ಎಲ್ಲವೂ ಸರಿಹೋದರೆ ಎಲ್ ಕೆ ಜಿ, ಯುಕೆಜಿ ಆರಂಭ: ಬಿ.ಸಿ. ನಾಗೇಶ್

1 ರಿಂದ 5 ನೇ ತರಗತಿವರೆಗಿನ ಶಾಲೆ ಆರಂಭ ನೋಡಿಕೊಂಡು, ಧೈರ್ಯ ಬಂದರೆ ಪ್ರೈಮರಿ ಎಲ್ ಕೆ ಜಿ, ಯುಕೆಜಿ ಆರಂಭ ಮಾಡುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ.
ಬಿಸಿ.ನಾಗೇಶ್
ಬಿಸಿ.ನಾಗೇಶ್

ಬೆಂಗಳೂರು: 1 ರಿಂದ 5 ನೇ ತರಗತಿವರೆಗಿನ ಶಾಲೆ ಆರಂಭ ನೋಡಿಕೊಂಡು, ಧೈರ್ಯ ಬಂದರೆ ಪ್ರೈಮರಿ ಎಲ್ ಕೆ ಜಿ, ಯುಕೆಜಿ ಆರಂಭ ಮಾಡುತ್ತೇವೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆ ಆರಂಭಿಸುವ ಎಲ್ಲಾ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದರೂ ಶೇ.20 ರಷ್ಟು ಇನ್ನೂ ಸಕ್ಸಸ್ ಆಗಿಲ್ಲ, ಅದನ್ನು ಪೂರ್ಣಗೊಳಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಚೆನ್ನಾಗಿದೆ.ತಾವು ಭೇಟಿ ನೀಡಿದ ಎರಡೂ ಶಾಲೆಯಲ್ಲೂ 504 ಮಕ್ಕಳ ಹಾಜರಾತಿ ಇತ್ತು. ಉತ್ತಮ ಪ್ರತಿಕ್ರಿಯೆ ಇದೆ. ಶಿಕ್ಷಣ ಇಲಾಖೆಯ ಜೊತೆ ಆರ್ ಡಿ ಪಿ ಆರ್ ಇಲಾಖೆಯ ಸಿಬ್ಬಂದಿಯನ್ನ ಬಳಸಿಕೊಂಡು ಮನೆಮನೆಗೆ ಹೋಗಿ ಮಕ್ಕಳನ್ನ ಕರೆತರುವ ಕೆಲಸ ಮಾಡುತ್ತಿದ್ದೇವೆ.ಬಹಳಷ್ಟು ಮಕ್ಕಳನ್ನು ಶಾಲೆಗೆ ಕರೆತರಲು ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.

ದೊಡ್ಡ ಮಕ್ಕಳು ಶಾಲೆಗೆ ಬರುತ್ತಿಲ್ಲ, ಎಲ್ಲಿ ಹೋಗಿದ್ದಾರೆ ಎಂದು ತಿಳಿಯುತ್ತಿಲ್ಲ, ಅವರನ್ನ ಹುಡುಕಿ ಕರೆತರುವ ಪ್ರಯತ್ನ ಮಾಡುತ್ತೇವೆ. ಚಿಕ್ಕಮಗಳೂರಿನಲ್ಲಿ 145 ಮಕ್ಕಳು ಹೊರಗುಳಿದಿದ್ರು, 102 ಮಕ್ಕಳನ್ನ ಕರೆತಂದಿದ್ದೇವೆ ಎಂದು ತಿಳಿಸಿದರು.

ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಲ್ಲ, 6 ರಿಂದ8 ನೇ ತರಗತಿ ವರೆಗೆ ಕೊರತೆ ಇದೆ. ಅದನ್ನು ತುಂಬುವ ಕೆಲಸ ಮಾಡ್ತೇವೆ. 1 ರಿಂದ 5 ನೇ ತರಗತಿವರೆಗಿನ ಶಾಲೆ ಆರಂಭ ನೋಡಿಕೊಂಡು, ಧೈರ್ಯ ಬಂದರೆ ಪ್ರೈಮರಿ ಎಲ್ ಕೆ ಜಿ, ಯುಕೆಜಿ ಆರಂಭ ಮಾಡ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸೇವ್ ದಿ ಚಿಲ್ಡ್ರನ್ಸ್ ಸಂಸ್ಥೆಯಿಂದ ಒಳ್ಳೆಯ ಪ್ರಯತ್ನ ನಡೆಯುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಯ ಬಳಿಯೇ ಶಾಲೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಚಾರಿ ಕಲಿಕಾ ಬಸ್ ಮೂಲಕ ಮಕ್ಕಳ ಕಲಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಗೆ ಸಂಪೂರ್ಣ ಸಹಕಾರ ನೀಡ್ತಿದ್ದಾರೆ. 30 ಸರ್ಕಾರಿ ಶಾಲೆ ಪಡೆದು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಇದೇ ವೇಳೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com