ಹವಾಮಾನ ಬದಲಾವಣೆಯನ್ನು ಪಂಚಾಯತ್ ಮಟ್ಟದಲ್ಲಿಯೇ ನಿಭಾಯಿಸಬೇಕು- ತಜ್ಞರು

ಕೈಗಾರಿಕೆಗಳು ವಿದ್ಯುತ್ ಬಳಕೆ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಹವಾಮಾನ ಬದಲಾವಣೆಯ ಮೌಲ್ಯಮಾಪನದ ಕುರಿತು ಅಂತರ್ ಸರ್ಕಾರಿ ಸಮಿತಿಯ ವರದಿಗಳ ಸಹ ಲೇಖಕರು ಆಗಿರುವ ಐಐಎಸ್ ಸಿ ಸುಸ್ಥಿರ ತಂತ್ರಜ್ಞಾನ ಕೇಂದ್ರದ ನಿವೃತ್ತ ಪ್ರೊಫೆಸರ್ ಡಾ.ಎನ್. ಎಚ್. ರವೀಂದ್ರನಾಥ್ ಸಲಹೆ ನೀಡಿದ್ದಾರೆ.
ಡಾ.ಎನ್.ಹೆಚ್. ರವೀಂದ್ರನಾಥ್
ಡಾ.ಎನ್.ಹೆಚ್. ರವೀಂದ್ರನಾಥ್

ಬೆಂಗಳೂರು: ಹವಾಮಾನ ಬದಲಾವಣೆಯನ್ನು ಸ್ಥಳೀಯ ಮಟ್ಟದಲ್ಲಿ ನಿಭಾಯಿಸಬೇಕು, ಸರ್ಕಾರದ ಮೇಲೆ ಅವಲಂಬನೆ ಬದಲು ಪ್ರತಿಯೊಬ್ಬರು ನಾಗರಿಕರು ಸರಳ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು, ವಾಹನಗಳ ಬದಲಿಗೆ ನಡೆಯಬೇಕು, ಎಲ್ ಇಡಿ ಮತ್ತಿತರ ವಸ್ತುಗಳನ್ನು ಬಳಸಬೇಕು. ಕಾರ್ಪೋರೇಟ್ ಸಂಸ್ಥೆಗಳು, ಕೈಗಾರಿಕೆಗಳು ವಿದ್ಯುತ್ ಬಳಕೆ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಹವಾಮಾನ ಬದಲಾವಣೆಯ ಮೌಲ್ಯಮಾಪನದ ಕುರಿತು ಅಂತರ್ ಸರ್ಕಾರಿ ಸಮಿತಿಯ ವರದಿಗಳ ಸಹ ಲೇಖಕರು ಆಗಿರುವ ಐಐಎಸ್ ಸಿ ಸುಸ್ಥಿರ ತಂತ್ರಜ್ಞಾನ ಕೇಂದ್ರದ ನಿವೃತ್ತ ಪ್ರೊಫೆಸರ್ ಡಾ.ಎನ್. ಎಚ್. ರವೀಂದ್ರನಾಥ್ ಸಲಹೆ ನೀಡಿದ್ದಾರೆ.

ವಿಶ್ವಸಂಸ್ಥೆಗೆ ಭಾರತ ತನ್ನ ಹವಾಮಾನ ಬದಲಾವಣೆ ತಗ್ಗಿಸುವಿಕೆಯ ಗುರಿಗಳನ್ನು ಇನ್ನೂ ಸಲ್ಲಿಸಿಲ್ಲವಾದರೂ, ಪಂಚಾಯತ್ ಮಟ್ಟದಲ್ಲಿ ಬರ ಮತ್ತು ಪ್ರವಾಹಗಳಿಗೆ ರೂಪಾಂತರ ಮತ್ತು ತಗ್ಗಿಸುವಿಕೆಯ ಯೋಜನೆಗಳ ಅಗತ್ಯವಿದೆ ಎಂದು ಅವರು ಸೂಚಿಸುತ್ತಾರೆ.

ಹವಾಮಾನ ಬದಲಾವಣೆ ನಿಜವೇ? ಜನರಿಗೆ ಇದರ ಬಗ್ಗೆ ಸಾಕಷ್ಟು ಜ್ಞಾನವಿದೆಯೇ?

ಹವಾಮಾನ ಬದಲಾವಣೆ ಧೀರ್ಘ ಅವಧಿಯ ಪ್ರವೃತ್ತಿ. ಭೂಮಿಯು ವರ್ಷದಿಂದ ವರ್ಷಕ್ಕೆ ವ್ಯತ್ಯಾಸದೊಂದಿಗೆ ಜಾಗತಿಕವಾಗಿ ಬಿಸಿಯಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಧೀರ್ಘ ಅವಧಿ ಪ್ರವೃತ್ತಿ ಅಂದರೆ, ಉಷ್ಣಾಂಶ ಹಾಗೂ ಮಳೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತದೆ. ಕಾರ್ಬನ್ ಡೈಆಕ್ಸೈಡ್ (CO2) ಸಾಂದ್ರತೆಯು ವಾತಾವರಣದಲ್ಲಿ ಹೆಚ್ಚಾಗುತ್ತದೆ. ಇದು ಭೂಮಿಯನ್ನು ಬೆಚ್ಚಗಾಗಿಸುತ್ತದೆ. ನಗರಗಳು ವಾಯುಮಾಲಿನ್ಯದ (ಶೇ 80)  ಪ್ರಮುಖ ಜಾಗತಿಕ ಕೇಂದ್ರಗಳು. ಇತರ ರಾಷ್ಟ್ರಗಳಲ್ಲಿ ಚುನಾಯಿತ ಪ್ರತಿನಿಧಿಗಳು, ನಾಗರಿಕರು ಮತ್ತು ಅಧಿಕಾರಿಗಳು ಚೆನ್ನಾಗಿ ಅರಿತಿರುತ್ತಾರೆ ಅಲ್ಲದೇ, ಹವಾಮಾನ ಬದಲಾವಣೆ ಚುನಾವಣೆಯ ಅಜೆಂಡಾವಾಗಿರುತ್ತದೆ. ಆದರೆ, ಇಲ್ಲಿ ಎಷ್ಟು ಮಂದಿ ಕಾರ್ಪೋರೇಟರ್ ಗಳು, ಶಾಸಕರು, ಸಂಸದರು, ಸಚಿವರಿಗೆ ಹವಾಮಾನ ಬದಲಾವಣೆ ಬಗ್ಗೆ ಗೊತ್ತು, ಅವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ  ನಾವು ಕೇಳಬೇಕಾಗಿದೆ. ಅನೇಕ ನಾಗರಿಕರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ, 

ನಾವು ಏನು ಮಾಡಬಹುದು? ಅಭಿವೃದ್ಧಿ ಮಾದರಿಯಲ್ಲಿ ಏನಾದರೂ ದೋಷವಿದೆಯೇ?

ಅಭಿವೃದ್ಧಿ ಮತ್ತು ಸಂಪನ್ಮೂಲಗಳ ಬಳಕೆ ತಪ್ಪಲ್ಲ, ಸರಳ ಜೀವನ ಶೈಲಿಯ ಬದಲಾವಣೆಯ ಅಗತ್ಯವಿದೆ. ಯುವ ಜನಾಂಗ ಸಾಕಷ್ಟು ಮಾಡಬಹುದಾಗಿದೆ. ನೀರು ಮತ್ತು ಕಾಗದವನ್ನು ಸಂರಕ್ಷಿಸಿ, ಮರುಬಳಕೆ ಮಾಡಬೇಕು ಮತ್ತು ಪರಿಣಾಮಕಾರಿಯಾಗಿ ಬಳಸಬೇಕು, ಶಾಲಾ, ಕಾಲೇಜುಗಳಿಗೆ ಸಾರ್ವಜನಿಕ ಸಾರಿಗೆ ಬಳಸಬೇಕು, ವಿದ್ಯುಚ್ಛಕ್ತಿಯನ್ನು ಪರಿಣಾಮಕಾರಿಯಾಗಿ ಬಳಸುವ ಸಂಸ್ಕೃತಿ ಮನೆಗಳು, ಶಾಲೆ/ಕಾಲೇಜುಗಳಿಂದಲೂ ಬರಬೇಕು. ಎಲ್ಲಾ ಸರ್ಕಾರಿ, ವಾಣಿಜ್ಯಾತ್ಮಕ ಹಾಗೂ ಕೈಗಾರಿಕಾ ಕಟ್ಟಡಗಳು, ಮಾಲ್ ಗಳು ವಿದ್ಯುತ್ ಚಕ್ತಿ ಬಳಕೆ ಬಗ್ಗೆ ಮೇಲ್ವಿಚಾರಣೆ ಮಾಡಬೇಕು, ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್ ಶಕ್ತಿ ಬಳಕೆಯನ್ನು ಶೇಕಡಾ 50 ಕ್ಕೆ ತಗ್ಗಿಸುವಂತಹ ಗುರಿಗಳನ್ನು ಇಟ್ಟುಕೊಳ್ಳಬೇಕು.

ಹವಾಮಾನ ಬದಲಾವಣೆಯಿಂದ ನಾವು ಏನನ್ನು ನಿರೀಕ್ಷಿಸಬಹುದು?

ಮುಂದಿನ ದಶಕದಲ್ಲಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣವು ಶೇ 15-20ರಷ್ಟು ಹೆಚ್ಚಾಗುತ್ತದೆ ಎಂಬುದನ್ನು ನಾವು ನಿರೀಕ್ಷಿಸಬಹುದು. ಆದ್ದರಿಂದ ಮೇಲ್ಮೆ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ನಷ್ಟಕ್ಕೆ ಕಾರಣವಾಗಬಹುದು. ಹೆಚ್ಚಿನ ತೀವ್ರತೆಯ ಮಳೆಯ ಮುನ್ಸೂಚನೆಯೂ ಇದೆ. ಆದರೆ ಮಳೆಗಾಲದ ದಿನಗಳ ಸಂಖ್ಯೆ ಕಡಿಮೆಯಾಗುತ್ತದೆ. ನಮಗೆ ಉತ್ತಮ ವಿಪತ್ತು ನಿರ್ವಹಣಾ ಸಿಬ್ಬಂದಿ ಬೇಕು. ಹೆಚ್ಚಿದ ಪ್ರವಾಹವನ್ನು ನಿರ್ವಹಿಸಲು ಹೊಸ ತಂತ್ರಗಳು ಅಗತ್ಯವಿದೆ. ಎಲ್ ನಿನೊ ಮತ್ತು ಲಾ ನಿನಾ ಪರಿಣಾಮಗಳಿಂದಾಗಿ ಮುಂದಿನ ಕೆಲವು ವರ್ಷಗಳಲ್ಲಿ ತೀವ್ರ ಬರಗಾಲ ಉಂಟಾಗಬಹುದು ಎಂಬ ಮುನ್ಸೂಚನೆಗಳೂ ಇವೆ.

ಸರ್ಕಾರ ಏನನ್ನು ಕಡೆಗಣಿಸುತ್ತಿದೆ ಎಂದು ನೀವು ಯೋಚಿಸುತ್ತೀರಿ?

ಎಲ್ಲಾ ರಾಜ್ಯ ಸರ್ಕಾರಗಳು ಹವಾಮಾನ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುತ್ತಿವೆ, ಆದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪ್ರಾಯೋಗಿಕ ತಗ್ಗಿಸುವಿಕೆಯ ತಂತ್ರಗಳಿಗಾಗಿ ಸಾಕಷ್ಟು ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಮಾಡುತ್ತಿಲ್ಲ.  ನಾವು ಪಂಚಾಯತ್, ಬ್ಲಾಕ್ ಮತ್ತು ಜಲಾನಯನ ಮಟ್ಟದಲ್ಲಿ ಹವಾಮಾನ-ಸ್ಥಿತಿಸ್ಥಾಪಕ ರೂಪಾಂತರ ಯೋಜನೆಗಳನ್ನು ಸಿದ್ಧಪಡಿಸಬೇಕು. ಪ್ರವಾಹ ಮತ್ತು ಬರಗಾಲದಿಂದಾಗಿ ನಮಗೆ ಹವಾಮಾನ-ಸ್ಥಿತಿಸ್ಥಾಪಕ ಪಂಚಾಯತ್‌ಗಳ ಅಗತ್ಯವಿದೆ. ಸರ್ಕಾರ ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಪ್ರವಾಹ ಮತ್ತು ಬರ ಯೋಜನೆಗಳಿಗಾಗಿ ಹವಾಮಾನ-ಸ್ಥಿತಿಸ್ಥಾಪಕ ಪ್ಯಾಕೇಜ್‌ಗಳ ಅಗತ್ಯವಿದೆ. ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಮನ್ರೇಗಾ ಮತ್ತು ಜಲಾನಯನ ಅಭಿವೃದ್ಧಿಯಂತಹ ಕಾರ್ಯಕ್ರಮಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ಕೆಲಸ ಮಾಡಬೇಕಾಗಿದೆ. 

ಸಿಮೆಂಟ್, ಸತು, ಗಾಜು ಮತ್ತಿತರ ಕಾರ್ಖಾನೆಗಳಿಂದಲೂ ಹವಾಮಾನ ಬದಲಾವಣೆಯಾಗುತ್ತಿದೆ.  ಸೌರ ಶಕ್ತಿ ಬಳಕೆಗಾಗಿ ನೀತಿಯೊಂದನ್ನು ರೂಪಿಸಬೇಕು, ಮೆಟ್ರೋ ವಿಸ್ತರಣೆ ಅಗತ್ಯವಿದೆ ಎಂದು ಡಾ.ಎನ್. ಎಚ್. ರವೀಂದ್ರನಾಥ್  ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com