ತ್ರಿಶೂಲ ದೀಕ್ಷೆ ವೇಳೆ ಹರಿತ ಕತ್ತಿ ಸ್ವೀಕರಿಸಿ ಪ್ರತಿಜ್ಞೆ ವಿವಾದ: ಪರಿಶೀಲನೆಗೆ ಮುಂದಾದ ಮಂಗಳೂರು ಪೊಲೀಸರು

ಆಯುಧ ಪೂಜೆ ಸಂದರ್ಭದಲ್ಲಿ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹೆಸರಿನಲ್ಲಿ ಹರಿತವಾದ ಶಸ್ತ್ರಗಳನ್ನು ಹಂಚಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸೂಚನೆ ನೀಡಿದ್ದಾರೆ. 
ದೀಕ್ಷೆ ಪಡೆದುಕೊಳ್ಳುತ್ತಿರುವ ಹಿಂದೂ ಪರ ಹೋರಾಟಗಾರರು
ದೀಕ್ಷೆ ಪಡೆದುಕೊಳ್ಳುತ್ತಿರುವ ಹಿಂದೂ ಪರ ಹೋರಾಟಗಾರರು

ಮಂಗಳೂರು: ಆಯುಧ ಪೂಜೆ ಸಂದರ್ಭದಲ್ಲಿ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರು ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹೆಸರಿನಲ್ಲಿ ಹರಿತವಾದ ಶಸ್ತ್ರಗಳನ್ನು ಹಂಚಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸೂಚನೆ ನೀಡಿದ್ದಾರೆ. 

ಆಯುಧ ಪೂಜೆ ಹಿನ್ನೆಲೆಯಲ್ಲಿ ಕದ್ರಿಯ ವಿಶ್ವಹಿಂದೂ ಪರಿಷತ್ ಆವರಣದಲ್ಲಿ ಸಂಘಟನೆಯ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನೀಡಿ, ಶಸ್ತ್ರಗಳಿಗೆ ಪೂಜೆ ನೆರವೇರಿಸಲಾಗಿದೆ. ಬಜರಂಗದಳ ಮುಖಂಡ ರಘು ಸಕಲೇಶಪುರ ಮತ್ತು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಸುಮಾರು 150ಕ್ಕೂ ಹೆಚ್ಚು ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹೆಸರಿನಲ್ಲಿ ಹರಿತ ಕತ್ತಿಯನ್ನು ನೀಡಿರುವ ಪೋಟೋ ತುಣುಕುಗಳು ವೈರಸ್ ಆಗಿದೆ. 

ಅಲ್ಲದೆ, ಶಸ್ತ್ರ ಹಿಡಿಯಲು ಪ್ರೇರಣೆ ನೀಡುವ ರೀತಿ ಪ್ರತಿಜ್ಞೆ ಉಪದೇಶ ಮಾಡಲಾಗಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದೆ. ಸಿಎಂ ಸಮರ್ಥನೆ ಬೆನ್ನಲ್ಲೇ ಹಿಂದೂ ಸಂಘಟನೆ ಮುಖಂಡರು ತಮ್ಮ ಕಾರ್ಯಕರ್ತರಿಗೆ ಶಸ್ತ್ರ ಹಂಚಿದ್ದಾರೆಂಬ ಟೀಕೆಗಳು ವ್ಯಕ್ತವಾಗುತ್ತಿವೆ. 

ಕರಾವಳಿಯಲ್ಲಿ ಮತಾಂತರ ವಿರುದ್ಧ ಜಾಗೃತಿ ಹಾಗೂ ಹೋರಾಟ ಕೈಗೆತ್ತಿಕೊಂಡಿರುವ ಹಿಂದೂ ಸಂಘಟನೆಗಳು ಇದೀಗ ಕಾರ್ಯಕರ್ತರ ಕೈಗೆ ಬಹಿರಂಗವಾಗಿಯೇ ಶಸ್ತ್ರಗಳನ್ನು ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು, ಇದು ಸಂಸ್ಥೆಯಿಂದ ಆಚರಿಸಲ್ಪಡುವ ವಾರ್ಷಿಕ ಕಾರ್ಯಕ್ರಮವಾಗಿದೆ. ಸಾಂಕ್ರಾಮಿಕ ರೋಗ ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಕಾನೂನಿನ ಪ್ರಕಾರವೇ ಕಾರ್ಯಕ್ರವನ್ನು ಆಯೋಜಿಸಲಾಗಿದೆ, ಕಾರ್ಯಕ್ರಮದಲ್ಲಿ ನಾವು ಹೊಸ ಸದಸ್ಯರಿಗೆ ಸಾಂಕೇತಿಕವಾಗಿ 'ತ್ರಿಶೂಲ'ಗಳನ್ನು ನೀಡುತ್ತೇವೆ. ಇದು ಹೊಸ ಕಾರ್ಯಕರ್ತರಿಗೆ ತರಬೇತಿ ಶಿಬಿರವಾಗಿದ್ದು ಅವರಿಗೆ ಇಲ್ಲಿ 'ದೀಕ್ಷೆ' ನೀಡಲಾಗುತ್ತದೆ. ಇದು ಆಯುಧವಲ್ಲ ಮತ್ತು ಅದರಿಂದ ಯಾರಿಗೂ ಹಾನಿ ಮಾಡಲಾಗುವುದಿಲ್ಲ. ನಾವು ಕಾರ್ಯಕ್ರಮವನ್ನು ಸಾರ್ವಜನಿಕ ಸ್ಥಳದಲ್ಲಿ ನಡೆಸಿಲ್ಲ. ತ್ರಿಶೂಲವನ್ನು ಕಾರ್ಯಕರ್ತರಿಗೆ ನೀಡಲಾಗುತ್ತದೆ, ಬಳಿಕ ಸಂಘಟನೆಗಾಗಿ ಕೆಲಸ ಮಾಡಲು ಮತ್ತು ಹೋರಾಡಲು ಅವರನ್ನು ಪ್ರೇರೇಪಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಈ ಹಿಂದೆ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಶರಣ್ ಅವರು "ಗ್ರೆನೇಡ್‌ಗಳು ಅಥವಾ ಬಾಂಬ್‌ಗಳನ್ನು ಬಳಸಿ ದೀಕ್ಷೆಯನ್ನು ನೀಡಿಲ್ಲ, ಆದರೆ" ಧರ್ಮವನ್ನು ರಕ್ಷಿಸಲು ತ್ರಿಶೂಲಗಳನ್ನು ನೀಡಲಾಗಿದೆ ಎಂದು ಹೇಳಿದ್ದರು. 

ವಿವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಸಂಘಟಕರು ಪ್ರತೀವರ್ಷ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ವಿವಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com