ಎರಡು ವರ್ಷಗಳಲ್ಲಿ ರೈಲಿನಲ್ಲಿ ಅಪರಾಧ ಎಸಗಿದ 7,492 ಮಂದಿ ಸೆರೆ: ರೈಲ್ವೇ ಪೊಲೀಸ್ ವಿಭಾಗದ ಶಕ್ತಿ ವಿಶೇಷ ತಂಡಗಳ ಸಾಧನೆ

ಕೊರೊನಾ ಸಮಯದಲ್ಲಿ ವೃದ್ಧ ರೈಲ್ವೇ ಪ್ರಯಾಣಿಕರೊಬ್ಬರಿಗೆ ತುರ್ತಾಗಿ ಕ್ಯಾನ್ಸರ್ ಔಷಧದ ಅಗತ್ಯ ಬಿದ್ದಾಗ ಶಕ್ತಿ ತಂಡದ ಹೆಡ್ ಕಾನ್ಸ್ಟೇಬಲ್ ನಿರ್ಮಲಾ ಮತ್ತು ಕಾನ್ಸ್ಟೇಬಲ್ ಪೆದಿರಾಜು ಅವರು ಆ ಪ್ರಯಾಣಿಕರಿಗೆ ಔಷಧ ತಲುಪಿಸುವಲ್ಲಿ ನೆರವಾಗಿದ್ದರು.
ಪ್ರಯಾಣಿಕ ಕ್ಯಾನ್ಸರ್ ರೋಗಿಗೆ ಅಗತ್ಯ ಔಷಧ ಒದಗಿಸಿ ಮಾನವೀಯತೆಯನ್ನೂ ಮೆರೆದ ಆರ್ ಪಿ ಎಫ್ ಶಕ್ತಿ ತಂಡದ ಮುಖ್ಯ ಪೇದೆ ನಿರ್ಮಲಾ
ಪ್ರಯಾಣಿಕ ಕ್ಯಾನ್ಸರ್ ರೋಗಿಗೆ ಅಗತ್ಯ ಔಷಧ ಒದಗಿಸಿ ಮಾನವೀಯತೆಯನ್ನೂ ಮೆರೆದ ಆರ್ ಪಿ ಎಫ್ ಶಕ್ತಿ ತಂಡದ ಮುಖ್ಯ ಪೇದೆ ನಿರ್ಮಲಾ

ಬೆಂಗಳೂರು: ಕಳೆದ 2 ವರ್ಷಗಳ ಅವಧಿಯಲ್ಲಿ ರೈಲುಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಒಟ್ಟು 7,492 ಮಂದಿಯನ್ನು ಬೆಂಗಳೂರು ರೈಲ್ವೇ ವಿಭಾಗದ ರೈಲ್ವೇ ಪೊಲೀಸ್ ಪಡೆಯಲ್ಲಿನ ವಿಶೇಷ ಶಕ್ತಿ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಬೆಂಗಳೂರು ವಿಭಾಗದಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಶಕ್ತಿ ಚೆನ್ನಮ್ಮ, ಶಕ್ತಿ ಅಬ್ಬಕ್ಕ ಎನ್ನುವ ಎರಡು ವಿಶೇಷ ತಂಡಗಳನ್ನು ರೂಪಿಸಲಾಗಿತ್ತು. ಬೆಂಗಳೂರು, ಮೈಸೂರು, ಹಿಂದೂಪುರ್ ಮತ್ತು ಬಂಗಾರಪೇಟೆ ಮಾರ್ಗದಲ್ಲಿ ಪ್ರಯಾಣಿಸುವ ರೈಲುಗಳ ಮೇಲೆ ಈ ತಂಡ ನಿಗಾ ಇರಿಸಿದೆ.

ಜನವರಿ 2020ರಿಂದ ನವೆಂಬರ್ 2021ರ ಅವಧಿಯಲ್ಲಿ 7,492 ಮಂದಿ ಅಪರಾಧ ಎಸಗಿದವರನ್ನು ಈ ತಂಡಗಳು ಬಂಧಿಸಿವೆ. ಬಂಧಿತರಲ್ಲಿ ಬಹುತೇಕರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. 

ಕೊರೊನಾ ಸಮಯದಲ್ಲಿ ವೃದ್ಧ ರೈಲ್ವೇ ಪ್ರಯಾಣಿಕರೊಬ್ಬರಿಗೆ ತುರ್ತಾಗಿ ಕ್ಯಾನ್ಸರ್ ಔಷಧದ ಅಗತ್ಯ ಬಿದ್ದಾಗ ಶಕ್ತಿ ತಂಡದ ಹೆಡ್ ಕಾನ್ಸ್ಟೇಬಲ್ ನಿರ್ಮಲಾ ಮತ್ತು ಕಾನ್ಸ್ಟೇಬಲ್ ಪೆದಿರಾಜು ಅವರು ಆ ಪ್ರಯಾಣಿಕರಿಗೆ ಔಷಧ ತಲುಪಿಸುವಲ್ಲಿ ನೆರವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com