ಬೆಂಗಳೂರು: ಯಲಹಂಕದಲ್ಲಿ ಡ್ರೈವ್-ಇನ್ ಕೋವಿಡ್ ಲಸಿಕೆ ಸೌಲಭ್ಯಕ್ಕೆ ಉತ್ತಮ ಪ್ರತಿಕ್ರಿಯೆ

ಒಂದು ವಾರದ ಹಿಂದೆ ಆರಂಭವಾದ ಯಲಹಂಕದ ಡಾ.ಅಂಬೇಡ್ಕರ್ ಭವನದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೃಹತ್ ಲಸಿಕೆ ಕೇಂದ್ರದಲ್ಲಿ ಕನಿಷ್ಠ 6,202 ಜನರಿಗೆ ಲಸಿಕೆ ಹಾಕಲಾಗಿದೆ.
ಕಾರಿನಲ್ಲೇ ಕುಳಿತು ಲಸಿಕೆ ಪಡೆಯುತ್ತಿರುವುದು
ಕಾರಿನಲ್ಲೇ ಕುಳಿತು ಲಸಿಕೆ ಪಡೆಯುತ್ತಿರುವುದು

ಬೆಂಗಳೂರು: ಒಂದು ವಾರದ ಹಿಂದೆ ಆರಂಭವಾದ ಯಲಹಂಕದ ಡಾ.ಅಂಬೇಡ್ಕರ್ ಭವನದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೃಹತ್ ಲಸಿಕೆ ಕೇಂದ್ರದಲ್ಲಿ ಕನಿಷ್ಠ 6,202 ಜನರಿಗೆ ಲಸಿಕೆ ಹಾಕಲಾಗಿದೆ.

ಯಲಹಂಕದ ಮೆಗಾ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಮಲ್ಲೇಶ್ವರಂನಲ್ಲಿ ತನ್ನ ಎರಡನೇ ಮೆಗಾ ವ್ಯಾಕ್ಸಿನೇಷನ್ ಕೇಂದ್ರ ತೆರೆಯಲು ಸಜ್ಜಾಗಿದೆ.

ಜನರಿಗೆ ಸುಲಭವಾಗಿ ಕೋವಿಡ್ ಲಸಿಕೆ ದೊರೆಯ ಬೇಕು ಎಂಬ ಉದ್ದೇಶದಿಂದ ಮೆಗಾ ವ್ಯಾಕ್ಸಿನೇಷನ್ ಕೇಂದ್ರ ಆರಂಭಿಸಲಾಗಿದ್ದು, ಈ ಕೇಂದ್ರದಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಎರಡೂ ಲಸಿಕೆ ಲಭ್ಯವಿದೆ. 

ಡಾ. ಅಂಬೇಡ್ಕರ್ ಭವನದಲ್ಲಿ ತೆರೆಯಲಾಗಿರುವ ಕೇಂದ್ರದಲ್ಲಿ ನಿತ್ಯ 900ಕ್ಕೂ ಹೆಚ್ಚು ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಇದು ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ ಮತ್ತು 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಲಸಿಕೆ ನೀಡಲಾಗುತ್ತಿದೆ. 

ಗುರುವಾರವಷ್ಟೇ 798 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಅವರಲ್ಲಿ 711 ಮಂದಿ ಕೋವಿಶೀಲ್ಡ್ ಮತ್ತು 87 ಮಂದಿ ಕೋವಾಕ್ಸಿನ್‌ಗೆ ಆಯ್ಕೆ ಮಾಡಿಕೊಂಡರು. 

ಈ ಕೇಂದ್ರದಲ್ಲಿ ಡ್ರೈವ್-ಇನ್ ವ್ಯಾಕ್ಸಿನೇಷನ್ ಸೌಲಭ್ಯ ಒಂದು ಪ್ರಮುಖ ಆಕರ್ಷಣೆಯಾಗಿದ್ದು, ಹೆಚ್ಚಿನ ಜನ ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. "ಪ್ರತಿ ದಿನ ಕನಿಷ್ಟ 200 ಜನರು ಡ್ರೈವ್-ಇನ್ ಸೌಲಭ್ಯ ಪಡೆಯುತ್ತಿದ್ದಾರೆ. ಲಸಿಕೆ ತೆಗೆದುಕೊಳ್ಳುವಾಗ ಜನರು ತಮ್ಮ ಕಾರುಗಳಲ್ಲಿ ಆರಾಮವಾಗಿ ಕುಳಿತು ಲಸಿಕೆ ಹಾಕಿಸಿಕೊಳ್ಳುತ್ತಾರೆ. ಆರಂಭದಲ್ಲಿ, ನಾವು ಇದಕ್ಕೆ ಉತ್ತಮ ಪ್ರತಿಕ್ರಿಯೆ ಪಡೆಯಬಹುದೆಂದು ನಿರೀಕ್ಷಿಸಿರಲಿಲ್ಲ, ಆದರೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಅನೇಕರು ಲಸಿಕೆಗಾಗಿ ಮುಂದೆ ಬರುತ್ತಿದ್ದಾರೆ. ಎನ್‌ಜಿಒ ಡ್ರೈವ್-ಇನ್ ಗೆ ಬೆಂಬಲ ನೀಡಿ ನಿರ್ವಹಿಸುತ್ತಿದೆ. ಸಿಬ್ಬಂದಿ ಜನಸಂದಣಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಯಲಹಂಕ ವಲಯದ ಆರೋಗ್ಯ ಅಧಿಕಾರಿ ಡಾ ಭಾಗ್ಯಲಕ್ಷ್ಮಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com