ಮಸೀದಿ, ಚರ್ಚ್, ಮಂದಿರ ಶಬ್ದ ಮಾಲಿನ್ಯ ಪರಿಶೀಲನೆ: ಆನಂದ್ ಸಿಂಗ್
ಬೆಂಗಳೂರು ನಗರದಲ್ಲಿರುವ ನಗರ ವ್ಯಾಪ್ತಿಯಲ್ಲಿರುವ ಮಸೀದಿ,ಚರ್ಚ್,ದೇವಸ್ಥಾನಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯದ ಕುರಿತು ಗೃಹ ಇಲಾಖೆ ಸಹಕಾರದಿಂದಿಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಿಸರ ಸಚಿವ ಆನಂದ್ ಸಿಂಗ್ ಭರಸವೆ ನೀಡಿದ್ದಾರೆ.
Published: 20th September 2021 08:05 PM | Last Updated: 20th September 2021 08:05 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ನಗರದಲ್ಲಿರುವ ನಗರ ವ್ಯಾಪ್ತಿಯಲ್ಲಿರುವ ಮಸೀದಿ,ಚರ್ಚ್,ದೇವಸ್ಥಾನಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯದ ಕುರಿತು ಗೃಹ ಇಲಾಖೆ ಸಹಕಾರದಿಂದಿಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಿಸರ ಸಚಿವ ಆನಂದ್ ಸಿಂಗ್ ಭರಸವೆ ನೀಡಿದ್ದಾರೆ.
ಮೇಲ್ಮನೆಯಲ್ಲಿ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರದ ಅಡಿ ನಾವು ಇರುವ ಕಾಯ್ದೆಯ ಪ್ರಕಾರ ಇಲಾಖೆಯಿಂದ ನಿರ್ದೇಶನ ಹೊರಡಿಸಿದ್ದೇವೆ ರಾತ್ರಿ 10 ಬಳಗ್ಗೆ 06 ಗಂಟೆವರೆಗೆ ಧ್ವನಿವರ್ಧಕ ಬಳಕೆ ನಿರ್ಬಂಧ ಇದೆ. ಇಲಾಖೆ ಮಲಗಿಲ್ಲ ಹಲವು ವರ್ಷದಿಂದ ಇದು ನಡೆಯುತ್ತಿದೆ, ಮಾಲಿನ್ಯ ನಿಯಮ ಉಲ್ಲಂಘನೆ ಆಗುತ್ತಿದೆ. ಮಾಲಿನ್ಯ ನಿಯನಮತ್ರಣ ಮಂಡಳಿ ಒಂದರಿಂದಲೇ ನಿಯಂತ್ರಣ ಸಾಧ್ಯವಿಲ್ಲ, ಪೊಲೀಸ್ ಇಲಾಖೆಯೂ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯಿಂದ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.ಆದರೂ ನಮ್ಮ ಇಲಾಖೆ ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇದ್ದಲ್ಲಿ ಕ್ರಮದ ಭರವಸೆ ನೀಡಿದರು.
ಬೆಳಗ್ಗೆ 4-5 ಗಂಟೆಗೆ ಆಜಾನ್ ಕೂಗುತ್ತಾರೆ ಅದನ್ನಿ ನಿರ್ಬಂಧಿಸಿದ್ದೀರಾ? ಮಸೀದಿ, ಮಂದಿರ ಲೌಡ್ ಸ್ಪೀಕರ್ ಗಳಲ್ಲಿ ಅನುಮತಿ ಪಡೆದಿದ್ದೀರಾ ಎಂದು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಪ್ರಶ್ನಿಸಿದರು. ಪರವಾನಗಿ ನಮ್ಮ ವ್ಯಾಪ್ತಿ ಬರಲ್ಲ, ಅದನ್ನು ಪೊಲೀಸ್ ಇಲಾಖೆ ನೋಡಬೇಕು, ಶಬ್ದ ಬಳಕೆ ವ್ಯಾಪ್ತಿ ಮಾತ್ರ ನಮ್ಮದಾಗಲಿದೆ, ಗೃಹ ಇಲಾಖೆಗೆ ಪರಿಶೀಲಿಸಿ ನೋಡಬೇಕು, ಎರಡೂ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಪ್ರವಾಸೋದ್ಯಮಕ್ಕೆ ಬಂಡವಾಳ ಆಕರ್ಷಣೆ
ಮತ್ತೊಂದು ಕಾರ್ಯಕ್ರಮದಲ್ಲಿ ಬಳ್ಳಾರಿಯಲ್ಲಿ ಮಾತನಾಡಿದ ಅವರು, ವಿಷನ್ ಕರ್ನಾಟಕ ಯೋಜನೆಯಡಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡುವ ಚಿಂತನೆ ಸರ್ಕಾರ ಹೊಂದಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂಡವಾಳ ಆಕರ್ಷಿಸಲಾಗುವುದು ಎಂದು ಹೇಳಿದರು. ಕೆಎಸ್‌ಟಿಡಿಯಡಿ ಬರುವ ಹೋಟೆಲ್‌ಗಳನ್ನು ಖಾಸಗಿಯವರಿಗೆ 15ರಿಂದ 30 ವರ್ಷ ಗುತ್ತಿಗೆ ನೀಡುವ ಆಲೋಚನೆ ಹೊಂದಲಾಗಿದೆ. ಈ ಮೂಲಕ ಆರ್ಥಿಕ ಕ್ರೋಡೀಕರಣ ಮಾಡಲಾಗುವುದು. ಬರೀ ಆದಾಯದ ಹಂಚಿಕೆ ಮಾತ್ರ ಮಾಡಿಕೊಳ್ಳಲಾಗುವುದು. ಆಸ್ತಿಯೆಲ್ಲ ಕೆಎಸ್‌ಡಿಸಿ ಹೆಸರಿನಲ್ಲೇ ಇರಲಿದೆ. ಹಾಗಾಗಿ ಇದರಲ್ಲಿ ಆತಂಕಪಡುವುದು ಏನಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಈ ಕಾರ್ಯ ಮಾಡಲಾಗುತ್ತಿದೆ. ಸರ್ಕಾರ ಈ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆಸಲಿದೆ ಎಂದೂ ಆನಂದ್ ಸಿಂಗ್ ಹೇಳಿದ್ದಾರೆ.