ಕಲಬುರಗಿ: ನಾಯಿ ವಿಚಾರಕ್ಕೆ ಜಗಳ, ಭೀಕರ ಕೊಲೆಯಲ್ಲಿ ಅಂತ್ಯ
ವ್ಯಕ್ತಿ ಓರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯ ಹೈಕೋರ್ಟ್ ಮುಂಭಾಗದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
Published: 24th September 2021 04:46 PM | Last Updated: 24th September 2021 04:46 PM | A+A A-

ಸಾಂದರ್ಭಿಕ ಚಿತ್ರ
ಕಲಬುರಗಿ: ವ್ಯಕ್ತಿ ಓರ್ವನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯ ಹೈಕೋರ್ಟ್ ಮುಂಭಾಗದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
35 ವರ್ಷದ ಗುರುರಾಜ್ ಕುಲಕರ್ಣಿ ಕೊಲೆಯಾದವರು. ಪವನ್ ಜಹಾಗೀರದಾರ್ ಕೊಲೆ ಮಾಡಿದ ಆರೋಪಿ.
ಗುರುರಾಜ ಅವರು ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ದರು. ಪವನ್, ಪದೇ ಪದೇ ನಾಯಿಗೆ ಕಲ್ಲು ಹೊಡೆಯುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಹೀಗಾಗಿ ಕೊಲೆಗೆ ಇದೇ ಕಾರಣವಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಕಲಬುರಗಿ: ಪತ್ನಿ-ಮಗಳನ್ನು ಕೊಂದು ಪಾನಿಪುರಿ ವ್ಯಾಪಾರಿ ಪೊಲೀಸರಿಗೆ ಶರಣು
ಎರಡು ದಿನಗಳ ಹಿಂದೆ ಕೂಡ ಇದೇ ಕಾರಣಕ್ಕೆ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಈ ವಿಚಾರವಾಗಿ ಸಂಧಾನ ಮಾಡಿಕೊಳ್ಳೋಣ ಬಾ ಎಂದು ಪವನ್ ಹಾಗೂ ಆತನ ಗೆಳೆಯರು ಗುರುರಾಜ ಅವರನ್ನು ಕರೆದಿದ್ದರು. ಗುರುವಾರ ರಾತ್ರಿ ಮಾತುಕತೆ ನಡೆದ ಸಂದರ್ಭ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೊಡೆದಾಡುವ ವೇಳೆ ಗುರುರಾಜ ಮೇಲೆ ಪವನ್ ಕಲ್ಲಿನಿಂದ ಹಲ್ಲೆ ಮಾಡಿದ. ತೀವ್ರ ರಕ್ತಸ್ರಾವದಿಂದ ಗುರುರಾಜ ಸ್ಥಳದಲ್ಲೇ ಮೃತಪಟ್ಟರು' ಎಂದು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.