ತೋಳಗಳನ್ನು ಬೇಟೆಯಾಡುತ್ತಿರುವ ಮೂವರು ಯುವಕರು- ವಿಡಿಯೋ ವೈರಲ್

 ತೋಳಗಳನ್ನು ಮೂವರು ಯುವಕರು ಬೇಟೆಯಾಡಿ, ಮೃತದೇಹವನ್ನು ಬೈಕ್ ನಲ್ಲಿ ಎಳೆದುಕೊಂಡೊಯ್ಯುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ.
ತೋಳ (ಸಾಂಕೇತಿಕ ಚಿತ್ರ)
ತೋಳ (ಸಾಂಕೇತಿಕ ಚಿತ್ರ)

ಗದಗ: ತೋಳಗಳನ್ನು ಮೂವರು ಯುವಕರು ಬೇಟೆಯಾಡಿ, ಮೃತದೇಹವನ್ನು ಬೈಕ್ ನಲ್ಲಿ ಎಳೆದುಕೊಂಡೊಯ್ಯುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ.

ಗದಗ ಜಿಲ್ಲೆಯ ಶಿರಹಟ್ಟಿಯ ಸೋಗಿಹಾಳ ಗ್ರಾಮದಲ್ಲಿ ಈ ಘಟನೆ ಶುಕ್ರವಾರದಂದು ವರದಿಯಾಗಿದೆ.

ಅರಣ್ಯ ಅಧಿಕಾರಿಗಳು ಯುವಕರ ಬಂಧನಕ್ಕೆ ಶೋಧಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಈ ಯುವಕರ ಸ್ನೇಹಿತ ಶಿವರಾಜ್ ಕುಮಾರ್ ಕುರುಬರ್ (25) ಮೇಲೆ ತೋಳಗಳು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸ್ನೇಹಿತರು ತೋಳಗಳ ಬೇಟೆಗೆ ಮುಂದಾಗಿದ್ದರು.

ಗ್ರಾಮಸ್ಥರ ಪ್ರಕಾರ, ತೋಳಗಳು ದಾಳಿ ನಡೆಸಿದ ಮೂವರ ಪೈಕಿ ಕುರುಬರ್ ಓರ್ವರಾಗಿದ್ದಾರೆ. ತೋಳದ ದಾಳಿಗೆ ಸಿಲುಕಿದ್ದ ಯುವಕ ಕುರುಬರ್ ನ್ನು ಗದಗ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ತೋಳಗಳ ಹತ್ಯೆಗೆ ವನ್ಯಜೀವಿ ಸಂರಕ್ಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಂಧನಕ್ಕೆ ಅಪರಾಧಿಗಳಿಗಾಗಿ ಹಾಗೂ ಮರಣೋತ್ತರ ಪರೀಕ್ಷೆ ನಡೆಸುವುದಕ್ಕಾಗಿ ತೋಳಗಳ ಶವಗಳಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ.

ಈ ಘಟನೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಪರಾಧಿಗಳಿಗಾಗಿ ಹುಡುಕುತ್ತಿದ್ದೇವೆ. ತೋಳಗಳು ಕ್ರೂರಿಯಾಗಿರಬಹುದು, ಆದರೆ ಅವುಗಳನ್ನು ಕೊಂದಿದ್ದು ತಪ್ಪು, ಅದು ಅಮಾನವೀಯ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com