ಸೋಮವಾರಪೇಟೆ: ಭಾರತ- ಪಾಕ್ ಕ್ರಿಕೆಟ್ ಪಂದ್ಯ ವೀಕ್ಷಣೆ ವೇಳೆ ಹೃದಯಾಘಾತದಿಂದ ಕ್ರಿಕೆಟ್ ಪ್ರೇಮಿ ಸಾವು
ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ಇರಿಸುವಂತೆ ಮಾಡಿತ್ತು ಭಾನುವಾರದ ಭಾರತ- ಪಾಕ್ ನಡುವಣ ಪಂದ್ಯ.ಭಾರತ ತಂಡ ಗೆದ್ದೇ ತೀರುವುದಾಗಿ ಭಾರತೀಯರು ಮಹದಾಸೆ ಇಟ್ಟುಕೊಂಡಿದ್ದರು.
Published: 25th October 2021 07:27 PM | Last Updated: 25th October 2021 07:29 PM | A+A A-

ಸಾಂದರ್ಭಿಕ ಚಿತ್ರ
ಮಡಿಕೇರಿ: ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ಇರಿಸುವಂತೆ ಮಾಡಿತ್ತು ಭಾನುವಾರದ ಭಾರತ- ಪಾಕ್ ನಡುವಣ ಪಂದ್ಯ. ಈ ಪಂದ್ಯ ವೀಕ್ಷಣೆಯ ಸಂದರ್ಭ ಕ್ರಿಕೆಟ್ ನೋಡುತ್ತಾ ಕುಳಿತ ವ್ಯಕ್ತಿಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಡಿಕೇರಿಯ ಸೋಮವಾರಪೇಟೆ ತಾಲ್ಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ನಲ್ಲಿ ಭಾರತದ ಭವಿಷ್ಯ: ಪ್ರತಿ ಪಂದ್ಯ ಗೆಲ್ಲಲೇಬೇಕಾ?; ಸೋತರೆ ಏನಾಗಲಿದೆ? ಫೈನಲ್ ಗೆ ಹೋಗುತ್ತಾ ಟೀಂ ಇಂಡಿಯಾ?
ಸೋಮವಾರಪೇಟೆಯ ದೊಡ್ಡಮಳ್ತೆ ಗ್ರಾಮದಲ್ಲಿ ಹೃದಯಾಘಾತದಿಂದ ಉದಯ್ (55) ಎಂಬವರು ಸಾವನ್ನಪ್ಪಿದ್ದಾರೆ. ನಿನ್ನೆ ಭಾರತ- ಪಾಕ್ ನಡುವೆ ವಿಶ್ವಕಪ್ ಟಿ-20 ಪಂದ್ಯ ನಡೆದಿತ್ತು. ಮೃತ ಉದಯ್ ಅವರು ಕ್ರಿಕೆಟ್ ಅಭಿಮಾನಿಯಾಗಿದ್ದು ಈ ಹಿಂದೆ ಸ್ಥಳೀಯ ಕ್ರಿಕೆಟ್ ತಂಡಗಳ ಜೊತೆ ಗುರುತಿಸಿಕೊಂಡಿದ್ದರು. ಕ್ರಿಕೆಟ್ ಆಡುವುದೆಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿಯಿತ್ತು ಎಂದು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಬಿಸಿಸಿಐನ ಆ ವ್ಯಕ್ತಿಗೆ 'ಬುದ್ದು' ಪ್ರಶಸ್ತಿ ನೀಡಬೇಕು; ಪಾಕ್ ಜೊತೆ ಟೀಂ ಇಂಡಿಯಾ ಆಡಲೇಬಾರದು: ಸುಬ್ರಮಣಿಯನ್ ಸ್ವಾಮಿ
ಭಾರತ ತಂಡ ಗೆದ್ದೇ ತೀರುವುದಾಗಿ ಭಾರತೀಯರು ಮಹದಾಸೆ ಇಟ್ಟುಕೊಂಡಿದ್ದರು. ಆದರೆ ಪಾಕಿಸ್ತಾನ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದುಕೊಂಡಿದ್ದರು.
ಇದನ್ನೂ ಓದಿ: T20 WC: ಪಾಕ್ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಡೆಗೆ ಐಸಿಸಿ ಶ್ಲಾಘನೆ, ವಿಡಿಯೋ