ್ಪಂದ ಹೊಂದಿತ್ತು. ಕಾಣೆಯಾದ ಕ್ಯಾಂಟರ್ ಚಾಲಕ ಅಸ್ಸಾಂ ಮೂಲದವನಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಪ್ರವೃತ್ತರಾದರು. ಕ್ಯಾಂಟರ್ ಚಾಲಕ ಬತ್ರಲ್ ಹಕ್ ನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸಫಲರಾದರು. ಆತನ ಬಳಿ ಕಳವಾಗಿದ್ದ ವಸ್ತುಗಳೂ ದೊರೆತವು. 

ಸೂಪರಿಂಡೆಂಟ್ ಆಫ್ ಪೊಲೀಸ್ ಕಿಶೋರ್ ಬಾಬು ಮತ್ತು ತಂಡದ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಸೆಂಟ್ರಲ್ ರೇಂಜ್ ಐಜಿಪಿ ಎಂ. ಚಂದ್ರಶೇಖರ್, ಪೊಲೀಸರ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com