ಐವರಿಕೋಸ್ಟ್ ಪ್ರಜೆ ಬಂಧನ: 2.5 ಕೋಟಿ ರೂ. ಮೌಲ್ಯದ ಗಾಂಜಾ ವಶ, ಪೊಲೀಸ್ ತಂಡಕ್ಕೆ 60 ಸಾವಿರ ರೂ. ನಗದು ಬಹುಮಾನ ಘೋಷಣೆ

ಶಾಂಪೇನ್ ಬಾಟಲ್​ಗಳಲ್ಲಿ ಎಂಡಿಎಂ ಕಿಸ್ಟಲ್ ಪೌಡರ್ ತುಂಬಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರಿಕೋಸ್ಟ್ ದೇಶದ ಪ್ರಜೆಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ‌.
2.5 ಕೋಟಿ ಮೌಲ್ಯದ ಗಾಂಜಾ ವಶ
2.5 ಕೋಟಿ ಮೌಲ್ಯದ ಗಾಂಜಾ ವಶ

ಬೆಂಗಳೂರು: ಶಾಂಪೇನ್ ಬಾಟಲ್​ಗಳಲ್ಲಿ ಎಂಡಿಎಂ ಕಿಸ್ಟಲ್ ಪೌಡರ್ ತುಂಬಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರಿಕೋಸ್ಟ್ ದೇಶದ ಪ್ರಜೆಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ‌.

28 ವರ್ಷದ ದೋಸ್ಸೋ ಖಲೀಫಾ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 2.5 ಕೋಟಿ ಮೌಲ್ಯದ 2.5 ಕೆ.ಜಿ. ಮೌಲ್ಯದ ಡ್ರಗ್ಸ್, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದ ಖಲೀಫಾ ಕಳೆದ ಐದು ವರ್ಷಗಳ ಹಿಂದೆ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದಿದ್ದನು. ಡ್ರಗ್ಸ್ ದಂಧೆಕೋರರ ಸಂಪರ್ಕ ಸಾಧಿಸಿ ನಿರಂತರವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೊಪಿ ವಿರುದ್ದ 2018ರಲ್ಲಿ ಬಾಗಲೂರು ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿಗಳು, ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಎಂಡಿಎಂಎ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಇನ್ಸ್​ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ‌.

ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಪ್ರತಿಕ್ರಿಯಿಸಿ, ಬಂಧಿತ ಆರೋಪಿ ನಗರದಲ್ಲಿ‌ ನಡೆಯುವ ಹೈ-ಎಂಡ್ ಪಾರ್ಟಿಗಳ ಪ್ರಮುಖ ಡ್ರಗ್ಸ್ ಪೆಡ್ಲರ್​ಗಳಿಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ. ಗೋವಾದ ಡ್ರಗ್ಸ್ ಪೆಡ್ಲರ್​​ ರೊಂದಿಗೆ ಸಂಪರ್ಕ ಸಾಧಿಸಿ ಅಲ್ಲಿ ಶಾಂಪೇನ್ ಬಾಟಲ್​ಗಳಲ್ಲಿ ಎಂಎಡಿಎಂ ಕ್ರಿಸ್ಟಲ್ ಪೌಡರ್ ತುಂಬಿ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ. ಬೆಂಗಳೂರು, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ನಿರಂತರವಾಗಿ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು. ಸದ್ಯ ಆರೋಪಿಯ ಸಂಪರ್ಕದಲ್ಲಿವರ ಶೋಧ ಕಾರ್ಯ ಮುಂದುವರೆದಿದೆ ಎಂದರು.

60 ಸಾವಿರ ನಗದು ಬಹುಮಾನ ಘೋಷಣೆ
ಇದೇ ವೇಳೆ ಗಾಂಜಾ ಹಗರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸರ ತಂಡಕ್ಕೆ ನಗರ ಪೊಲೀಸ್ ಆಯುಕ್ತ ನಗದು ಬಹುಮಾನ ಘೋಷಣೆ ಮಾಡಿದ್ದಾರೆ. ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ 60 ಸಾವಿರ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com