Source : The New Indian Express
ವಿಜಯಪುರ: ಕಳೆದ ಶುಕ್ರವಾರ ವಿಜಯಪುರ ಜಿಲ್ಲೆಯ ಬಳಗನೂರು ಗ್ರಾಮದಿಂದ 32 ವರ್ಷದ ರವಿ ನಿಂಬರಗಿ ಎಂಬುವವರು ನಾಪತ್ತೆಯಾಗಿದ್ದರು. ಇದೀಗ ಆತನ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆಯ ಹಿಂದೆ ಕೋಮು ಧ್ವೇಷ ಹೊಗೆಯಾಡಿದೆ.
ಇದನ್ನೂ ಓದಿ: ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!
ರವಿ ನಿಂಬರಗಿ ಎಂಬುವವರು ಕಳೆದ 5 ವರ್ಷಗಳಿಂದ ಅದೇ ಗ್ರಾಮದ ಮುಸ್ಲಿಂ ಯುವತಿ 24 ವರ್ಷದ ಅಮೀನಾ ಬೇಗಂ ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಆಕೆಯೂ ರವಿಯನ್ನು ಪ್ರೀತಿಸುತ್ತಿದ್ದರು. ಆದರೆ ಯುವತಿಯ ಕುಟುಂಬಕ್ಕೆ ಇವರಿಬ್ಬರ ಪ್ರೇಮ ಸಂಬಂಧ ಸುತಾರಾಂ ಇಷ್ಟವಿರಲಿಲ್ಲ.
ಇದನ್ನೂ ಓದಿ: 14 ವರ್ಷದ ಅಪ್ರಾಪ್ತೆಯನ್ನು ನಡುರಸ್ತೆಯಲ್ಲೇ ಕೊಂದ ಭಗ್ನ ಪ್ರೇಮಿ
ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದರ ಬೆನ್ನಲ್ಲೇ ಅಮೀನಾ ಪೊಲೀಸ್ ಠಾಣೆಗೆ ಬಂದು ತನ್ನ ಕುಟುಂಬದವರು ರವಿಯನ್ನು ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದಳು.
ಇದನ್ನೂ ಓದಿ: ಬೆಂಗಳೂರು: ಮತ್ತೊಬ್ಬನೊಂದಿಗೆ ತನ್ನ ಪ್ರೇಯಸಿಯ ಲವ್ವಿಡವ್ವಿ, ಭಗ್ನ ಪ್ರೇಮಿ ಆತ್ಮಹತ್ಯೆಗೆ ಶರಣು!
ರವಿಯ ಶವ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ. ಕೊಲೆ ಸಂಬಂಧ ಯುವತಿಯ ಸಹೋದರನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಲವ್ ಜಿಹಾದ್ ಶಂಕೆ, ಅಪ್ರಾಪ್ತ ಬಾಲಕನಿಗೆ ಥಳಿತ