ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ: ಸ್ವಂತ ಮಗನನ್ನೇ ಇರಿದು ಕೊಂದ ಕುಡುಕ ತಂದೆ!
ಕ್ಷುಲ್ಲಕೆ ವಿಚಾರಕ್ಕೆ ಮಾತಿನ ಚಕಮಕಿ ನಡೆಸಿ ಕೋಪಗೊಂಡು ಕುಡುಕ ತಂದೆಯೊಬ್ಬ ತನ್ನ ಸ್ವಂತ ಮಗನನ್ನೇ ಇರಿದು ಹತ್ಯೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೆಹೆಚ್'ಬಿ ಕಾಲೋನಿಯಲ್ಲಿ ಸೋಮವಾರ ನಡೆದಿದೆ.
Published: 12th October 2021 09:35 AM | Last Updated: 12th October 2021 12:16 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕ್ಷುಲ್ಲಕೆ ವಿಚಾರಕ್ಕೆ ಮಾತಿನ ಚಕಮಕಿ ನಡೆಸಿ ಕೋಪಗೊಂಡು ಕುಡುಕ ತಂದೆಯೊಬ್ಬ ತನ್ನ ಸ್ವಂತ ಮಗನನ್ನೇ ಇರಿದು ಹತ್ಯೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೆಹೆಚ್'ಬಿ ಕಾಲೋನಿಯಲ್ಲಿ ಸೋಮವಾರ ನಡೆದಿದೆ.
ಸಂತೋಷ್ ಹತ್ಯೆಯಾದ ಯುವಕನಾಗಿದ್ದಾನೆ. ಆರೋಪಿಯಾದ ಗುರುರಾಜ್ (58) ಚಾಲನಾ ತರಬೇತಿ ಶಾಲೆಯ ಮಾಲೀಕನಾಗಿದ್ದಾನೆ.
ಇದನ್ನೂ ಓದಿ: ಲಿಖಿತ್ ಕೊಲೆ ಪ್ರಕರಣ ಬೇಧಿಸಿದ ಎಚ್ಎಎಲ್ ಪೊಲೀಸರು: 8 ಗಂಟೆಯೊಳಗೆ ಮೂವರ ಬಂಧನ
ಆರೋಪಿ ಗುರುರಾಜ್ ಪ್ರತಿದಿನ ರಾತ್ರಿ ಮನೆಯಲ್ಲಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಈ ವಿಚಾರಕ್ಕೆ ನಿನ್ನೆ ಅಪ್ಪ ಹಾಗೂ ಮಗನ ನಡುವೆ ಮಧ್ಯಾಹ್ನ 2.30ರ ಸುಮಾರಿಗೆ ಮಾತಿನ ಚಕಮಕಿ ನಡೆದಿದೆ. ಈ ಹಂತದಲ್ಲಿ ಕೆರಳಿದ ಆರೋಪಿ ಗುರುರಾಜ್ ಮಗನ ಎದೆಗೆ ಚಾಕುವಿನಿಂದ ಇರಿದಿದ್ದಾನೆ.
ಕೂಡಲೇ ಗಾಯಾಳುವನ್ನು ಆತನ ಸೋದರ ಮಾವ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಸಂತೋಷ್ ಕೊನೆಯುಸಿರೆಳೆದಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.