2024 ಡಿಸೆಂಬರ್ ನೊಳಗೆ ಏರ್ ಪೋರ್ಟ್ ಮೆಟ್ರೋ ಮಾರ್ಗ ರೆಡಿ: 2 ನಿಲ್ದಾಣಗಳ ಮೂಲಸೌಕರ್ಯಕ್ಕಾಗಿ ಬಿಎಂಆರ್ ಸಿಎಲ್ 800 ಕೋಟಿ ರೂ. ವೆಚ್ಚ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗಕ್ಕಾಗಿ ಭೂ ಸ್ವಾಧೀನ ಕೆಲಸ ಪೂರ್ಣಗೊಂಡಿದ್ದು, ಟೆಂಡರ್ ನೀಡುವಿಕೆ  ಅಂತಿಮ ಹಂತದಲ್ಲಿದೆ. ಡಿಸೆಂಬರ್ 2024ರ ವೇಳೆಗೆ ಕೆಆರ್ ಪುರಂ- ವಿಮಾನ ನಿಲ್ದಾಣ ಮಾರ್ಗ ಪೂರ್ಣಗೊಳ್ಳುವ ವಿಶ್ವಾಸವನ್ನು ಬಿಎಂಆರ್ ಸಿಎಲ್ ಹೊಂದಿದೆ.
ಕೆಆರ್ ಪುರಂನಿಂದ ಏರ್ ಪೋರ್ಟ್ ವರೆಗಿನ ಮೆಟ್ರೋ ಮಾರ್ಗದ ನಕ್ಷೆಯ ಚಿತ್ರ
ಕೆಆರ್ ಪುರಂನಿಂದ ಏರ್ ಪೋರ್ಟ್ ವರೆಗಿನ ಮೆಟ್ರೋ ಮಾರ್ಗದ ನಕ್ಷೆಯ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗಕ್ಕಾಗಿ ಭೂ ಸ್ವಾಧೀನ ಕೆಲಸ ಪೂರ್ಣಗೊಂಡಿದ್ದು, ಟೆಂಡರ್ ನೀಡುವಿಕೆ ಅಂತಿಮ ಹಂತದಲ್ಲಿದೆ. ಡಿಸೆಂಬರ್ 2024ರ ವೇಳೆಗೆ ಕೆಆರ್ ಪುರಂ- ವಿಮಾನ ನಿಲ್ದಾಣ ಮಾರ್ಗ ಪೂರ್ಣಗೊಳ್ಳುವ ವಿಶ್ವಾಸವನ್ನು ಬಿಎಂಆರ್ ಸಿಎಲ್ ಹೊಂದಿದೆ.

ಏರ್ ಪೋರ್ಟ್ ಆವರಣದೊಳಗೆ ಎರಡು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ಅದಕ್ಕೆ ಅಂತಿಮ ರೂಪುರೇಷೆಗಳನ್ನು ಇದೀಗ ನೀಡಲಾಗುತ್ತಿದೆ. ಈ ಹಂತದಲ್ಲಿ 2 ಬಿ ಮಾರ್ಗ 38.44 ಕಿಲೋ ಮೀಟರ್ ದೂರ ಹೊಂದಿದೆ. ಹೊರ ವರ್ತುಲ ರಸ್ತೆ ಮಾರ್ಗದೊಂದಿಗೆ ಈ ಯೋಜನೆಗೆ 14, 788 ಕೋಟಿ ರೂ. ಅನುದಾನ ನೀಡಲು 2021 ಏಪ್ರಿಲ್ ನಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.

ಏರ್ ಪೋರ್ಟ್ ಸಿಟಿ ಮೆಟ್ರೋ ನಿಲ್ದಾಣ ಭಾಗಶ: ಎಲಿವೆಟೆಡ್ ಮತ್ತು ಭಾಗಶ: ಗ್ರೇಡ್ ನಲ್ಲಿರುತ್ತದೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಮೆಟ್ರೋ ನಿಲ್ದಾಣ, ಭೂಗತ ನಿಲ್ದಾಣವಾಗಿರಲಿದೆ. ಡಿಸೆಂಬರ್ 2024ರೊಳಗೆ ಇದು ಪೂರ್ಣಗೊಳ್ಳುವ ವಿಶ್ವಾಸದಲ್ಲಿದ್ದೇವೆ. ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಹೈದ್ರಾಬಾದ್ ಮೂಲದ ನಾಗಾರ್ಜುನ ನಿರ್ಮಾಣ ಕಂಪನಿ ಕಡಿಮೆ ಪೈನಾಶಿಯಲ್ ಬಿಡ್ಡರ್ ಆಗಿ ಹೊರಹೊಮ್ಮಿದೆ. ಈ  ಮಾರ್ಗದಲ್ಲಿ ಬರುವ ಎರಡು ಮೆಟ್ರೋ ನಿಲ್ದಾಣಗಳಿಗಾಗಿ ಬಿಎಂಆರ್ ಸಿಎಲ್ 800 ಕೋಟಿ ವೆಚ್ಚ ಮಾಡಲಿದೆ. ಇದನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಮರುಪಾವತಿಸುತ್ತದೆ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್  ಯಶವಂತ್ ಚವಾಣ್ ತಿಳಿಸಿದ್ದಾರೆ.

ಏರ್ ಪೋರ್ಟ್ ಮಾರ್ಗದಲ್ಲಿ ಬೆನ್ನಿಗಾನಹಳ್ಳಿ, ಹೊರಮಾವು, ಹೆಚ್ ಆರ್ ಬಿಆರ್ ಲೇಔಟ್, ಕಲ್ಯಾಣ್ ನಗರ, ಹೆಚ್ ಬಿಆರ್ ಲೇಔಟ್,. ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೋಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟ ಹಲಸೂರು, ದೊಡ್ಡ ಜಾಲ, ಏರ್ ಪೋರ್ಟ್ ಸಿಟಿ ಮತ್ತು ಕೆಐಎ ಟರ್ಮಿನಲ್ ಸೇರಿದಂತೆ 17 ಮೆಟ್ರೋ ನಿಲ್ದಾಣಗಳು ಬರಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com