The New Indian Express
ಬೆಂಗಳೂರು: ನಗರದ ಕೆ ಎಸ್ ಐ ಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಶಿರೀಶ್ ಗೋವರ್ಧನ್ ರವರಿಗೆ ಎನ್ ಎಸ್ ಎಸ್ (ನ್ಯಾಷನಲ್ ಸೋಷಿಯಲ್ ಸರ್ವಿಸ್) ಪ್ರಶಸ್ತಿ ದೊರಕಿದೆ. ರಕ್ತದಾನ ಮತ್ತು ಅರಣ್ಯನಾಶ ಇರುದ್ಧ ಹೋರಾಟ ಕಾರ್ಯಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಗೆ ಸಾಧಕರನ್ನು ಗುರುತಿಸುವ ಅವಕಾಶ!
ಈ ಹಿಂದೆ ಎರಡು ಎನ್ ಜಿ ಒ ಗಳಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ 2,000 ಕಿ.ಮೀ ಸೈಕಲ್ ಯಾತ್ರೆ ಮಾಡಿದ್ದು ಶಿರೀಶ್ ಸಾಧನೆಗಳಲ್ಲಿ ಒಂದು. ಸೆ.24ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: ನವದೆಹಲಿ: ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
ಗೋವರ್ಧನ್ ಅವರ ಜೊತೆಗೆ ಮಂಗಳೂರಿನ ಗೋವಿಂದ ದಾಸ್ ಡಿಗ್ರೀ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಎನ್ ಎಸ್ ಎಸ್ ಸ್ವಯಂಸೇವಕಿಯೂ ಆಗಿರುವ ಬಿಂದ್ಯಾ ಅವರೂ ರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಹುಡುಗ ಹುಡುಗಿ ಪ್ರಶಸ್ತಿ ಹಂಚಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಗೋವರ್ಧನ್ ಹೇಳಿದ್ದಾರೆ.